ಮನುಷ್ಯರು ದಣಿದಾಗ ಅಥವಾ ನಿದ್ದೆ ಬಂದಾಗ ಆಕಳಿಸುವುದು ಕಂಡುಬರುತ್ತದೆ. ಹಾವುಗಳು ಹೇಗೆ ದಣಿವು ಅನುಭವಿಸುತ್ತವೆ ಎಂಬುದನ್ನು ನಿರ್ಧರಿಸಲು ನಮಗೆ ಯಾವುದೆ ಮಾರ್ಗವಿಲ್ಲ. ಆದರೆ ಆಕಳಿಸುವ ಹಾವಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು @lauraisabelaleon ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಇದರಲ್ಲಿ ದೈತ್ಯ ಹೆಬ್ಬಾವು ಮನುಷ್ಯನಂತೆ ಅಸಾಮಾನ್ಯವಾಗಿ ಅಗಲವಾಗಿ ಬಾಯಿ ತೆರೆಯುವ ಮೂಲಕ ಆಕಳಿಸುತ್ತಿರುವುದನ್ನು ಕಾಣಬಹುದು. ಅಪರೂಪಕ್ಕೆ ಕಂಡುಬರುವ ದೃಶ್ಯ. ಇದು ಜನರ ಗಮನ ಸೆಳೆಯಲು ಕಾರಣವಾಗಿದೆ.
ಒಂದು ದೊಡ್ಡ ಹೆಬ್ಬಾವು ಅಸಾಮಾನ್ಯವಾಗಿ ಅಗಲವಾಗಿ ಬಾಯಿ ತೆರೆದು ಮನುಷ್ಯರಂತೆ ಆಕಳಿಸುವುದನ್ನು ಕಾಣಬಹುದು. 34 ಸಾವಿರಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ ಮತ್ತು ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ‘ಓಹ್… ಹಾವುಗಳು ಸಹ ಆಕಳಿಸುತ್ತವೆ’ ಎಂದು. ಮತ್ತೊಬ್ಬರು, ‘ನಾನು ಕೂಡ ಇಂತಹದ್ದನ್ನು ಮೊದಲ ಬಾರಿಗೆ ನೋಡುತ್ತಿದ್ದೆನೆ’ ಇದು AI ಆಗಿದೆಯೇ ? ಎಂದು ಪ್ರಶ್ನೆ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
ಆಕಳಿಸುವುದು, ತೂಕಡಿಸುವುದು ಮತ್ತು ತೇಗುವುದು ಎಲ್ಲ ಪ್ರಾಣಿಗಳಲ್ಲೂ ಕಂಡುಬರುತ್ತದೆ. ಹಾವುಗಳು ಕೂಡ ಇದಕ್ಕೆ ಹೊರತಾಗಿಲ್ಲ. ಹಾವು ಆಕಳಿಸುವುದನ್ನು ನೀವು ಎಂದಾದರೂ ನೋಡಿದ್ದಿರಾ ? ನೋಡಿಲ್ಲವೆಂದರೆ ನಾವಿಂದು ನಿಮಗೆ ತೋರಿಸುತ್ತೆವೆ.
ತಜ್ಞರ ಪ್ರಕಾರ, ಹಾವುಗಳು ಹೆಚ್ಚಾಗಿ ದೊಡ್ಡ ಊಟವನ್ನು ನುಂಗಿದ ನಂತರ ತಮ್ಮ ದವಡೆಗಳ ಜೋಡಣೆಯನ್ನು ಸರಿಪಡಿಸಲು ಹೀಗೆ ಮಾಡುತ್ತವೆ, ಇದು ಜನರಿಗೆ ‘ಆಕಳಿಸುವಂತೆ’ ಕಾಣಿಸಬಹುದು. ವಾಸ್ತವವಾಗಿ, ಇದು ಅವರ ದವಡೆಗಳನ್ನು ವಿಶ್ರಾಂತಿ ಮಾಡುವ ಒಂದು ಮಾರ್ಗವಾಗಿದೆ ಎನ್ನಲಾಗಿದೆ. ಆದರೆ ಈ ಕುರಿತಾಗಿ ಯಾವುದೆ ಸರಿಯಾದ ಮಾಹಿತಿ ಇಲ್ಲ.