ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ದೇಶಕ್ಕಾಗಿ ಹೋರಾಡಿದ ವೀರರನ್ನು ಗೌರವಿಸಿ ಅವರಿಗೆ ಕೃತಜ್ಞರಾಗಿರುವುದೆ ಈ ನೆಲದ ಗುಣವಾಗಿದೆ ಎಂದರು.
ಪ್ರವಾಸಿಗರ ಸ್ವರ್ಗ ಎಂದು ಕರೆಯಲ್ಪಡುವ ಜಮ್ಮು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದ ಭಾರತೀಯರ ಮೇಲೆ ಪಹಲ್‌ಗಾಮ್‌ನಲ್ಲಿ ಪಾಕ್ ಉಗ್ರಗಾಮಿಗಳು ಹಾಡುಹಗಲೆ ಗುಂಡಿಟ್ಟು ಕೊಂದು ಭಾರತೀಯ ಹೆಣ್ಣು ಮಕ್ಕಳ ಹಣೆಯ ಕುಂಕುಮವನ್ನು ಅಳಿಸಿ ಹಾಕಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕ್ ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಿ ಪಾಕ್ ಉಗ್ರಗಾಮಿಗಳ ಅಡಗುತಾಣಗಳನ್ನು ಧ್ವಂಸ ಮಾಡಿ ವಿಜಯಶಾಲಿಯಾಯಿತು. ಭಾರತವೆಂಬ ಈ ಪುಣ್ಯಭೂಮಿಯಲ್ಲಿ ಹುಟ್ಟಿ ಸ್ವಾತಂತ್ರ್ಯದ ಸುಂದರ ವಾತಾವರಣದಲ್ಲಿ ಜೀವಿಸುತ್ತಿರುವುದೆ ನಮ್ಮ ಸೌಭಾಗ್ಯ. ಸ್ವಾತಂತ್ರ್ಯಕ್ಕಾಗಿ ಮಡಿದ ತ್ಯಾಗಿಗಳನ್ನು ನೆನಸಿ ನಮಿಸುವ ಗೌರವದ ದಿನದಲ್ಲಿ ನಾವು ಪಾಲ್ಗೊಂಡಿದ್ದು, ನಮ್ಮ ದೇಶವನ್ನು ಸ್ವಾತಂತ್ರ್ಯ ಗೊಳಿಸಿದ ಹೋರಾಟಗಾರರಿಗೆ, ಈಗ ದೇಶವನ್ನು ರಕ್ಷಿಸುತ್ತಿರುವ ವೀರರಗೆ ಸದಾ ಜಯವಾಗಲಿ ಎಂದರು.
ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಭಗವತ ಸುಳೆ, ವಿಠಲ ನಾಯಕ, ಬಸವರಾಜ ಪಂಚಾಳ, ರಾಜು ಮುಕ್ಕಣ್ಣ, ಯಮನಪ್ಪ ನವನಳ್ಳಿ, ಅರ್ಜುನ ಕಾಳೆಕರ, ಹರಿ ಗಲಾಂಡೆ, ಭೀಮಶಾ ಜೀರೋಳ್ಳಿ, ಭೀಮರಾವ ದೊರೆ, ಶಿವಶಂಕರ ಕಾಶೆಟ್ಟಿ, ಪ್ರಕಾಶ ಪುಜಾರಿ, ಆನಂದ ಇಂಗಳಗಿ, ಅಯ್ಯಣ್ಣ ದಂಡೋತಿ, ಮಲ್ಲಿಕಾರ್ಜುನ ಸಾತಖೇಡ, ಪ್ರೇಮ ರಾಠೋಡ, ಶಂಕರ ರಾಯಚೂರಕರ್, ಪ್ರವೀಣ ಸುಳೆ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಶರಣಮ್ಮ ಯಾದಗಿರಿ, ಉಮಾಭಾಯಿ ಗೌಳಿ, ದೇವಕ್ಕಿ ಪುಜಾರಿ, ರವೀಂದ್ರ ಸಿಂದಗಿ, ರಾಜವೀರ ಪವಾರ, ಮಲ್ಲಿಕಾರ್ಜುನ ಆಣಿಕೇರಿ, ಗುಂಡುಗೌಡ ಚಾಮನೂರ, ದೇವೇಂದ್ರ ಬಡಿಗೇರ, ರವಿ ಚವ್ಹಾಣ, ದತ್ತಾ ಖೈರೆ, ದುರ್ಯೋಧನ ಜಾಧವ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.