ವಾಡಿ: ಬಿಜೆಪಿ ಕಛೇರಿಯಲ್ಲಿ ಉಪಾಧ್ಯಾಯರ ಸಂಸ್ಮರಣೆ

ವಾಡಿ: ಬಿಜೆಪಿ ಕಛೇರಿಯಲ್ಲಿ ಪಂಡಿತ್ ದಿನ ದಯಾಳ್ ಉಪಾಧ್ಯಾಯರ 56ನೇ ಪುಣ್ಯಸ್ಮರಣೆ ಪ್ರಯುಕ್ತ ಪಂಡಿತ್ ಜಿ ಭಾವಚಿತ್ರಕ್ಕೆ ಮುಖಂಡರು ಪುಷ್ಪನಮನ ಸಲ್ಲಿಸಿದರು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಭಾರತ ಕಂಡ ಅದ್ಭುತ ದಾರ್ಶನಿಕ,ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ, ಸಂಘಟನಕಾರ,ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ಪತ್ರಕರ್ತ ಮತ್ತು ಭಾರತೀಯ ಜನ ಸಂಘದ ಸಂಸ್ಥಾಪಕರಾಗಿದ್ದ ಪಂಡಿತ ದೀನದಯಾಳ ಉಪಾಧ್ಯಾಯರು1968ರ ಫೆಬ್ರವರಿ 11 ರಂದು ನಿಗೂಢ ರೀತಿಯಲ್ಲಿ ಸಾವನಪ್ಪಿದ್ದರು.ಅವರ ಪುಣ್ಯಸ್ಮರಣಾ ದಿನವಾದ ಇಂದು ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿ ಕೃತಜ್ಞತೆಯೊಂದಿಗೆ ಗೌರವಿಸುವುದು […]

Continue Reading

ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹುಲಿ ಅಟ್ಯಾಕ್‌, ವ್ಯಾಘ್ರನ ಬಾಯಿಂದ ರಕ್ಷಿಸಿದ ಸಹೋದ್ಯೋಗಿಗಳು

ಕೋಲ್ಕತ್ತಾ: ಸುಂದರಬನ್ಸ್‌ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹುಲಿ ದಾಳಿ ನಡೆಸಿದ ಘಟನೆ ನಡೆದಿದೆ. ಹುಲಿ ದಾಳಿಗೊಳಗಾದ ಅರಣ್ಯ ಇಲಾಖೆ ನೌಕರನನ್ನು ತಕ್ಷಣ ಸಹೋದ್ಯೋಗಿಗಳು ರಕ್ಷಿಸಿದ್ದಾರೆ. ನೌಕರನನ್ನು ರಕ್ಷಿಸುತ್ತಿರುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸುಂದರಬನ್ಸ್‌ ಅಭಯಾರಣ್ಯದಲ್ಲಿ ಸೋಮವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಯನ್ನು ಅಜ್ಮಲ್ಮರಿ ಅರಣ್ಯಕ್ಕೆ ಅಟ್ಟಲು ಯತ್ನಿಸುತ್ತಿದ್ದರು. ಈ ವೇಳೆ ನೌಕರನ ಮೇಲೆ ಹುಲಿ ದಾಳಿ ಮಾಡಿದೆ.‌ ಎಂಟರಿಂದ ಹತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಯನ್ನು ಮತ್ತೆ ಕಾಡಿಗೆ […]

Continue Reading

ಪ್ರಜಾಪ್ರಭುತ್ವದ ಯಶಸ್ಸಿಗೆ ಪತ್ರಿಕಾ ಸ್ವಾತಂತ್ರ್ಯಅಗತ್ಯ: ಕಂಬಳೇಶ್ವರ ಶ್ರೀ

ಚಿತ್ತಾಪುರ: ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪತ್ರಿಕಾ ಹಾಗೂ ವಾಕ್ ಸ್ವಾತಂತ್ರ್ಯ ಅತ್ಯಗತ್ಯ ಎಂದು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು. ಪಟ್ಟಣದ ಬಜಾಜ್ ಕಾಂಪ್ಲೆಕ್ಸ್’ನಲ್ಲಿ ಪತ್ರಕರ್ತ ಅನಂತನಾಗ ದೇಶಪಾಂಡೆ ಅವರ ವಿಶ್ವವಾಣಿ ದಿನ ಪತ್ರಿಕೆಯ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಇದರಿಂದ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು. ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಪತ್ರಿಕೆಯ ಕಚೇರಿ ಇದ್ದಾಗ ಸುದ್ದಿ ತಲುಪಿಸಲು ಅನುಕೂಲ ಆಗಲಿದೆ, ಈ ನಿಟ್ಟಿನಲ್ಲಿ ವಿಶ್ವವಾಣಿ ವರದಿಗಾರ […]

Continue Reading

ಬುರ್ರ ಕಥೆ ಕಲಾವಿದೆ ಬಸ್ಸಮ್ಮ ಅವರಿಗೆ ಜನಪದ ಲೋಕ ಪ್ರಶಸ್ತಿ ಪ್ರಧಾನ

ಚಿತ್ತಾಪುರ: ಮಹಿಳಾ ಜನಪದ ಲೋಕೋತ್ಸವ ಸಮಾರಂಭದಲ್ಲಿ ರಾಮತೀರ್ಥ ಗ್ರಾಮದ ಬುರ್ರ ಕಥೆ ಕಲಾವಿದೆ ಬಸ್ಸಮ್ಮ ಅವರಿಗೆ ಜನಪದ ಲೋಕತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ರಾಮನಗರದ ಜನಪದ ಲೋಕದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಜನಪದ ಲೋಕೋತ್ಸವ ಸಮಾರಂಭದಲ್ಲಿ ಚಿತ್ತಾಪುರ ತಾಲೂಕಿನ ರಾಮತೀರ್ಥ ಗ್ರಾಮದ ಬುರ್ರ ಕಥೆ ಕಲಾವಿದೆ ಬಸ್ಸಮ್ಮ ಅವರಿಗೆ ಜನಪದ ಲೋಕತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದ […]

Continue Reading

ಪೋಷಕಾಂಶಗಳ ಆಗರವಾದ ದ್ವಿದಳ ಧಾನ್ಯಗಳನ್ನು ಸೇವಿಸಿ: ಡಾ.ಪ್ರಮೋದ ಗುಂಡಗುರ್ತಿ

ಕಲಬುರಗಿ: ತೊಗರಿ ಬೇಳೆ, ಕಡಲೆಕಾಳು ಸೇರಿದಂತೆ ಸುಮಾರು 22 ತರಹದ ದ್ವಿದಳ ಧಾನ್ಯಗಳಿವೆ. ವಿಶೇಷವಾಗಿ ಬಾಣಂತಿಯರು ಮತ್ತು ಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಠಿಕತೆ ಹೋಗಲಾಡಿಸಲು ದ್ವಿದಳ ಧಾನ್ಯ ಉತ್ತಮ ಆರೋಗ್ಯಕ್ಕಾಗಿ ಮತ್ತು ರೋಗ ನಿರೋಧಕ ಶಕ್ತಿಗಾಗಿ ಬೇಕಾದ ಪ್ರೋಟಿನ್, ಫೈಬರ್ ಪ್ರಮಾಣ ಹೆಚ್ಚಾಗಿರುವದರಿಂದ ಅವುಗಳನ್ನು ಸೇವಿಸುವ ಮೂಲಕ ಅಪೌಷ್ಠಿಕತೆ ನಿರ್ಮೂಲನೆ ಮಾಡಲು ಪ್ರಯತ್ನಿಸಬೇಕಾಗಿದೆ ಎಂದು ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ ತಜ್ಞ ಡಾ.ಪ್ರಮೋದ ಗುಂಡಗುರ್ತಿ ಸಲಹೆ ನೀಡಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ […]

Continue Reading

ನೇತಾಜಿ ಯುವ ಪೀಳಿಗೆಗೆ ಸ್ಪೂರ್ತಿ 

ಸುದ್ದಿ ಸಂಗ್ರಹ ಶಹಾಬಾದ ದುಶ್ಚಟಗಳಿಗೆ ದಾಸರಾಗಿ, ಪ್ರೀತಿ-ಪ್ರೇಮ ಎಂಬ ಜಾಲಕ್ಕೆ ಸಿಲುಕಿ, ಹತಾಶರಾಗಿ ಆತ್ಮಹತ್ಯೆಯ ಮೊರೆ ಹೋಗುತ್ತಿರುವ ಇಂದಿನ ಯುವ ಪೀಳಿಗೆಯ ಮುಂದಿನ ಭವಿಷ್ಯ ನೋಡಿದರೆ ಆತಂಕವುಂಟು ಮಾಡುತ್ತಿದೆ ಎಂದು ಧಾರವಾಡದ ಜನಜಾಗೃತಿ ವೇದಿಕೆಯ ಸಲಹೆಗಾರ ರಾಮಾಂಜಿನಪ್ಪ ಆಲ್ದಳ್ಳಿ ಹೇಳಿದರು. ನಗರದ ಸಿದ್ದರಾಮೇಶ್ವರ ಶಾಲಾ ಮೈದಾನದಲ್ಲಿ ಎಐಡಿಎಸ್ಓ ಎಐಡಿವೈಓ ಹಾಗೂ ಎಐಎಂಎಸ್ಎಸ್ ಸಂಘಟನೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 128ನೇ ಜನ್ಮದಿನದ ಅಂಗವಾಗಿ ನಡೆದ 12ನೇ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ […]

Continue Reading

ರಾವೂರ: ಸಿದ್ದಲಿಂಗೇಶ್ವರ ಮಠದಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ

ರಾವೂರ: ಸಿದ್ದಲಿಂಗೇಶ್ವರ ಸಂಸ್ಥಾನ ಮಠದ 12ನೇ ಪೀಠಾಧಿಪತಿ ತ್ರಿವಿಧ ದಾಸೋಹಿ ಲಿಂಗೈಕ್ಯ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಐದನೇ ಪುಣ್ಯಸ್ಮರಣೋತ್ಸವ ಅಂಗವಾಗಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀಮಠದ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ತಿಳಿಸಿದ್ದಾರೆ. ನೂತನ ಪೀಠಾಧಿಪತಿ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ದಿ.12 ರಂದು ಬುಧವಾರ ಬೆಳಿಗ್ಗೆ ಲಿಂಗೈಕ್ಯ ಪೂಜ್ಯರ ಗದ್ದುಗೆಗೆ ವಿಶೇಷ ಪೂಜೆ ನಡೆಯುವುದು. ನಂತರ ಏನ್.ಜಿ.ಏನ್ ಫೌಂಡೇಶನ್ ಸಹಯೋಗದಲ್ಲಿ ಖ್ಯಾತ ವೈದ್ಯರಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ […]

Continue Reading

ಜೇವರ್ಗಿ: ಜ.12 ರಂದು ಸರ್ಕಾರಿ ಪಿಯು ಕಾಲೇಜಿನ ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ

ಕಲಬುರಗಿ: ಜೇವರ್ಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೀಜಿನ 67ನೇ ವಾರ್ಷಿಕೋತ್ಸವ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ದಿ.12 ರಂದು ಬುಧವಾರ ಬೆ.10.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಉಪನ್ಯಾಸಕ, ಸಾಂಸ್ಕೃತಿಕ ಕಾರ್ಯದರ್ಶಿ ಹಾಗೂ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ ಪಾಟೀಲ ಹೇಳಿದ್ದಾರೆ. ಗುವಿವಿ ಸಿಂಡಿಕೇಟ್ ಸದಸ್ಯ, ಹಿರಿಯ ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಎಸ್.ಪಿ.ಸುಳ್ಳದ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಿಕ್ಷಕ ಹಾಗೂ ಚಿಂತಕ ಸಂತೋಷ ಹೂಗಾರ ವಾರ್ಷಿಕೋತ್ಸವ ಭಾಷಣ ಮಾಡಲಿದ್ದಾರೆ. ಸಿಬಿಸಿ […]

Continue Reading

ಜೀತ ಪದ್ದತಿ ಅಮಾನವಿಯ ಮತ್ತು ಶಿಕ್ಷಾರ್ಹ ಅಪರಾಧ

ಕಲಬುರಗಿ: ಬಡವರನ್ನು ಶೋಷಣೆ ಮಾಡುವ ಜೀತ ಪದ್ದತಿ ಅಮಾನವೀಯ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಅದರ ಸಂಪೂರ್ಣ ನಿರ್ಮೂಲನಗೆ ಎಲ್ಲರ ಸಹಕಾರ ಅಗತ್ಯ ಎಂದು ಸಾಮಾಜಿಕ ಕಾರ್ಯಕರ್ತ ಶಿವಕುಮಾರ ಬಿರಾದಾರ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ಸ್ವಾತಿ ಮತ್ತು ಶಿವಾ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ಜೀತ ಪದ್ದತಿಯ ನಿರ್ಮೂಲನೆ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರ ಆಡಳಿತ, ಬಡತನ, ನಿರುದ್ಯೋಗ, ಅನಕ್ಷರತೆಯಂತಹ ಕಾರಣಗಳಿಂದ ದಾರಿದ್ರ್ಯಉಂಟಾಗುವ ಮೂಲಕ ತುಂಬಾ ಕಷ್ಟ […]

Continue Reading

ಬಾಬಾ ಅಮ್ಟೆ ಶ್ರೇಷ್ಟ ಸಾಮಾಜಿಕ ಕಾರ್ಯಕರ್ತ

ಕಲಬುರಗಿ: ಮಹಾತ್ಮ ಗಾಂಧಿಜಿಯವರ ಅನುಯಾಯಿಯಾಗಿ ಅವರ ತತ್ವಗಳನ್ನು ಪ್ರಚುರ ಪಡಿಸಿದ್ದಾರೆ. ಅವರು ಶ್ರೇಷ್ಟ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ಬಸವೇಸ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ಬಾಬಾ ಅಮ್ಟೆಯವರ 17ನೇ ಸ್ಮರಣೆ’ಯಲ್ಲಿ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾತನಾಡಿದ ಅವರು, ಬಾಬಾ ಅಮ್ಟೆ ಅವರು ಸಮಾಜದಲ್ಲಿರುವ ಕುಷ್ಟರೋಗಿಗಳ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರಲ್ಲಿರುವ ಸಮಾಜಪರ ಕಾಳಜಿ ಮಾದರಿಯಾಗಿದೆ. ದೇಶದ […]

Continue Reading