ತೊಟ್ನಳ್ಳಿಯ ಪೂಜ್ಯರಿಂದ ಪಾದಯಾತ್ರೆ: ಬಿಜೆಪಿ ಬೆಂಬಲ

ಸುದ್ದಿ ಸಂಗ್ರಹ

ಕಲಬುರಗಿ: ಸೇಡಂ ತಾಲೂಕಿನ ತೊಟ್ನಳ್ಳಿಯ ಶ್ರೀ ಮಹಾಂತೇಶ್ವರ ಮಠದ ಪೂಜ್ಯ ಶ್ರೀ ಡಾ. ತ್ರಿಮೂರ್ತಿ ಶಿವಾಚಾರ್ಯರಿಗೆ ಸೇರಿದ 5 ಎಕರೆ 24 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್ ನಮೂದಾಗಿದ್ದು, ಇದನ್ನು ಖಂಡಿಸಿ ಶ್ರೀಗಳು ನ. 6 ರಂದು ತೊಟ್ನಳ್ಳಿಯಿಂದ ಸೇಡಂನ ಸಹಾಯಕ ಆಯುಕ್ತರ ಕಾರ್ಯಾಲಯದವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆಗೆ ಬಿಜೆಪಿಯ ಬೆಂಬಲಿವಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.

ಈ ವಕ್ಫ್ ಕಾಯಿದೆ ಅಡ್ಡ ಇಟ್ಟುಕೊಂಡು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತರ ಭೂಮಿ ಮಾತ್ರವಲ್ಲದೆ ಮಠ, ಮಂದಿರಗಳ ಆಸ್ತಿಯನ್ನು ಕೊಳ್ಳೆಹೊಡೆಯುವ ಕೆಲಸಕ್ಕೆ ಕೈಹಾಕುತ್ತಿದೆ. ಹಿಂದೂಗಳ ದೇವಾಲಯಗಳ ಸ್ಥಳಗಳ ಮೇಲೆಯೂ ವಕ್ಫ್ ನಮೂದು ಮಾಡಲಾಗುತ್ತಿದೆ. ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಕೊಳ್ಳೆ ಹೊಡೆದರೆ ಕೇಳುಯವವರು ಯಾರು ಇಲ್ಲ ಎನ್ನುವಂತಹ ಮನಸ್ಥಿತಿ ಕಾಂಗ್ರೆಸ್ ಹೊಂದಿದದ್ದರೆ ಅದು ಕಾಂಗ್ರೆಸ್ ಮೂರ್ಖತನ, ಹಿಂದೂಗಳು ಸಿಡಿದೆದ್ದು ನಿಂತರೆ ಕಾಂಗ್ರೆಸ್ ಖುರ್ಚಿ ಅಲುಗಾಡುತ್ತದೆ. ಆದ್ದರಿಂದ ಕೂಡಲೇ ಎಚ್ಚೆತ್ತು, ಮಠ, ಮಂದಿರ ಮತ್ತು ಇನ್ನಿತರ ಧಾರ್ಮಿಕ ಕೇಂದ್ರಗಳ ಆಸ್ತಿಯಲ್ಲಿ ವಕ್ಫ್ ನಮೂದಾಗಿದೆ ಅವೇಲ್ಲವೂ ಆಯಾ ಮಠ, ಮಂದಿರದ ಹೆಸರು ನಮೂದು ಮಾಡಬೇಕು. ಮಾಡದಿದ್ದರೆ ಊಗ್ರವಾದ ಹೋರಾಟಕ್ಕೆ ಕರೆ ನೀಡಲಾಗುವುದು ಎಂದರು.

ತೊಟ್ನಳ್ಳಿಯ ಪೂಜ್ಯರು ನಡೆಸುತ್ತಿರುವ ಪಾದಯಾತ್ರೆಯಲ್ಲಿ ಬಿಜೆಪಿಯ ನಗರ ಹಾಗೂ ಎಲ್ಲ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಭಾಗಿಯಾಗಬೇಕು. ಜೊತೆಗೆ ಎಲ್ಲ ಹಿಂದೂಪರ ಸಂಘಟನೆಗಳು ಪಾದಯಾತ್ರೆಯಲ್ಲಿ ಭಾಗಿಯಾಗುವ ಮೂಲಕ ಬೆಂಬಲ ನೀಡಬೇಕು. ಸೇಡಂ ತಾಲೂಕಿನ ಹಿಂದೂ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಕೋರಿದ್ದಾರೆ.

Leave a Reply

Your email address will not be published. Required fields are marked *