ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಜೀವ ವಿಮೆಯ 2 ಲಕ್ಷ ರೂ ಹಸ್ತಾಂತರ

ಗ್ರಾಮೀಣ

ಕಾಳಗಿ: ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆಯ ನಾಮನಿರ್ದೇಶಿತ ಅರುಣಕುಮಾರ ಕಡ್ಲಿ ಅವರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಪ್ರವೀಣಕುಮಾರ ಜೆ.ಎಚ್ 2 ಲಕ್ಷ ರೂ. ಚೆಕ್ ವಿತರಿಸಿದರು.

ತಾಲೂಕಿನ ತೆಂಗಳಿ ಗ್ರಾಮದ ಅಣ್ಣೆಮ್ಮ ಅರುಣಕುಮಾರ್ ಕಡ್ಲಿ ಅಸುನಿಗಿದ ಕಾರಣ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ನಾಮನಿರ್ದೇಶಿತ ಅರುಣಕುಮಾರ ಕಡ್ಲಿ ಅವರಿಗೆ 2 ಲಕ್ಷ ರೂ. ಚೆಕ್ ವಿತರಿಸಲಾಯಿತು.

ಬ್ಯಾಂಕ ಖಾತೆ ಹೊಂದಿರುವ ಗ್ರಾಹಕರು ಕೇಂದ್ರ ಸರ್ಕಾರದ ಯೋಜನೆಗಳಾದ ಪಿಎಂಜೆಜೆಬಿವೈ 436 ರೂ. ಮತ್ತು ಪಿಎಂಎಸ್’ಬಿವೈ 20 ರೂ. ವರ್ಷಕ್ಕೆ ಒಟ್ಟು 456 ರೂ ಪಾವತಿಸಿ ನೋಂದಾಯಿಸಿಕೊಳ್ಳಿರಿ.

  • ಪ್ರವೀಣ್ ಕುಮಾರ್
    ಶಾಖಾ ವ್ಯವಸ್ಥಾಪಕರು
    ಕರ್ನಾಟಕ ಗ್ರಾಮೀಣ ಬ್ಯಾಂಕ್ ಟೆಂಗಳಿ

ಈ ಸಂದರ್ಭದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಸಂಗಣ್ಣ ಪಾಟೀಲ, ಅಕೌಂಟೆಂಟ್ ಆನಂದಕುಮಾರ, ಕ್ಯಾಷಿಯರ್ ಜಯಪಾಲ್, ಕ್ಯಾಶ್ವಾಲ್ ವರ್ಕರ್ ಬಸವರಾಜ ಭೈರಿ, ಬಸವರಾಜ ಕಡ್ಲಿ ಇದ್ದರು.

Leave a Reply

Your email address will not be published. Required fields are marked *