ಚಿತ್ತಾಪುರ: ಪಟ್ಟಣದ ಪ್ರತಿಯೊಂದು ವಾರ್ಡಿನ ಮನೆಗೂ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರು ಪೂರೈಕೆ ಮಾಡುವ ಗುರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೊಂದಿದ್ದಾರೆ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ ಹೇಳಿದರು.
ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಸುಧಾರಿತ ಕುಡಿಯುವ ನೀರು ಸರಬರಾಜು ಅಮೃತ್ 2.0 ಯೋಜನೆಯಡಿ ಇತ್ತಿಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಕಾಮಗಾರಿಯನ್ನು ತಾಂಡಾದ ಹಿರಿಯರಾದ ಪೋಮು ಪಾಂಡು ಚವ್ಹಾಣ ಮತ್ತು ಯಶೋಧ ಗೋವಿಂದ ನಾಯಕ ಭೂಮಿ ಪೂಜೆ ಮಾಡಿದರು.
ಕಾಗಿಣಾ ನದಿ ಮೂಲದಿಂದ 45.53 ಕೋಟಿ ರೂ ವೆಚ್ಚದಲ್ಲಿ ಚಿತ್ತಾಪುರ ಪಟ್ಟಣಕ್ಕೆ ಸುಧಾರಿತ ಕುಡಿಯುವ ನೀರಿನ ಯೋಜನೆಯಡಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪ್ರಾರಂಭವಾಗಿದೆ ಎಂದರು.

45.53 ಕೋಟಿ ರೂ ವೆಚ್ಚದಲ್ಲಿ ಪಟ್ಟಣದ ಪ್ರತಿಯೊಂದು ವಾರ್ಡಿನ ಮನೆಗೆ ಒಂದು ನಳ (ನಲ್ಲಿ) ಕೊಡುವ ಕಾಮಗಾರಿಯನ್ನು ವಾರ್ಡಿನಲ್ಲಿ ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಯನ್ನು ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಪೋಮು ಚವ್ಹಾಣ, ಯಶೋದ ಗೋವಿಂದ, ಕಿಶನ್ ನಾಯಕ್, ದೇವಿದಾಸ್ ನಾಯಕ್, ಭೀಮಸಿಂಗ್ ಚವ್ಹಾಣ, ಪೋಮು ಚವ್ಹಾಣ, ಠಾಕ್ರು ಪವಾರ, ದೇವಿದಾಸ್ ಚವ್ಹಾಣ, ತಾರಾನಾಥ್ ಚವ್ಹಾಣ, ರಾಮು ರಾಠೋಡ, ಅಂಬಾದಾಸ್ ಚವ್ಹಾಣ, ಮಹೇಶ್ ಪವಾರ, ಅನಿಲ್ ಚವ್ಹಾಣ, ಈಶ್ವರ್ ರಾಠೋಡ, ದತ್ತು ಪವರ, ಜಗದೀಶ್ ಪವರ್, ಸಂತೋಷ್ ಚವ್ಹಾಣ, ಸಂತೋಷ್ ರಾಠೋಡ, ಸುನಿಲ್ ಪವಾರ್ ಸೇರಿದಂತೆ ಅನೇಕರು ಇದ್ದರು.