ವಾಡಿ: ಬಿಜೆಪಿ ಕಛೇರಿಯಲ್ಲಿ ಜ್ಯೋಶಿ ಮುಖರ್ಜಿ ಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜನಸಂಘದ ಸಂಸ್ಥಾಪಕ ಜಗನ್ನಾಥ ಜ್ಯೋಶಿ ಅವರ ಜನ್ಮದಿನಾಚರಣೆ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದ ನಿಮಿತ್ಯ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ನಿಸ್ವಾರ್ಥ ದೇಶ ಸೇವೆಯನ್ನು ಬಿಜೆಪಿ ಮುಖಂಡರು ಸ್ಮರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ಜಗನ್ನಾಥರಾವ್ ಜೋಶಿ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಜನಸಂಘದ ಕಾಲದಿಂದ ಪಕ್ಷದ ಬೆಳವಣಿಗೆಗೆ ಕಾರಣಿಕರ್ತರು ಎಂದರು. ಜ್ಯೋಶಿ […]

Continue Reading

ಮೋದಿ ಆಡಳಿತಕ್ಕೆ 11 ವರ್ಷ: ಬಿಜೆಪಿ ಮುಖಂಡರ ಸಂಭ್ರಮ

ವಾಡಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್’ಡಿಎ ಮೈತ್ರಿಕೂಟದ 11 ವರ್ಷ ಆಡಳಿತದ ಸಾಧನೆಯನ್ನು ನೆನೆದ ಬಿಜೆಪಿ ಮುಖಂಡರು ಪಕ್ಷದ ಕಛೇರಿಯ ಆವರಣದಲ್ಲಿ ಸಸಿ ನೆಟ್ಟು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಜಗತ್ತು ಮೆಚ್ಚಿದ ವಿಶ್ವನಾಯಕ, ದಣಿವರಿಯದೆ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ, ದಕ್ಷ ಆಡಳಿತಗಾರ, ಸಮರ್ಥ ನಾಯಕತ್ವ, ಸ್ಪಂದನಶೀಲ ಪ್ರಧಾನಿಯಾಗಿ 11 ವರ್ಷ ಪೂರೈಸಿದ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮೆಲ್ಲರಿಂದ ಅಭಿನಂದನೆಗಳು. 2014ರ ಮೇ 26ರಂದು ಪ್ರಧಾನಿಯಾಗಿ […]

Continue Reading

ಭಾಗೋಡಿ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದ ಪತ್ನಿ

ಚಿತ್ತಾಪುರ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಭಾಗೋಡಿ ಗ್ರಾಮದಲ್ಲಿ ನಡೆದಿದೆ. ತಿಪ್ಪಣ್ಣ ಅಲಿಯಾಸ್ ಕುಪೇಂದ್ರ (30) ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಬಾರದು ಎಂದು ಶಾಂತಮ್ಮ ಮತ್ತು ಆಕೆಯ ಪ್ರಿಯಕರ ಸೇರಿ ಕುಪೇಂದ್ರನನ್ನು ತಲೆದಿಂಬಿನಿಂದ ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಶಾಂತಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಿಯಕರ ಪರಾರಿಯಾಗಿದ್ದಾನೆ, ಆತನನ್ನು ಆದಷ್ಟು ಬೇಗನೆ ಬಂಧಿಸಲಾಗುವುದು ಎಂದು ಪಿಎಸ್‌ಐ ಶ್ರೀಶೈಲ್ ಅಂಬಾಟಿ ತಿಳಿಸಿದ್ದಾರೆ. ತಲೆದಿಂಬಿನಿಂದ […]

Continue Reading

ವಾಡಿ: ಜೂನ್ 21 ರಂದು ವಿಶ್ವ ಯೋಗ ದಿನಾಚರಣೆ

ವಾಡಿ: ಪಟ್ಟಣದಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ, ಈ ಹಿನ್ನಲೆಯಲ್ಲಿ ನಡೆಯುವ ಸಾಮೂಹಿಕ ಯೋಗ ಅಭ್ಯಾಸದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಕರೆ ನೀಡಿದ್ದಾರೆ. ಹನ್ನೊಂದನೇ ವಿಶ್ವ ಯೋಗ ದಿನಾಚರಣೆಯು ಒಂದು ಭೂಮಿ- ಒಂದು ಆರೋಗ್ಯ ಎಂಬ ಘೋಷ ವಾಕ್ಯದಂತೆ ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ಜೊತೆಗೆ ನೈಸರ್ಗಿಕ ಸಂಪತ್ತಿನ ಪ್ರಯೋಜನಯೊಂದಿಗೆ ಪ್ರತಿಯೊಬ್ಬರು ಉತ್ತಮ ಆರೋಗ್ಯ ಹೊಂದಲು ಯೋಗ ದಿನಾಚರಣೆ ಸ್ಫೂರ್ತಿಯಾಗಲಿದೆ […]

Continue Reading

ವಿಶ್ವ ಪಾರಂಪರಿಕತೆಗೆ ಮುನ್ನುಡಿ ಬರೆಯುವ ಕಾಳಗಿಯ ಚರಿತ್ರೆ: ಮುಡುಬಿ ಗುಂಡೇರಾವ

ಕಾಳಗಿ: ವಿಶ್ವ ಪಾರಂಪರಿಕತೆಗೆ ಮುನ್ನುಡಿ ಬರೆಯುವ ಕಾಳಗಿಯ ಚರಿತ್ರೆಯು ವೈಶಿಷ್ಟಪೂರ್ಣವಾಗಿದೆ, ಕಾಳಗಿಯಲ್ಲಿ ಉತ್ಖನನ ಕಾರ್ಯ ನಡೆಯುವ ಮೂಲಕ ಕನ್ನಡ ಸಂಸ್ಕೃತಿಯ ಮೇಲೆ ಹೊಸ ಬೆಳಕು ಚೆಲ್ಲಬೇಕಾಗಿದೆ ಎಂದು ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಅಭಿಮತವ್ಯಕ್ತಪಡಿಸಿದರು. ಪಟ್ಟಣದ ನೀಲಕಂಠ ಕಾಳೇಶ್ವರ ದೇವಾಲಯದ ಪರಿಸರದಲ್ಲಿ ಕಲಬುರಗಿ ಬಸವೇಶ್ವರ ಸೇವಾ ಬಳಗ ಆಯೋಜಿಸಿದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ರಾಮಾಯಣ ಕಾಲದಲ್ಲಿ ದಂಡಕಾರಣ್ಯವಾಗಿತ್ತು , ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಮನ್ನೆದಡಿ ಸಾಸಿರ ನಾಡು, ಸಾವಿರ […]

Continue Reading

ಶಹಾಬಾದ್: ಪೊಲೀಸ್ ಮತ್ತು ಪತ್ರಕರ್ತರಿಂದ ಉಪನ್ಯಾಸ ನಾಳೆ

ಶಹಾಬಾದ್‌: ಸೇಂಟ್ ಥಾಮಸ್‌ ಶಾಲೆಯಲ್ಲಿ ರವಿವಾರ ಬೆಳಗ್ಗೆ 10.30ಕ್ಕೆ ಪೊಲೀಸ್ ಇಲಾಖೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಮಾಜ ಸುಧಾರಣೆಯಲ್ಲಿ ಪೊಲೀಸ್ ಮತ್ತು ಪತ್ರಕರ್ತರ ಪಾತ್ರ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಕರ್ತರಾದ ಲೋಹಿತ ಕಟ್ಟಿ, ನಿಂಗಣ್ಣ ಜಂಬಗಿ ತಿಳಿಸಿದ್ದಾರೆ. ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್ ಉದ್ಘಾಟಿಸಲಿದ್ದಾರೆ, ಫಾದರ್ ಜೇರಾಲ್ಡ್ ಸಾಗರ ಸಾನ್ನಿಧ್ಯ ವಹಿಸಲಿದ್ದಾರೆ. ಡಿವೈಎಸ್‌ಪಿ ಶಂಕರಗೌಡ ಪಾಟೀಲ್‌, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ […]

Continue Reading

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಗದೀಶ ಚವ್ಹಾಣ ಆಯ್ಕೆ

ಚಿತ್ತಾಪುರ: ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪುರಸಭೆ ಸದಸ್ಯ ಜಗದೀಶ ಚವ್ಹಾಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಜಗದೀಶ್ ಚವ್ಹಾಣ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸ್ಥಾಯಿ ಸಮಿತಿಯ ಸದಸ್ಯರಾಗಿ ಸುಮಂಗಲಾ ಸಣ್ಣೂರಕರ್, ಬೇಬಿ ಸುಭಾಷ್ ಜಾಧವ, ಶಹನಾಜ್ ಬೇಗಂ ಮಹ್ಮದ್ ಯಕ್ಬಾಲ್, ಪ್ರಭು ಗಂಗಾಣಿ ಅವರನ್ನು ಆಯ್ಕೆ ಮಾಡಲಾಯಿತು. ಪುರಸಭೆ ಮುಖ್ಯಾಧಿಕಾರಿ […]

Continue Reading

ವಾಡಿ: ವಿಶ್ವ ಪರಿಸರ ದಿನಾಚರಣೆ ಆಚರಣೆ

ವಾಡಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಬಿಜೆಪಿ ಮುಖಂಡರು ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದ ಅವರು, ಕೇವಲ ಒಂದು ದಿನ ಪರಿಸರ ದಿನಾಚರಣೆ ಮಾಡಿದರೆ ಸಾಲದು. ವರ್ಷಪೂರ್ತಿ ಪರಿಸರ ದಿನಾಚರಣೆ ನಡೆಸಬೇಕಾಗಿದೆ ಎಂದರು. ಅರಣ್ಯ ನಾಶದಿಂದ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ, ಕುಡಿಯುವ ನೀರಿಗೂ ಪರಿತಪಿಸಬೇಕಾದ ದಿನಗಳು ಎದುರಾಗುತ್ತಿವೆ. ಗಿಡಮರಗಳನ್ನು ಕಡಿದು ಕಾಡನ್ನು ಬರಿದಾಗಿಸುತ್ತಿರುವುದರಿಂದ ಮಳೆ ಕೊರತೆಯಾಗಿದೆ ಪರಿಸರ ಸಂರಕ್ಷಣೆ ಹಾಗೂ ಉತ್ತಮ […]

Continue Reading

ಆರ್‌ಸಿಬಿ ಗೆಲುವು: ಕಪ್ ಹಿಡಿದು ಕುಪ್ಪಳಿಸಿದ ಅಭಿಮಾನಿಗಳು

ವಾಡಿ: ಪಟ್ಟಣದಲ್ಲಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಆರ್‌ಸಿಬಿ ಗೆದ್ದ ತಕ್ಷಣ ಮಕ್ಕಳು, ಯುವಕರು, ಅಭಿಮಾನಿಗಳು ಮನೆಯಿಂದ ಹೊರಗೆ ಬಂದು ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾದರು. ಅಭಿಮಾನಿಗಳೊಂದಿಗೆ ಗೆಲುವಿ ಸಂಭ್ರಮಾಚರಣೆಯಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಜಗತ್ತಿನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ ಆರ್‌ಸಿಬಿ ತಂಡ, ಆಟಗಾರರ ಕ್ರೀಡಾ ಸ್ಪೂರ್ತಿ, ಭಾವನಾತ್ಮಕವಾಗಿ ಪ್ರೇಕ್ಷಕರ ಮತ್ತು ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದೊಂದಿಗೆ ಇರುವ ಒಡನಾಟದಿಂದ ಹದಿನೆಂಟು ವರ್ಷಗಳ ಸತತವಾಗಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ,ಇಲ್ಲಿಯವರೆಗೂ ಕಪ್ ಗೆಲ್ಲಲಿಲ್ಲ. ಈ ಸಲ […]

Continue Reading

ವಾಡಿ: ಬಿಜೆಪಿ ಕಛೇರಿಯಲ್ಲಿ ವೀರ ಸಾವರ್ಕರ ಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವೀರ ಸಾವರ್ಕರ ಜಯಂತಿ ಪ್ರಯುಕ್ತ ಮುಖಂಡರು ಸಾವರ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅವರ ಹೋರಾಟ ತ್ಯಾಗ ಹಾಗೂ ಅನುಭವಿಸಿದ ಕಷ್ಟಗಳ ಕುರಿತು ಸ್ಮರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ವೀರ್ ಸಾವರ್ಕರ್ ಭಾರತೀಯರಲ್ಲಿ ಏಕತೆಯ ಕಟ್ಟಾ ಪ್ರತಿಪಾದಕರಾಗಿದ್ದರು ಮತ್ತು ಎಲ್ಲಾ ಸಮುದಾಯಗಳು ಸಾಮರಸ್ಯದಿಂದ ಸಹಬಾಳ್ವೆ ನಡೆಸಬಹುದಾದ ಅಖಂಡ ಭಾರತದಲ್ಲಿ ನಂಬಿಕೆ ಇಟ್ಟಿದ್ದರು. ಅವರ ದೃಷ್ಟಿಕೋನವು ಹಿಂದುತ್ವದ ಕಲ್ಪನೆ ಒಳಗೊಂಡಿತ್ತು, ಇದು ಧಾರ್ಮಿಕ ಪ್ರತ್ಯೇಕತೆಗಿಂತ […]

Continue Reading