ವಾಡಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಕೇಂದ್ರ ಸಚಿವರ ಭರವಸೆ

ಪಟ್ಟಣ

ವಾಡಿ: ಪಟ್ಟಣದ ರೈಲ್ವೆ ನಿಲ್ದಾಣದ ತ್ವರಿತ ಕಾಮಗಾರಿಗೆ ಮತ್ತು ಅಭಿವೃದ್ಧಿಗೆ ಭರವಸೆ ವ್ಯಕ್ತಪಡಿಸಿದ ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಅವರು ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರಿಗೆ ಪತ್ರ ಕಳಿಸಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ಕಲಬುರಗಿ ನಗರಕ್ಕೆ ಆಗಮಿಸಿದ ಕೇಂದ್ರ ರೈಲ್ವೆ ಸಚಿವರನ್ನು ಲೋಕ ಸಭೆಯ ಮಾಜಿ ಸದಸ್ಯ ಡಾ.ಉಮೇಶ ಜಾಧವ ಅವರೊಂದಿಗೆ, ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಹಾಗೂ ಮುಖಂಡ ಸುಭಾಷ್ ವರ್ಮಾ ಅವರೊಂದಿಗೆ ವಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ವಾಡಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಚರ್ಚಿಸಿ ಕೈಗೊಳ್ಳುಬೇಕಾದ ಕಾಮಗಾರಿಗಳ ಪಟ್ಟಿ ಸಲ್ಲಿಸಿದ್ದರು.

ವಾಡಿ ಪಟ್ಟಣವು ತನ್ನದೆ ಆದ ಇತಿಹಾಸ ಹೊಂದಿದೆ, ಪುರಾತನ ರೈಲ್ವೆ ನಿಲ್ದಾಣದಲ್ಲಿ ಇದು ಒಂದಾಗಿದೆ, ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಲ್ಲಿ ಭೇಟಿ ಕೊಟ್ಟಿದ್ದಾರೆ ಎಂದು ವಿವರಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಜಿ ಅವರು ಅಮೃತ್‌ ಭಾರತ್‌ ಸ್ಟೇಷನ್‌ ಸ್ಕೀಮ್‌’ನಲ್ಲಿ ಈ ರೈಲ್ವೆ ನಿಲ್ದಾಣದ ಕಾಮಗಾರಿ ಕೈಗೆತ್ತಿಕೊಂಡಿದ್ದು ತುಂಬಾ ಖುಷಿಯಾಗಿದೆ, ಅದಕ್ಕೆ ತಮ್ಮ ಸಹಕಾರ ಇರುವುದರಿಂದ ಇದು ಸಾಧ್ಯವಾಗಿದೆ. ಆದರೆ ಈ ನಿಲ್ದಾಣ ಅನೇಕ ಸಮಸ್ಯೆಗಳ ತಾಣವಾಗಿದೆ, ಕಾಮಗಾರಿ ವಿಳಂಬದ ಜೊತೆಗೆ ಕಳಪೆಯಾಗುತ್ತಿರುವುದು ಬೇಸರ ಮೂಡಿಸಿದೆ ಇದರ ಬಗ್ಗೆ ತಾವು ಹೆಚ್ಚಿನ ಗಮನ ಕೊಡಿ. ಸಮಸ್ಯೆಗಳ ಪಟ್ಟಿಯನ್ನು ನೀಡುತ್ತಿದ್ದು, ಅವುಗಳನ್ನು ಪರಿಹರಿಸಿ ಎಂದು ಕೇಳಿಕೊಂಡು, ನಿಲ್ದಾಣದ ಸಮಸ್ಯೆಗಳ ಪಟ್ಟಿ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರ ಅಭಿವೃದ್ಧಿ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಆದಷ್ಟೂ ಬೇಗ ನಿಲ್ದಾಣದ ಅಭಿವೃದ್ಧಿಯ ಆಶಾ ಭಾವನೆ ಮೂಡಿದೆ ಎಂದರು.

Leave a Reply

Your email address will not be published. Required fields are marked *