ಬೆಂಗಳೂರಲ್ಲಿ 1 ಕೋಟಿ ಮತದಾರರಲ್ಲಿ ಅರ್ಧಕ್ಕರ್ಧ ಔಟ್: ಎಸ್‌ಐಆರ್‌ನಲ್ಲಿ ಮಹಾ ಲೋಪವೆಂದ ಕಾಂಗ್ರೆಸ್

ಸುದ್ದಿ ಸಂಗ್ರಹ ಬೆಂಗಳೂರುರಾಜ್ಯದಲ್ಲಿ ಎಸ್‌ಐಆರ್ ನಾಳೆಗೆ (ಆ.7) ಅಂತ್ಯವಾಗಲಿದೆ. ರಾಜ್ಯದಲ್ಲಿ ಈಗಾಗಲೆ 1.11 ಕೋಟಿ ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್‌ ಆಗುವ ಸಾಧ್ಯತೆ ಇದೆ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ. ಈ ಪೈಕಿ ಬೆಂಗಳೂರಿನ ಜಿಬಿಎ ವ್ಯಾಪ್ತಿಯಲ್ಲಿ ಅರ್ಧಕ್ಕರ್ಧ ಮತದಾರರಿಗೆ ಕೊಕ್ ಆಗಲಿದೆ ಎಂದು ದತ್ತಾಂಶ ಹೇಳುತ್ತಿದೆ. ಬೆಂಗಳೂರಿನಲ್ಲಿ 1.3 ಕೋಟಿ ಮತದಾರರಿದ್ದು, ಈ ಪೈಕಿ 49.53 ಲಕ್ಷ ಮತದಾರರಿಗೆ ಕೊಕ್ ಬೀಳಲಿದೆ. ಗೈರು, ಸ್ಥಳಾಂತರ, ಮರಣ ಹೊಂದಿದ, ನಕಲು ಮತ್ತು ಇತರೆ ಮತದಾರರನ್ನು ಚುನಾವಣಾ […]

Continue Reading

ಮಳೆಗಾಲದಲ್ಲಿ ಒಗೆದ ಬಟ್ಟೆಗಳ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ತಂತ್ರ ಪಾಲಿಸಿ

ಬಟ್ಟೆಗಳನ್ನು ಒಣಗಿಸುವುದು ಮತ್ತು ಒಗೆದ ಬಟ್ಟೆಗಳು ವಾಸನೆ ಬರದಂತೆ, ಫ್ರೆಶ್‌ ಆಗಿ ಇಟ್ಟುಕೊಳ್ಳುವುದು ಮಳೆಗಾಲದಲ್ಲಿ ದೊಡ್ಡ ಸವಾಲಿನ ಕೆಲಸವಾಗಿದೆ. ಬಿಸಿಲಿನ ಕೊರತೆ, ಮತ್ತು ಗಾಳಿಯಲ್ಲಿ ಅತಿಯಾದ ಆರ್ದ್ರತೆಯಿಂದಾಗಿ, ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗುವುದಿಲ್ಲ. ಕೆಲವೊಮ್ಮೆ, ಉತ್ತಮ ಡಿಟರ್ಜೆಂಟ್‌ನಿಂದ ಡ್ರೆಸ್‌ ವಾಶ್‌ ಮಾಡಿದ್ರೂ, ಬಟ್ಟೆಗಳಿಂದ ದುರ್ವಾಸನೆ ಹೊರಸೂಸಲು ಪ್ರಾರಂಭಿಸುತ್ತವೆ. ಈ ವಾಸನೆ ಬರುವ ಬಟ್ಟೆಯನ್ನು ಧರಿಸಿದರೆ ಖಂಡಿತ ಮುಜುಗರ ಉಂಟಾಗುತ್ತದೆ. ಆದ್ದರಿಂದ ಈ ಕೆಲವೊಂದು ಪದಾರ್ಥಗಳ ಸಹಾಯದಿಂದ ಬಟ್ಟೆ ಒಗೆಯುವ ಮೂಲಕ ಒಗೆದ ಬಟ್ಟೆಗಳು ವಾಸನೆ ಬರದಂತೆ, ತಾಜಾ […]

Continue Reading

ಯಡ್ರಾಮಿ ಪಂಪ್‌ಸೆಟ್, ಕೇಬಲ್ ಕಳ್ಳರ ಬಂಧನ: ಇಬ್ಬರು ಆರೋಪಿಗಳು ಸೆರೆ

ಸುದ್ದಿ ಸಂಗ್ರಹ ಯಡ್ರಾಮಿನೀರಿನ ಪಂಪ್‌ಸೆಟ್, ಮೋಟಾರ್ ಸ್ಟಾರ್ಟರ್ ಮತ್ತು ಕೇಬಲ್ ವೈರ್ ಕಳ್ಳತನ ಪ್ರಕರಣಗಳನ್ನು ಯಡ್ರಾಮಿ ಪೊಲೀಸರು ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಶಹಾಪುರ ತಾಲೂಕಿನ ಗೋಗಿ ತಾಂಡಾದ ಕಿಶನ್ ಟೋಪು ಜಾಧವ ಬಂಧಿತ ಆರೋಪಿ. ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಐದು ನೀರೆತ್ತುವ ಮೋಟಾರ್‌, ಮೂರು ಸ್ಟಾರ್ಟ್‌ರ್‌ಗಳು ಮತ್ತು ಕೇಬಲ್, ವೈರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಡ್ರಾಮಿ ಮತ್ತು ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ.10 ರಂದು ಕಾಚಾಪುರ, ಜೂನ್ 18ರಂದು ತೆಲಗಬಾಳ ಹಾಗೂ ಜ.1ರಂದು ಹರವಾಳ […]

Continue Reading

ಶಹಾಬಾದ್: ಮುಗುಳನಾಗಾವಿ ಕೆರೆಯಲ್ಲಿ ಮೊಸಳೆ ಸೆರೆ

ಸುದ್ದಿ ಸಂಗ್ರಹ ಶಹಾಬಾದ್ತಾಲೂಕಿನ ಮುಗುಳನಾಗಾವಿ ಬಾಲುನಾಯಕ ತಾಂಡಾದಲ್ಲಿರುವ ಕೆರೆಯಲ್ಲಿ ಮೀನುಗಾರರ ಬಲೆಗೆ ಮೊಸಳೆ ಸಿಕ್ಕಿದೆ. ಸೋಲಾಪುರ ಮೂಲದ ಮೀನುಗಾರರು ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ ಬಲೆಯಲ್ಲಿ ಬುಧವಾರ ಮಧ್ಯಾಹ್ನ ಮೊಸಳೆ ಸಿಕ್ಕಿದೆ. ಸುಮಾರು 8 ಅಡಿ ಉದ್ದದ ಮೊಸಳೆಯನ್ನು ಹಗ್ಗದಿಂದ ಕಟ್ಟಿ ಎರಡು ಗಂಟೆ ಸಾಹಸ ಪಟ್ಟು ಕೊನೆಗೂ ಸಂಜೆ 5 ಗಂಟೆಗೆ ಕೆರೆಯ ದಂಡೆಗೆ ತಂದಿದ್ದಾರೆ. ಮೊಸಳೆ ಸಿಕ್ಕ ವಿಷಯವನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿ ಅನೀಲಕುಮಾರ ಮತ್ತು ವಿಜಯಕುಮಾರ ಸಿಬ್ಬಂದಿಯೊಂದಿಗೆ […]

Continue Reading

ಬಿಗ್‌ಬಾಸ್ ಕನ್ನಡ 13ರ ವೇದಿಕೆ ಸಜ್ಜು: ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಗೆ ಮುಹೂರ್ತ ಫಿಕ್ಸ್

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ʻಬಿಗ್‌ಬಾಸ್ ಕನ್ನಡ ಸೀಸನ್‌ 13ರʼ ಆರಂಭಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದ ಬಿಗ್‌ಬಾಸ್ ಕನ್ನಡ ಸೀಸನ್‌ 13 ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದೀಗ ವಾಹಿನಿ ಹೊಸ ಪ್ರೋಮೋ ರಿಲೀಸ್‌ ಮಾಡಿದ್ದು, ಆಗಸ್ಟ್‌ 16ರ ರಾತ್ರಿ 9ಕ್ಕೆ ಬಿಗ್‌ ಮನೆಗೆ ಎಂಟ್ರಿ ಕೊಡೋಕೆ ಅಗ್ನಿ ಪರೀಕ್ಷೆಯ ವೇದಿಕೆ ಸಜ್ಜಾಗಿದೆ. ರಿಲೀಸ್‌ ಆದ ಪ್ರೋಮೋದಲ್ಲಿ […]

Continue Reading

ಜನರಲ್ ಸ್ಟೋರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌: 40 ಲಕ್ಷ ರೂ. ವಸ್ತುಗಳು ಸುಟ್ಟು ಭಸ್ಮ

ಸುದ್ದಿ ಸಂಗ್ರಹ ಉಡುಪಿಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ – 66ರ ಕುವೆಂಪು ಶಾಲೆ ಬಳಿ ಇದ್ದ ಜನರಲ್ ಸ್ಟೋರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ಅಂಗಡಿಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿ ಸುಮಾರು 40 ಲಕ್ಷ ರೂ.ಗಿಂತ ಹೆಚ್ಚು ನಷ್ಟ ಉಂಟಾಗಿದೆ. ಅಂಗಡಿ ಮಾಲೀಕ ಸಂತೋಷ್ ಎಂದಿನಂತೆ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಮುಂಜಾನೆ 1:30ರ ವೇಳೆಗೆ ಅಂಗಡಿಯೊಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೆ ಇಡಿ ಅಂಗಡಿಗೆ […]

Continue Reading

ಪತ್ನಿಯಿಂದ ಹಲ್ಲೆ, ಜೀವ ಬೆದರಿಕೆ: ದೂರು ನೀಡಿದ ಸಾಫ್ಟ್‌ವೇರ್‌ ಎಂಜಿನಿಯರ್‌ ಪತಿ

ಸುದ್ದಿ ಸಂಗ್ರಹ ಕಲಬುರಗಿಪತ್ನಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದು, ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಪತ್ನಿ ಸನಿಕಾಳ ಒತ್ತಡ, ಬ್ಲ್ಯಾಕ್‌ಮೇಲ್‌ಗೆ ಮಣಿದು ಮದುವೆಯಾದೆ. ಮದುವೆ ಬಳಿಕ ತಂದೆ–ತಾಯಿಯಿಂದ ಪ್ರತ್ಯೇಕವಾಗಿ ವಾಸಿಸಲು ಒತ್ತಡ ಹೇರಿದಳು. ಅದಕ್ಕೆ ನಿರಾಕರಿಸಿದಾಗ ಆತ್ಮಹತ್ಯೆಯ ಬೆದರಿಕೆ ಹಾಕುತ್ತಿದ್ದಳು. 2026ರ ಜೂನ್‌ 9ರಂದು ಡಿಟರ್ಜೆಂಟ್‌ ಸೇವಿಸಿದ್ದರು. ಬಳಿಕ ಎರಡು ಕುಟುಂಬಗಳು ಪ್ರತ್ಯೇಕವಾಗಿ ನೆಲೆಸುವ ಒಪ್ಪಂದವಾದರೂ, ಅವಳ ಬೆದರಿಕೆ, ಬ್ಲ್ಯಾಕ್‌ಮೇಲ್ ಮುಂದುವರಿದಿತ್ತು. ಜೂನ್ 28ರಂದು ಏಕಾಏಕಿ ಬಂದು ಕೈಯಲ್ಲಿದ್ದ […]

Continue Reading

ಡಾ.ಅಜಯಸಿಂಗ್’ಗೆ ಕೊನೆಗೂ ಒಲಿದ ಸಚಿವ ಸ್ಥಾನ

ಸುದ್ದಿ ಸಂಗ್ರಹ ಕಲಬುರಗಿಮಾಜಿ‌ ಮುಖ್ಯಮಂತ್ರಿ ಧರ್ಮಸಿಂಗ್ ಅವರ‌ ಪುತ್ರ, ಜೇವರ್ಗಿಯಿಂದ ಮೂರನೇ ಬಾರಿ ಶಾಸಕರಾಗಿರುವ ಡಾ.ಅಜಯ್ ಸಿಂಗ್ ಅವರಿಗೆ ಕೊನೆಗೂ‌‌ ಸಚಿವ ಸ್ಥಾನ ಒಲಿದಿದೆ. ಈ ಮೂಲಕ‌ ಪಕ್ಷ ನಿಷ್ಠೆಗೆ ಕಾಂಗ್ರೆಸ್ ಪಕ್ಷ‌ ಮಣೆ ಹಾಕಿದೆ. ಸದ್ಯ ಕೆಕೆಆರ್‌ಡಿಬಿ ಅಧ್ಯಕ್ಷರಾಗಿದ್ದ ಡಾ.ಅಜಯ್‌ ಸಿಂಗ್ ಅವರಿಗೆ ಸಚಿವ ಸ್ಥಾನ‌ ನೀಡುವಂತೆ ತೀವ್ರ ಒತ್ತಡ ಹೆಚ್ಚಿತ್ತು. ಮೂರು ಬಾರಿ ಚಿತ್ತಾಪುರ ಕ್ಷೇತ್ರದಿಂದ ಶಾಸಕರಾಗಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮೂರು ಬಾರಿಯೂ ಸಚಿವ ಸ್ಥಾನ ಸಿಕ್ಕಿತ್ತು. ಅಜಯ್ ಸಿಂಗ್ […]

Continue Reading

55 ವಿದ್ಯಾರ್ಥಿಗಳು ಅಸ್ವಸ್ಥ: ಪ್ರಾಂಶುಪಾಲ, ವಾರ್ಡನ್ ಅಮಾನತು

ಸುದ್ದಿ ಸಂಗ್ರಹ ಅಫಜಲಪುರತಾಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳಪೆ ಆಹಾರ ಸೇವಿಸಿದ ಪರಿಣಾಮ 55 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲ ಶರಣಬಸಪ್ಪ ಪಾಟೀಲ ಮತ್ತು ವಾರ್ಡನ್ ರವಿ ವಾಲಿ ಅವರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಶಿವಸ್ವಾಮಿ ಬಿ ಆದೇಶ ಹೊರಡಿಸಿದ್ದು, ಕರ್ತವ್ಯಲೋಪ ಮತ್ತು ಬೇಜವಾಬ್ದಾರಿತನ ತೋರಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆ ಹಾಗೂ […]

Continue Reading

ಜಾಲಹಳ್ಳಿ ದುರ್ಗಾದೇವಿ ದೇವಸ್ಥಾನದಲ್ಲಿ ಆಭರಣ ಕಳವು

ಸುದ್ದಿ ಸಂಗ್ರಹ ಜಾಲಹಳ್ಳಿಸಮೀಪದ ಚಿಂಚೋಡಿ ಗ್ರಾ.ಪಂ ವ್ಯಾಪ್ತಿಯ ಬಸ್ಸಾಪುರ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಕಳ್ಳರು ಸುಮಾರು 70 ಸಾವಿರ ಬೆಲೆ ಬಾಳುವ ದೇವಿಯ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ದೇವಸ್ಥಾನದ ಪೂಜಾರಿ ಯಂಕೋಬ ನಾಯಕ ತೋಟದ್ ಅವರು ಜುಲೈ 29ರಂದು ಬೆಳಿಗ್ಗೆ ಪೂಜೆ ಮುಗಿಸಿ ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು. ಮರುದಿನ ಜುಲೈ 30ರಂದು ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಗರ್ಭಗುಡಿಯಲ್ಲಿದ್ದ ದೇವಿಯ ಬೆಳ್ಳಿಯ ಆಭರಣಗಳು ಕಳುವಾಗಿರುವುದು ಕಂಡುಬಂದಿದೆ. ತಕ್ಷಣ ಪೊಲೀಸ್ ಠಾಣೆಗೆ ತೆರಳಿ […]

Continue Reading