ಭಕ್ತಿ, ಶಕ್ತಿಯ ಸಾಂಕೇತಿಕ ನೃತ್ಯಗಳೆ ಗರ್ಬಾ, ದಾಂಡಿಯಾ ನೃತ್ಯ

ನಗರದ

ಕಲಬುರಗಿ: ಯಾವುದೆ ಉಪಕರಣವಿಲ್ಲದೃ ಕೈ ಚಲನೆಯ ಮೂಲಕ ಮಾಡುವ ಗರ್ಬಾ ನೃತ್ಯ ಭಕ್ತಿಯ ಸಾಂಕೇತಿಕವಾದರೆ, ಎರಡು ಕೋಲುಗಳಿಂದ ಮಾಡುವ ಶಕ್ತಿಯ ಸಂಕೇತ ತೋರಿಸುವುದು ದಾಂಡಿಯಾ ನೃತ್ಯವಾಗಿದೆ. ಇದು ದುರ್ಗಾ ದೇವಿಯು ಮಹಿಷಾಸುರನ ಮೇಲೆ ವಿಜಯ ಸಾಧಿಸಿದ ಪೌರಾಣಿಕ ಹಿನ್ನೆಲೆಯೇ ಈ ನವರಾತ್ರಿ ಉತ್ಸವದ ವಿಶೇಷ ಎಂದು ಅಂಡಗಿ ಪ್ರತಿಷ್ಠಾನ ಕಾರ್ಯದರ್ಶಿ ರೇಖಾ ಅಂಡಗಿ ಹೇಳಿದರು.

ನಗರದ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯ ವಿದ್ಯಾನಗರ ಕಾಲೋನಿಯ ರಾಜ್ವಿಕಾ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ದಾಂಡಿಯಾ ಮತ್ತು ಗರ್ಬಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ನಂತರ ಗರ್ಬಾ ನೃತ್ಯದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯಗುರು ಶಿಲ್ಪಾ ಕೋಟೆ ಮಾತನಾಡಿ, ದೇವಿಯನ್ನು ಒಲಿಸಿಕೊಳ್ಳಲು ವಿವಿಧ ಪೂಜೆ ಆರಾಧನೆಗಳಲ್ಲಿ ಗರ್ಬಾ ಹಾಗೂ ದಾಂಡೀಯಾ ಕೂಡ ವಿಶೇಷ ಆರಾಧನೆಗಳಾಗಿವೆ, ಹೀಗಾಗಿ ನಮ್ಮ ಶಾಲೆಯ ವಿದ್ಯಾರ್ಥಿನೀಯರಿಗೆ, ಶಿಕ್ಷಕೀಯರಿಗೆ ಮತ್ತು ಪಾಲಕ ಮಹಿಳೆಯರಿಗೆ ಈ ವರ್ಷದ ನವರಾತ್ರಿ ಅಂಗವಾಗಿ ಗರ್ಬಾ, ದಾಂಡಿಯ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾನಗರ ಕಾಲೋನಿಯ ಅಕ್ಕಮಹಾದೇವಿ ಮಹಿಳಾ ಟ್ರಸ್ಟಿನ ಸದಸ್ಯರು ದಾಂಡಿಯಾ ಮತ್ತು ಗರ್ಬಾ ನೃತ್ಯ ನರ್ತಿಸಿದರು

ಮಹಾನಗರ ಪಾಲಿಕೆಯ ಸದಸ್ಯೆ ಯಂಕಮ್ಮ ಜಗದೇವ ಗುತ್ತೇದಾರ ಕಾರ್ಯಕ್ರಮದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯಲ್ಲಿ ಶಾಲೆಯ ಶಿಕ್ಷಕೀಯರಾದ ರಾಜೇಶ್ವರಿ ಪಾಟೀಲ, ನಸೀಂ, ದೀಪಿಕಾ, ಪವಿತ್ರ, ಕವಿತಾರಾಣಿ ಮತ್ತು ಗೀತಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಮತ್ತು ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿನೀಯರು, ಮಕ್ಕಳ ತಾಯಂದಿರು ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *