ಬರವಣಿಗೆಯಿಂದ ಸಮಾಜಪರ ಕೆಲಸ ಮಾಡಿದ್ದರು

ಪಟ್ಟಣ

ಚಿತ್ತಾಪುರ: ದಿ.ನಾಗಯ್ಯಸ್ವಾಮಿ ಅಲ್ಲೂರ ಅವರು ಪತ್ರಕರ್ತರಾಗಿ ಬರವಣಿಗೆಯಿಂದ ಸಮಾಜಪರ ಕೆಲಸ ಮಾಡಿದ್ದರು ಎಂದು ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಬಸವರಾಜ ಹೊಟ್ಟಿ ಹೇಳಿದರು.

ತಾಲೂಕಿನ ಅಳ್ಳೊಳ್ಳಿ ಗ್ರಾಮದ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ದಿ. ನಾಗಯ್ಯಸ್ವಾಮಿ ಅಲ್ಲೂರವರ 54ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿ, ಸಾಮರಸ್ಯ, ಪ್ರತಿಭೆಗೆ ಪ್ರೋತ್ಸಾಹಿಸುವ ಮನಸ್ಸು ದಿ.ನಾಗಯ್ಯಸ್ವಾಮಿ ಅಲ್ಲೂರ ಅವರಿಗೆ ಇತ್ತು ಎಂದರು.

ಕಾರ್ಯಕ್ರಮದ ಮೂಲಕ ದಿ.ನಾಗಯ್ಯಸ್ವಾಮಿ ಅಲ್ಲೂರ’ರವರ ಸಾಧನೆಗಳನ್ನು ಸ್ಮರಿಸಿ, ಅವರ ಸೇವೆಗೆ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಸಿದ್ಧಮ್ಮ
ನಾಗಯ್ಯಸ್ವಾಮಿ ಸ್ಥಾವರಮಠ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಿವಪ್ರಸಾದ ಸ್ಥಾವರಮಠ, ಶಿಕ್ಷಣ ಪ್ರೇಮಿ ವೀರಭದ್ರಪ್ಪ ಟೆಂಗಳಿ, ಮುಖಂಡ ಮಹಾದೇವಪ್ಪ ಡೋಣಗಾಂವ, ಶಿಕ್ಷಕರಾದ ಅನುಸೂಯ ಮಡಿವಾಳ, ವಿಜಯಲಕ್ಷ್ಮಿ, ಸ್ವಾತಿ, ಮಂಜುಳಾ, ರೇಖಾ, ಕಾವ್ಯ, ಶಾಂತಮ್ಮ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *