ವಾಡಿ: ಬಿಜೆಪಿ ಕಛೇರಿಯಲ್ಲಿ ಮಾಜಿ ಪ್ರಧಾನಿ ಅಟಲ್’ಜಿ ಸ್ಮರಣೆ

ಪಟ್ಟಣ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ಸ್ಮರಣೆ ಜರುಗಿತು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ವಿಶ್ವವೇ ಅಚ್ಚರಿಯಿಂದ ನೋಡುವಂತೆ ದೇಶವನ್ನು ಮುನ್ನಡೆಸಿದ ಕೀರ್ತಿಗೆ ಪಾತ್ರರಾದ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿ ಹುದ್ದೆಗೇರಿದ್ದರು ಎಂದರು.

ಒಂದು ಬಾರಿ 13 ದಿನಕ್ಕೆ ಅಧಿಕಾರ ಕಳೆದುಕೊಂಡರೆ, ಮತ್ತೊಮ್ಮೆ 13 ತಿಂಗಳಿಗೆ ಅಧಿಕಾರ ಕಳೆದುಕೊಂಡರು. ಮೂರನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಿ ಐದು ವರ್ಷ ಅಧಿಕಾರ ನಡೆಸಿದರು. 21ನೇ ಶತಮಾನದಲ್ಲಿ ಭಾರತದ ಪರಿವರ್ತನೆಯ ಶಿಲ್ಪಿಯಾಗಿದ್ದಕ್ಕೆ ದೇಶವೇ ಅಟಲ್’ಜಿ ಅವರಿಗೆ ಕೃತಜ್ಞರಾಗಿರಬೇಕು. ಅವರ ಒಂದು ಸಿದ್ಧಾಂತದ ಆಧಾರದ ಮೇಲೆ ರೂಪಗೊಂಡ ಪಕ್ಷದಲ್ಲಿರುವುದೇ ನಮ್ಮ ಭಾಗ್ಯ ಎಂದರು.

ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ಅಟಲ್’ಜಿ ಅವರು 1998ರಲ್ಲಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ನಮ್ಮ ದೇಶವು ರಾಜಕೀಯ ಅಸ್ಥಿರತೆಯ ಅವಧಿ ಕಂಡಿತ್ತು. ಸುಮಾರು 9 ವರ್ಷಗಳಲ್ಲಿ ನಾಲ್ಕು ಲೋಕಸಭಾ ಚುನಾವಣೆ ನೋಡಿದ್ದೆವು. ಭಾರತದ ಜನರು ಸಹನೆ ಕಳೆದುಕೊಂಡಿದ್ದರು ಮತ್ತು ಸರಕಾರಗಳ ಕಾರ್ಯ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದರು. ಸ್ಥಿರ ಮತ್ತು ಪರಿಣಾಮಕಾರಿ ಆಡಳಿತ ನೀಡುವ ಮೂಲಕ ಈ ಪರಿಸ್ಥಿತಿಯನ್ನು ಬದಲಾಯಿಸಿದವರು ಅಟಲ್’ಜಿ. ಸಾಮಾನ್ಯ ಹಿನ್ನೆಲೆಯಿಂದ ಬಂದಿರುವ ಅವರು ನಾಗರಿಕರ ಹೋರಾಟ ಮತ್ತು ಪರಿಣಾಮಕಾರಿ ಆಡಳಿತದ ಪರಿವರ್ತಕ ಶಕ್ತಿ ಅರಿತುಕೊಂಡಿದ್ದರು. ಅವರ ಆಡಳಿತ ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಂತಿದೆ, ಅದಕ್ಕಾಗಿ ಅವರು ಸರ್ವರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಶರಣಗೌಡ ಚಾಮನೂರ, ಆನಂದ ಇಂಗಳಗಿ, ಪ್ರಶಾಂತ ಕಾನಕುರ್ತೆ, ದಿನೇಶ ರಾಠೊಡ, ಗುರುನಾಥ ರಾಠೊಡ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *