ಅತಿಸಾರ, ಬೇಧಿ ತಡೆಗಟ್ಟಲು ಜಿಂಕ್ ಮತ್ತು ಓಆರ್‌ಎಸ್ ನೀಡಿ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ಮಳೆಗಾಲ ಆರಂಭವಾಗಿದ್ದು ವಾತಾವರಣದಲ್ಲಿ ಬದಲಾವಣೆಯಿಂದ ಮಕ್ಕಳಲ್ಲಿ ಕೆಲ ಸಮಸ್ಯೆಗಳು ಕಂಡುಬುರುತ್ತವೆ. ಅತಿಸಾರ, ಭೇದಿ, ಅಶಕ್ತತೆ, ವಾಂತಿಯಂತಹ ಮುಂತಾದ ಕೆಲ ಸಾಮಾನ್ಯ ಕಾಯಿಲೆಗಳು ಬರುತ್ತವೆ. ಅಂತಹ ಮಕ್ಕಳಿಗೆ ಜಿಂಕ್ ಮಾತ್ರೆ ಮತ್ತು ಓಆರ್‌ಎಸ್ ದ್ರಾವಣವನ್ನು ನೀಡುವ ಮೂಲಕ ಅತಿಸಾರ, ಬೇಧಿ ತಡೆಗಟ್ಟಬಹುದಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಅಭಿಯಾನ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗ ಇವಗಳ ವತಿಯಿಂದ ಜೂನ್-16 […]

Continue Reading

ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿ ದರೋಡೆ: ಗನ್ ತೋರಿಸಿ 3 ಕೆಜಿ ಚಿನ್ನಾಭರಣ ದೋಚಿದ ಗ್ಯಾಂಗ್

ಕಲಬುರಗಿ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿದ ದರೋಡೆಕೊರರು ಮಾಲೀಕನಿಗೆ ಮಾರಕಾಸ್ತ್ರಗಳನ್ನು ತೋರಿಸಿ 2 ರಿಂದ 3 ಕೆಜಿ ಚಿನ್ನಾಭರಣ ದೋಚಿರುವ ಘಟನೆ ಕಲಬುರಗಿ ನಗರದ ಸರಾಫ್ ಬಜಾರ್‌ನಲ್ಲಿ ನಡೆದಿದೆ. ನಗರದಲ್ಲಿರುವ ಚಿನ್ನದ ಅಂಗಡಿಗೆ ಇಂದು ಮಧ್ಯಾಹ್ನ 12:30ರ ಸುಮಾರಿಗೆ 4 ಜನ ದರೋಡೆಕೋರರು ಗ್ರಾಹಕರ ಸೋಗಿನಲ್ಲಿ ನುಗ್ಗಿದ್ದರು. ಬಳಿಕ ಅಂಗಡಿ ಮಾಲೀಕ ಸಬಕಾ ಮಾಲೀಕ್ ಅವರಿಗೆ ಗನ್ ಹಾಗೂ ಮಾರಕಾಸ್ತ್ರ ತೋರಿಸಿ, ಆತನ ಕೈ ಕಾಲು ಕಟ್ಟಿ ಬಾಯಿಗೆ ಸೆಲ್ಲೊ ಟೆಪ್ ಸುತ್ತಿ ಎರಡುವರೆ ಕೆಜಿಗೂ ಅಧಿಕ […]

Continue Reading

ಪೂಜ್ಯ ಶರಣಬಸವ ಸ್ವಾಮೀಜಿಯವರಿಗೆ ಗುರುವಂದನೆ

ಕಲಬುರಗಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸವ ಬೆಳವಿಯಯ ಚರಂತೇಶ್ವರ ವಿರಕ್ತ ಮಠದ ಪೂಜ್ಯ ಶರಣಬಸವ ಸ್ವಾಮೀಜಿ ಅವರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ಗುರುವಾರ ನಗರದ ಜಯ ನಗರದಲ್ಲಿರುವ ಅನುಭವ ಮಂಟಪದಲ್ಲಿ ಗೌರವಿಸಿ, ಗುರುವಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಾ.ವಿಲಾಸವತಿ ಎಸ್.ಖೂಬಾ, ಎಚ್.ಬಿ ಪಾಟೀಲ, ಶಿವಯೋಗೆಪ್ಪಾ ಎಸ್. ಬಿರಾದಾರ, ರೇವಯ್ಯ ಮಠಪತಿ, ಚನ್ನಬಸವರಡ್ಡಿ, ಶಿವಕುಮಾರ ಬಿದರಿ, ರೇವಣಸಿದ್ದಪ್ಪ ಪಾಟೀಲ, ಬಿ.ಎಂ.ಪಾಟೀಲ ಕಲ್ಲೂರ, ರಮೇಶ ಪಾಟೀಲ, ಪರಮೇಶ್ವರ ಪಾಟೀಲ ಸೇರಿದಂತೆ ಅನೇಕರು ಇದ್ದರು.

Continue Reading

ದ್ವೇಷ ತೊರೆದು ಸಕಾರಾತ್ಮಕ ಜೀವನ ಸಾಗಿಸಲು ಕ್ಷಮಾಗುಣ ಅಗತ್ಯ: ಎಚ್.ಬಿ ಪಾಟೀಲ್

ಕಲಬುರಗಿ: ದ್ವೇಷದಿಂದ ಯಾವ ಸಾಧನೆಯೂ ಸಾಧ್ಯವಿಲ್ಲ, ಜನರಲ್ಲಿ ಸಹಾನುಭೂತಿ ಬೆಳೆಸಲು ಮತ್ತು ದ್ವೇಷವನ್ನು ತೊರೆದು ಸಕಾರಾತ್ಮಕ ಜೀವನವನ್ನು ಸಾಗಿಸಲು ಕ್ಷಮಾಗುಣ ಅಗತ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ್ ಅಭಿಮತಪಟ್ಟರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಜಾಗತಿಕ ಕ್ಷಮೆ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಯಾರಾದರು ನಮ್ಮನ್ನು ಮಾನಸಿಕವಾಗಿ ನೋಯಿಸಿದರೆ, ಆ ಆಘಾತದಿಂದ ಚೇತರಿಸಿಕೊಳ್ಳಲು ಸುಲಭವಾದ ಮಾರ್ಗವೆಂದರೆ ಅವರನ್ನು ಕ್ಷಮಿಸುವುದು. […]

Continue Reading

ಯುವಕರು ವಿವೇಕಾನಂದರ ಆದರ್ಶ ಅಳವಡಿಸಿಕೊಳ್ಳಿ: ಡಾ.ಸದಾನಂದ ಪೆರ್ಲ

ಕಲಬುರಗಿ: ರಾಷ್ಟ್ರದ ಅಭಿವೃದ್ಧಿಗೆ ಯುವಕರ ಪಾತ್ರ ಪ್ರಮುಖವಾಗಿದೆ. ಯುವ ಸಮೂಹದ ಚೇತನಾ ಶಕ್ತಿಯಾದ ವಿವೇಕಾನಂದರ ಆದರ್ಶ, ಸಂದೇಶವನ್ನು ಪ್ರತಿಯೊಬ್ಬ ಯುವಕರು ಅಳವಡಿಸಿಕೊಂಡರೆ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದು ಆಕಾಶವಾಣಿ ಕಾರ್ಯಕ್ರಮದ ನಿವೃತ್ತ ಮುಖ್ಯಸ್ಥ ಡಾ.ಸದಾನಂದ ಪೆರ್ಲ ಹೇಳಿದರು. ನಗರದ ಗಂಗಾ ನಗರದ ವಿವೇಕಾನಂದ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜಸೇವಾ ಬಳಗದ ವತಿಯಿಂದ ಜರುಗಿದ ‘ಸ್ವಾಮಿ ವಿವೇಕಾನಂದರ 123ನೇ ಸ್ಮರಣೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿವೇಕಾನಂದರು ವಿಶ್ವಕ್ಕೆ ಹೊಸ ಬೆಳಕು ನೀಡಿದವರು. ಅವರ ಒಂದೊಂದು ಮಾತು ಯುವಕರಿಗೆ […]

Continue Reading

ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಅಗತ್ಯ: ಎಚ್.ಬಿ ಪಾಟೀಲ

ಕಲಬುರಗಿ:  ಪ್ಲಾಸ್ಟಿಕ್ ಬಳಕೆ ಹಳ್ಳಿ, ನಗರ ಸೇರಿದಂತೆ ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇಂದು ಜಗತ್ತನ್ನು ಆಳುತ್ತಿರುವುದು  ಪ್ಲಾಸ್ಟಿಕ್, ಮಣ್ಣಲ್ಲಿ ಕೊಳೆಯದ, ನೀರಲ್ಲಿ ಕರಗದ, ಗಾಳಿಯಲ್ಲಿ ಲೀನವಾಗದೆ ಭೂಮಿಯ ಮೇಲೆ ರಾಶಿ-ರಾಶಿ ಕಸವಾಗಿ, ಮಾಲಿನ್ಯವಾಗಿ ಪರಿಸರ ಹಾಳು ಮಾಡುತ್ತಿರುವ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ ಪಾಟೀಲ ಹೇಳಿದರು.     ನಗರದ ಆಳಂದ ರಸ್ತೆಯ ಜೆ.ಆರ್.ನಗರದಲ್ಲಿರುವ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ಅಂತಾರಾಷ್ಟ್ರೀಯ ಪ್ಲಾಸ್ಟಿಕ್ […]

Continue Reading

ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫ

ಕಲಬುರಗಿ: ಹಿಂದೂ ಮತ್ತು ಮುಸ್ಲಿಂ ಧರ್ಮಗಳ ನಡುವೆ ಸಮನ್ವಯತೆ ತರಲು ಶ್ರಮಿಸಿದ, ಎಲ್ಲರನ್ನು ಸಮದೃಷ್ಟಿಯಿಂದ ನೋಡಿದ ತತ್ವಜ್ಞಾನಿ ಸಂತ ಶಿಶುನಾಳ ಶರೀಫ ಅವರು ಕರ್ನಾಟಕದ ಕಬೀರರಾಗಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.   ನಗರದ ಆಳಂದ ರಸ್ತೆಯ ಶಿವನಗರದ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ಸಂತ ಶಿಶುನಾಳ ಶರೀಫ್ ರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರೀಫ್ ಅವರು ಮಾತನಾಡಿ, ಸಮಾನತೆಯ ಹರಿಕಾರ. ವಿಚಾರವಾದಿ, ವಿಮರ್ಶಕರು, ಸಮಾಜ ಸುಧಾರಕರು, ನೀತಿ […]

Continue Reading

ಹಳಕಟ್ಟಿಯವರ ಜೀವನ ಕೊಡುಗೆ ಪಠ್ಯದಲ್ಲಿ ಸೇರ್ಪಡೆಯಾಗಲಿ

ಕಲಬುರಗಿ: ಡಾ.ಫ.ಗು ಹಳಕಟ್ಟಿಯವರ ಜೀವನ-ಸಾಧನೆ-ಕೊಡುಗೆಯನ್ನು ಶಾಲಾ-ಕಾಲೇಜುಗಳ ಪಠ್ಯದಲ್ಲಿ ಸೇರ್ಪಡೆಗೊಳ್ಳಬೇಕು ಎಂದು ಶರಣ ಚಿಂತಕ ಡಾ.ರಾಜಶೇಖರ ಪಾಟೀಲ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಡಾ.ಫ.ಗು ಹಳಕಟ್ಟಿಯವರ 145ನೇ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿಯೇ ಅದ್ಭುತ ಬದುಕನ್ನು ಕಟ್ಟಿಕೊಡುವ ಶ್ರೇಷ್ಠವಾದದ್ದು ವಚನ ಸಾಹಿತ್ಯವಾಗಿದೆ. ತಮ್ಮ ಆಸ್ತಿಯನ್ನು ಮಾರಾಟ ಮಾಡಿ, ಮುದ್ರಣ ಘಟಕ ಸ್ಥಾಪಿಸಿ, ವಚನಗಳನ್ನು […]

Continue Reading

ಡಾ.ಎಸ್.ಎಸ್ ಗುಬ್ಬಿಯವರಿಗೆ ಅಭಿನಂದನೆ

ಕಲಬುರಗಿ: ಸಮಾಜಮುಖಿ ವೈದ್ಯ ಡಾ. ಎಸ್.ಎಸ್ ಗುಬ್ಬಿಯವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಡಾ. ಅನುಪಮಾ ನಿರಂಜನ ವೈದ್ಯ ಸಾಹಿತ್ಯ ಪ್ರಶಸ್ತಿ ದೊರೆತಿರುವ ಪ್ರಯುಕ್ತ ಡಾ.ಎಸ್.ಎಸ್ ಗುಬ್ಬಿ ಅಭಿನಂದನಾ ಸಮಿತಿಯು ನಗರದ ಜಯನಗರದ ಅನುಭವ ಮಂಟಪದಲ್ಲಿ ರವಿವಾರ ಏರ್ಪಡಸಿದ್ದ ಅಭಿನಂದನಾ ಹಾಗೂ ಹೃದಯವಂತ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸತ್ಕರಿಸಿ, ಅಭಿನಂದಿಸಲಾಯಿತು. ಬಳಗದ ಗೌರವ ಸಲಹೆಗಾರ ಡಾ.ವಾಸುದೇವ ಸೇಡಂ ಎಚ್, ಅಧ್ಯಕ್ಷ ಎಚ್.ಬಿ ಪಾಟೀಲ, ಸದಸ್ಯರಾದ ಡಾ.ಸಂಗಮೇಶ ಹಿರೇಮಠ, […]

Continue Reading

ವಿಧವೆಯರ ಬಗ್ಗೆ ಉತ್ತಮ ಮನೋಭಾವನೆ ಅಗತ್ಯ

ಕಲಬುರಗಿ: ಉತ್ತಮ ಮನೋಭಾವನೆಯಿಂದ ಗೌರವಿಸಿ, ನೆಮ್ಮದಿಯಿಂದ ಬದುಕಲು ಅನವು ಮಾಡಿಕೊಡುವುದು ಜವಾಬ್ದಾರಿಯುತ ಸಮಾಜದ ಆದ್ಯ ಕರ್ತವ್ಯವಾಗಿದೆ ಎಂದು ಉಪನ್ಯಾಸಕ, ಪ್ರಗತಿಪರ ಚಿಂತಕ ಎಚ್.ಬಿ ಪಾಟೀಲ್ ಆಶಯ ವ್ಯಕ್ತಪಡಿಸಿದರು. ನಗರದ ಹೊರವಲಯದ ರಾಣೆಸ್ಪಿರ್ ದರ್ಗಾ ರಸ್ತೆಯ ನೆಮ್ಮದಿ ಹಿರಿಯರ ಮನೆ(ವೃದ್ಧಾಶ್ರಮ)’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗದಿಂದ ಮಂಗಳವಾರ ಸಂಜೆ ಜರುಗಿದ ‘ಅಂತಾರಾಷ್ಟ ವಿಧವೆಯರ ದಿನಾಚರಣೆ’ ವಿಧವಾ ತಾಯಂದಿರಿಗೆ ಗೌರವಿಸಿ, ನಂತರ ಮಾತನಾಡಿದ ಅವರು, ಯಾವುದೆ ಮಹಿಳೆಯು ತನ್ನ ಪತಿ ಕಳೆದುಕೊಂಡು ವಿಧವೆಯಾಗಬೇಕು ಎಂದು ಎಂದಿಗೂ ಕೂಡಾ ಬಯಸುವುದಿಲ್ಲ. ಕಾರಣಾಂತರಗಳಿಂದ […]

Continue Reading