ಸಂಗೀತದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿದೆ: ವೀರೆಂದ್ರಕುಮಾರ ಕೊಲ್ಲೂರು

ಜಿಲ್ಲೆ

ಚಿತ್ತಾಪುರ: ಸಂಗೀತ ಆಲಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ವೀರೆಂದ್ರಕುಮಾರ ಕೊಲ್ಲೂರು ಹೇಳಿದರು.

ಪಟ್ಟಣದ ಕನಕ ಭವನದಲ್ಲಿ ಸೇಡಂ’ನ ಸರಸ್ವತಿ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಸಂಗೀತ ವೈಭವ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಎಲ್ಲಾ ಕಲೆಗಳಲ್ಲಿ ಸಂಗೀತ ಕಲೆ ಬಹಳ ವಿಶಿಷ್ಟವಾಗಗಿದ್ದು, ಸಂಗೀತ ಎಂದರೆ ಎಲ್ಲರು ಇಷ್ಟಪಡುತ್ತಾರೆ ಹೀಗಾಗಿ ಸಂಗೀತಕ್ಕೆ ಬಹಳ ಮಹತ್ವವಿದೆ ಎಂದರು.

ಸಂಗೀತಕ್ಕೆ ಅದ್ಭುತ ಶಕ್ತಿಯಿದೆ, ಪ್ರತಿಯೊಬ್ಬರು ಸಂಗೀತ ಆಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು. ಸಂಗೀತ ಕಲಾವಿದರು ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಿಯಂತೆ ಇದ್ದಾರೆ, ಅವರನ್ನು ಗುರುತಿಸಿ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದರು.

ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪ್ರಹ್ಲಾದ ವಿಶ್ವಕರ್ಮ, ಪತ್ರಕರ್ತ ಕಾಶಿನಾಥ ಗುತ್ತೇದಾರ, ಶಿಕ್ಷಕ ಸಂಗಮೇಶ ರೋಣದ್ ಮಾತನಾಡಿದರು.

ಸಂಗೀತ ಕಲಾವಿದರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಸಂಗೀತ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಆಕಾಶವಾಣಿ ಕಲಾವಿದರು ಹಾಗೂ ಕಲಾ ತಂಡಗಳು…ಗುರುಶಾಂತಯ್ಯ ಸ್ಥಾವರಮಠ (ಶಾಸ್ತ್ರೀಯ ಸಂಗೀತ), ವಿನಯಕುಮಾರ ಶಿಲ್ಪಿ, ವಿಜಯಲಕ್ಷ್ಮಿ ಕೆಂಗನಾಳ (ವಚನ ಗಾಯನ, ವಿಶೇಷ ಚೇತನ), ಪ್ರಶಾಂತ ಗೊಲ್ಡಸ್ಮಿತ (ಕೊಳಲು ವಾದನ), ಭವಾನಿ ಅವರಾದ, ಲಾವಣ್ಯ ಮಾನೆ, ದಿಶಾ ದಿನಕರ ಪಂಚಾಳ (ಭರತನಾಟ್ಯ), ಶಿವಶರಣಯ್ಯಾ ಸ್ವಾಮಿ ನಿಂಗದಳ್ಳಿ, ಚೇತನ ಬಿದಿಮನಿ (ಜಾನಪದ ಗಾಯನ), ಪವಿತ್ರಾ ವಿಶ್ವನಾಥ ಹಿರೇಮಠ (ಸುಗಮ ಸಂಗೀತ), ಬಸಯ್ಯ ಗುತ್ತೇದಾರ, (ಗಜಲ್ ಗಾಯನ), ಶಿವಗಂಗಾ ಜಾಧವ (ಸುಂದರಿ ವಾದನ), ಪ್ರಶಾಂತ ಕಂಬಾರ, ನಿಶಾ ಪಂಚಾಳ (ದಾಸವಾಣಿ), ಲಕ್ಷ್ಮಣ ಭಜಂತ್ರಿ (ತತ್ವಪದ ಗಾಯನ), ಸ್ವಪ್ನಾ ಸಂಗಪ್ಪಾ (ವಚನ ಗಾಯನ), ಭಾಗೇಶ ಪಂಚಾಳ, ನಿಖಿತಾ ಪ್ರಭು (ಭಕ್ತಿಗೀತೆ), ಪ್ರಕಾಶ ಪೂಜಾರಿ, ಬಸಯ್ಯಾ ಗುತ್ತೆದಾರ, ವೀರಭದ್ರಯ್ಯಾ ಸ್ಥಾವರಮಠ, ಮೌನೇಶ ಪಂಚಾಳ, ಶ್ರೀಕಾಂತ ಮಾನೆ, ಪರಮೇಶ್ವರ ಕಲಶೆಟ್ಟಿ, ಮೌನೇಶ ವಿಶ್ವಕರ್ಮ(ವಾದ್ಯ ಸಹಕಾರ) ಎಲ್ಲಾ ಕಲಾವಿದರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಕಲಾವಿದರು ಸಂಗೀತ ಪ್ರದರ್ಶನ ಮಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಪೂಜಾರಿ, ಪತ್ರಕರ್ತ ನಾಗಯ್ಯ ಸ್ವಾಮಿ ಅಲ್ಲೂರ, ಮೊಗಲಾ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿಜಯಲಕ್ಷ್ಮಿ ಅವರಾದ, ಅಳ್ಳೊಳ್ಳಿ ಶಿಕ್ಷಕ ರಮೇಶ ಗುತ್ತೇದಾರ, ಕಲಾ ಸಂಸ್ಥೆಯ ಅಧ್ಯಕ್ಷ ಮನೋಹರ ವಿಶ್ವಕರ್ಮ, ಬ್ರಹ್ಮ ವಿಷ್ಣು ಮಹೇಶ್ವರ ಸಂಸ್ಥೆಯ ಅಧ್ಯಕ್ಷ ನಾಗೇಶ್ ಬುರಬುರೆ, ಕಾರ್ಯದರ್ಶಿ ಮಲ್ಲಿನಾಥ ಪೂಜಾರಿ, ರವಿ ವಿಶ್ವಕರ್ಮ, ಬಸಯ್ಯ ಗುತ್ತೇದಾರ, ನಾಗಭೂಷಣ, ಶಿವಲಿಂಗ ಕೆಂಗಾಳೆ, ಪ್ರಶಾಂತ ಗೊಲ್ಡಸ್ಮಿತ, ಶಿವಗಂಗಾ ಜಾಧವ, ಶಿಲ್ಪಾ ಪಂಚಾಳ, ಕಾಶಿಪತಿ ವಿಶ್ವಕರ್ಮ ಸೇರಿದಂತೆ ಅನೇಕರು ಇದ್ದರು‌.

ವಿನಯಕುಮಾರ್ ಶಿಲ್ಪಿ ಪ್ರಾರ್ಥಿಸಿದರು, ಶ್ರೀಶೈಲ್ ವಿಶ್ವಕರ್ಮ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *