ವಾಡಿ: ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ, ಅಂತರಾಷ್ಟ್ರೀಯ ಯೋಗ ಸಾಧಕ ಭವರಲಾಲ್ ಆರ್ಯ್ ಅವರನ್ನು ವಾಡಿ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ, ನಾಗರಾಜಗೌಡ ಗೌಡಪ್ಪನೂರ ಅವರು ಶಾಲು ಹೊದಿಸಿ ಸನ್ಮಾನಿಸಿದರು.
ಕಲಬುರಗಿ ನಗರದ ಅಪ್ಪಾ ಗಾರ್ಡನ್’ನಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗಾಭ್ಯಾಸ ಶಿಬಿರಕ್ಕೆ ಯೋಗಾಚಾರ್ಯ ಭವರ್ ಲಾಲ್ ಆರ್ಯ ಅವರು ಆಗಮಿಸಿದ್ದರು.
ಯೋಗ ಶಿಕ್ಷಕ ವೀರಣ್ಣ ಯಾರಿ ಅವರು ಆರ್ಯ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಕಳೆದ ಜೂನ್ 21ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪತಂಜಲಿ ಪರಿವಾರದಿಂದ ಯಶಸ್ವಿಯಾಗಿಸಿ ಇಡಿ ದೇಶದಲ್ಲಿಯೇ ಕರ್ನಾಟಕ ಪ್ರಥಮ ಸ್ಥಾನ ಪಡೆಯುವಲ್ಲಿ ಆರ್ಯ ಗುರುಗಳು ಶ್ರಮ ಮಹತ್ವದಾಗಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಯೋಗ ಶಿಬಿರಗಳ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಾಂತರ ಯೋಗಾಸಕ್ತರಿಗೆ ಆರೋಗ್ಯದ ಅರಿವು ಮೂಡಿಸುತ್ತಿರುವುದು ಸಾಧಾರಣ ಮಾತ್ತಲ್ಲ ಎಂದರು.
ಅವರ ಈ ಯೋಗ ಸೇವೆ ನಮಗೆ ಮಾದರಿಯಾಗಿದೆ, ಜನರ ಆರೋಗ್ಯ ಕಾಳಜಿಯೊಂದಿಗಿನ ಸ್ವಸ್ಥ ಭಾರತದ ಸಂಕಲ್ಪ ಇಂತಹ ಯೋಗ ಶಿಬಿರಗಳ ಮೂಲಕ ಸಾಕಾರಗೊಳ್ಳುವದು ಎಂದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ವಿಭಾಗದ ಪ್ರಭಾರಿ ಶಿವಾನಂದ ಸಾಲಿಮಠ, ಜಿಲ್ಲಾ ಪ್ರಭಾರಿ ಎಚ್, ಸುಭಾಶ್ಚಂದ್ರ, ಹನುಮಾನ ಸಿಂಗ್ ಠಾಕೂರ್ ಸೇರಿದಂತೆ ನೂರಾರು ಜನ ಯೋಗಾಸಕ್ತರು ಇದ್ದರು.