ಆಯ್ಕೆಯಾದ ಕಾರ್ಮಿಕ ಸಂಘದ ಅಧ್ಯಕ್ಷ, ಸರ್ವ ಪದಾಧಿಕಾರಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು

ವಾಡಿ: ಎಸಿಸಿ ಸಿಮೆಂಟ್ ಕಾರ್ಖಾನೆಯ ಎಐಟಿಯುಸಿ ಕಾರ್ಮಿಕ ಸಂಘದ ಚುನಾವಣೆಯ ಫಲಿತಾಂಶ ತಡರಾತ್ರಿ ಪ್ರಕಟವಾಗಿದೆ. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಕಾರ್ಮಿಕ ವೃಂದದ ವತಿಯಿಂದ ಹೃದಯ ಪೂರ್ವಕ ಅಭಿನಂದನೆಗಳು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಿರೆಂದು ಭಾವಿಸಿರುತ್ತೆವೆ.ತಮ್ಮೆಲ್ಲರ ಜೊತೆಗೆ ಕಾರ್ಮಿಕ ವೃಂದ ಬಹುಮತ ಚಲಾಯಿಸಿ ತಮಗೆ ಆಯ್ಕೆ ಮಾಡಿ ತಮ್ಮ ಜೊತೆಗೆ ಮುಂಬರುವ ದಿನಗಳಲ್ಲಿ ಸದಾಕಾಲ ಇರುತ್ತೆವೆ‌. ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಶರಣಬಸವ ಸಿರೂರಕರ್, ಉಪಾಧ್ಯಕ್ಷರಾಗಿ ಅನೀಲಕುಮಾರ, ಅವಿನಾಶ ರಾಠೋಡ, ದೀಪಕ ಪೂಜಾರಿ, ಕಾರ್ಯದರ್ಶಿಯಾಗಿ ವಿಶಾಲ್ […]

Continue Reading

ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದು ಮಗಳನ್ನೆ ಕೊಲೆ ಮಾಡಿದ ತಂದೆ

ಬೀದರ್: ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದ ತಂದೆ ದೊಣ್ಣೆಯಿಂದ ಹೊಡೆದು ಮಗಳನ್ನು ಬರ್ಬರ ಹತ್ಯೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬರಗೇನ್ ತಾಂಡಾದಲ್ಲಿ ನಡೆದಿದೆ. ಮೋನಿಕಾ ಮೋತಿರಾಮ ಜಾಧವ್ (18) ಕೊಲೆಯಾದ ದುರ್ದೈವಿ. ಮಗಳನ್ನು ಕೊಲೆ ಮಾಡಿದ ತಂದೆ ಮೋತಿರಾಮ ಪರಾರಿಯಾಗಿದ್ದಾನೆ. ಪ್ರೀತಿ-ಪ್ರೇಮದಿಂದ ದೂರವಿರುವಂತೆ ಮಗಳಿಗೆ ತಂದೆ ತಿಳುವಳಿಕೆ ಹೇಳಿದ್ದಾನೆ. ಅಲ್ಲದೆ ನಿನಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡುತ್ತೆನೆ ಎಂದಿದ್ದಾನೆ. ಈ ವೇಳೆ ತಂದೆಯ ಎದುರು ಮಗಳು ಪ್ರೀತಿ ವಿಷಯ ಪ್ರಸ್ತಾಪಿಸಿದ್ದಲ್ಲದೆ ಅವನನ್ನೆ ಮದುವೆ […]

Continue Reading

ಹಿಂದಿ ಕಲಿಯಲು ಮುಂದಾಗಿರುವ ಎಚ್.ಡಿ ಕುಮಾರಸ್ವಾಮಿ: ದಿನಾಲೂ 90 ನಿಮಿಷ ಆನ್‌ಲೈನ್‌ ಪಾಠ

ನವದೆಹಲಿ: ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕೇಂದ್ರ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇನ್ನುಮುಂದೆ ಸಚಿವರು ಹಿಂದಿ ಕಲಿಯುವ ನಿರ್ಧಾರ ಮಾಡಿದ್ದಾರೆ. ಅವರು ವಾರಾಂತ್ಯದಲ್ಲಿ ಬಿಟ್ಟು ದಿನಾಲೂ 90 ನಿಮಿಷಗಳ ಕಾಲ ಹಿಂದಿ ಕಲಿಕೆಯಲು ತೊಡಗಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಸಚಿವರು ಇನ್ನುಮುಂದೆ ಆನ್‌ಲೈನ್‌ ಮೂಲಕ ಹಿಂದಿ ಕಲಿಯಲಿದ್ದಾರೆ. ಹಿಂದಿ ಕಲಿಕೆಗಾಗಿ ಬೋಧಕರನ್ನು ನೇಮಿಸಿಕೊಂಡಿದ್ದು, ಹಿಂದಿ ಬರವಣಿಗೆ ಹಾಗೂ ಸುಲಭವಾಗಿ […]

Continue Reading

ಶಹಾಬಾದ: ಫೆ.10 ರಿಂದ ಸಾಂಸ್ಕೃತಿಕ ಜನೋತ್ಸವ

ಸುದ್ದಿ ಸಂಗ್ರಹ ಶಹಾಬಾದ ಪ್ರಜಾತಂತ್ರದ ಬಗ್ಗೆ ನೇತಾಜಿ ಸುಭಾಶ್ಚಂದ್ರ ಭೋಸ್ ಕನಸು ಕಂಡಿದ್ದರು, ಭಾರತದಲ್ಲಿ ಪರ್ಯಾಯ ವ್ಯವಸ್ಥೆ ಬರಬೇಕಾಗಿದೆ, ಅಂತಹ ವ್ಯವಸ್ಥೆ ಜಾರಿಗೆ ಬರುವ ಉದ್ದೇಶದಿಂದ ಯುವಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೇತಾಜಿ ಅವರ 128ನೇ ಜಯಂತೋತ್ಸವ ನಿಮಿತ್ಯ ಫೆ.10,11 ರಂದು 12ನೇ ಸಾಂಸ್ಕೃತಿಕ ಜನೋತ್ಸವ ಆಯೋಜಿಸಲಾಗಿದೆ ಎಂದು ಎಐಡಿಎಸ್‌ಒ, ಎಐಸಿವೈಒ, ಎಐಎಮ್‌ಎಸ್‌ಎಸ್ ಪರವಾಗಿ ಜಗನ್ನಾಥ ಎಸ್.ಎಚ್. ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಸ್ವಾತಂತ್ರ್ಯಗೊಂಡು 75 ವರ್ಷವಾದರು ನೇತಾಜಿ […]

Continue Reading

ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ದೇವಿಂದ್ರ ಯಾಬಾಳ ಅವರಿಗೆ‌ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಸನ್ಮಾನ

ಚಿತ್ತಾಪುರ: ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ದೇವಿಂದ್ರ ಯಾಬಾಳ ದಿಗ್ಗಾಂವ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಮತ್ತುಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ಖರ್ಗೆ ಅವರು ಸನ್ಮಾನಿಸಿ ಸಿಹಿ ಹಂಚುವ ಮೂಲಕಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣಸಾಲಿ, ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಸಂಜಯ ಬುಳಕರ್, ಮುಖಂಡರಾದ ಶರಣು ಡೋಣಗಾಂವ, ಸುನೀಲ್ ದೊಡ್ಡಮನಿ, ಮಲ್ಲಿಕಾರ್ಜುನ ಹೊನ್ನಪೂರ, ಶಿವಶರಣ ಮಂಗಾ, ಜಗದೀಶ್ ಚವ್ಹಾಣ, ಹಣಮಂತ ಸಂಕನೂರ, ವಿಜಯಕುಮಾರ್ ಯಾಗಾಪೂರ ಸೇರಿದಂತೆಅನೇಕರು ಇದ್ದರು.

Continue Reading

ದೆಹಲಿ ಚುನಾವಣೆ ಫಲಿತಾಂಶ: ವಾಡಿ ಬಿಜೆಪಿ ಕಛೇರಿಯಲ್ಲಿ ವಿಜಯೋತ್ಸವ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ದೆಹಲಿ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮುಖಂಡರು ಪರಸ್ಪರ ಸಿಹಿಹಂಚಿ, ಜಯಘೋಷ ಕೊಗಿ ಸಂಭ್ರಮಿಸಿದರು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಪ್ರಬುದ್ಧ ಮತದಾರರು ದೆಹಲಿ ರಾಜ್ಯದ ಅಭಿವೃದ್ಧಿ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಅರಿತು ಬಿಜೆಪಿ ಪಕ್ಷವನ್ನು ಗೆಲ್ಲಿಸಿದ್ದಾರೆ. ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಿದ ಮತದಾರರು ದೇಶಕ್ಕೆ ಅವರ ನಾಯಕತ್ವದ ಅವಶ್ಯಕತೆ ಇದೆ ಎಂದು ಸಾಬೀತು ಪಡಿಸಿದರು ಎಂದರು. ದೆಹಲಿ ರಾಜ್ಯದಲ್ಲಿ 27 […]

Continue Reading

ವಾಡಿ: ಎಸಿಸಿ ಸಿಮೆಂಟ್ ಕಂಪನಿಯ ಎಐಟಿಯುಸಿ ಟ್ರೇಡ್ ಯೂನಿಯನ್ ಚುನಾವಣೆ ಪ್ರಾರಂಭ

ವಾಡಿ: ಸುಮಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಎಸಿಸಿ ಸಿಮೆಂಟ್ ಕಂಪನಿ ಕಾರ್ಮಿಕ ಸಂಘದ ಚುನಾವಣೆ ಇಂದು ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಯಿತು‌. ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಚುನಾವಣೆಗೊಸ್ಕರ ತುಂಬಾ ಅನುಕೂಲ ಮಾಡಿಕೊಟ್ಟಿದ್ದಕ್ಕೆ ಎಸಿಸಿ ಸಿಮೆಂಟ್ ಕಂಪನಿಯ ಕಾರ್ಮಿಕ ಬಸವರಾಜ ರದ್ದೆವಾಡಿ ತುಂಬು ಹೃದಯದ ಧನ್ಯವಾದಗಳು ತಿಳಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿಧ ಅಭ್ಯರ್ಥಿಗಳು ಹಾಗೂ ಕಾರ್ಮಿಕ ವೃಂದದವರು ಯಾವುದೆ ರೀತಿಯ ಭೇದಭಾವ, ಗೊಂದಲ‌ವಾಗದಂತೆ ಸುಗಮವಾಗಿ ಚುನಾವಣೆ ನಡೆಸಿಕೊಡಬೇಕು ಎಂದು ವಿನಂತಿಸಿದರು.‌

Continue Reading

ಕೆಪಿಎಸ್‌ಸಿ ಪರೀಕ್ಷೆಗೆ ಕಪ್ಪು ಬಾಲ್ ಪೆನ್ ಬಳಕೆ ನಿಷೇಧ, ನೀಲಿ ಬಾಲ್ ಪಾಯಿಂಟ್ ಪೆನ್‌ ಬಳಕೆಗೆ ಸೂಚನೆ

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇನ್ನುಮುಂದೆಕಡ್ಡಾಯವಾಗಿ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ ಬಳಕೆ ಮಾಡಬೇಕು ಎಂದು ಕೆಪಿಎಸ್‌ಸಿ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಈವರೆಗಿನ ಪರೀಕ್ಷೆಗಳಲ್ಲಿ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್‌ನಿಂದ ಪರೀಕ್ಷೆ ಬರೆಯಬೇಕು ಎಂದು ಅಭ್ಯರ್ಥಿಗಳಿಗೆ ಸೂಚಿಸಲಾಗುತ್ತಿತ್ತು. ಸೂಚನೆಯಲ್ಲಿ ಮಾರ್ಪಾಡು ಮಾಡಿ ಫೆ.16 ರಿಂದ ಕೆಪಿಎಸ್’ಸಿ ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ನೀಲಿ ಬಣ್ಣದ ಪೆನ್ ಮಾತ್ರ ಬಳಸಬೇಕು ಎಂದು ಕೆಪಿಎಸ್’ಸಿ ಪ್ರಕಟಣೆಯಲ್ಲಿ ತಿಳಿಸಿದೆ. ಸಾಮಾನ್ಯವಾಗಿ ಬಹುತೇಕ ಎಲ್ಲೆಡೆ ನೀಲಿ ಪೆನ್ ಬಳಕೆಯಲ್ಲಿದೆ. ಆದರೆ […]

Continue Reading

ಗ್ಯಾಸ್ ಸೋರಿಕೆಯಿಂದ ಪದೆ ಪದೆ ಅಗ್ನಿ ಅವಘಡ: ಏಜೆನ್ಸಿ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಪದೆ ಪದೆ ಗ್ಯಾಸ್ ಸೋರಿಕೆಯಿಂದ ಅಗ್ನಿ ಅವಘಡದಲ್ಲಿ ಸಾಕಷ್ಟು ಸಾವು ನೋವುಗಳ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತಿದೆ. ಇದೆ ಮೊದಲ ಬಾರಿಗೆ ಗ್ಯಾಸ್ ಕಂಪನಿ ಹಾಗೂ ಏಜೆನ್ಸಿ ವಿರುದ್ಧ ಬೇಗೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಹಿಂದೆ ಗ್ಯಾಸ್ ಲೀಕ್, ಗ್ಯಾಸ್ ಸ್ಫೋಟಕ್ಕೆ ಯಾವುದೆ ಕೇಸ್ ದಾಖಲಾಗುತ್ತಿರಲಿಲ್ಲ. ಇದೀಗ ಪ್ರೈವೆಟ್ ಗ್ಯಾಸ್ ಕಂಪನಿ ಮಾಲೀಕ ಚೋಟಾ ಸಿಕಂದರ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಎಲ್‌ಎಲ್‌ಬಿ ವಿದ್ಯಾರ್ಥಿನಿ ಜಾಹ್ನವಿ ನೀಡಿದ ದೂರಿನ ಮೇಲೆ ಬೇಗೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. […]

Continue Reading

ಕೋವಿಡ್‌ ನಂತರ ಹಠಾತ್‌ ಸಾವು: ಅಧ್ಯಯನ ನಡೆಸಲು ತಜ್ಞರ ಸಮಿತಿ ರಚನೆಗೆ ಆದೇಶ

ಬೆಂಗಳೂರು: ಕೋವಿಡ್ ನಂತರದ ಕಾಲಘಟ್ಟದಲ್ಲಿ ಎಲ್ಲೆಡೆ ಹಠಾತ್ ಸಾವುಗಳ ಬಗ್ಗೆ ಅಧ್ಯಯನ ನಡೆಸಲು ತಜ್ಞರು ಮತ್ತು ವಿಜ್ಞಾನಿಗಳ ಸಮಿತಿ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಹೃದಯಾಘಾತ, ಹೃದಯಸ್ಥಂಭನ ಸೇರಿದಂತೆ ವಿವಿಧ ಕಾರಣಗಳಿಂದ ವಯಸ್ಸಿನ ಬೇಧವಿಲ್ಲದೆ ಜನ ಹಠಾತ್ ಸಾವನ್ನಪ್ಪುತ್ತಿದ್ದಾರೆ. ಕೋವಿಡ್ ಮತ್ತು ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳಿಂದ ಈ ಸಾವುಗಳು ಸಂಭವಿಸುತ್ತಿರಬಹುದು ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು. ಈ ಬಗ್ಗೆ ಅಧ್ಯಯನ ನಡೆಸಬೇಕು ಎಂಬ ಕೂಗು ಎದ್ದಿತ್ತು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸ್ಪಂದಿಸಿದ್ದಾರೆ. […]

Continue Reading