ನಿರಂತರ ಅಧ್ಯಯನ, ಕಠಿಣ ಪರಿಶ್ರಮದಿಂದ ಸಾಧಕರಾಗಲು ಸಾಧ್ಯ

ನಗರದ

ಕಲಬುರಗಿ: ಸಾಧನೆಗೆ ಬಡತನ, ಸಿರಿತನ ಅಡ್ಡಿಯಾಗದು. ನಿರಂತರ ಅಧ್ಯಯನ, ಕಠಿಣ ಪರಿಶ್ರಮದಿಂದ ಪ್ರತಿಯೊಬ್ಬರು ಸಾಧಕರಾಗಬಹುದು ಎಂದು ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.

ನಗರದ ಹೊಸ ಜೇವರ್ಗಿ ರಸ್ತೆಯ ಗೆಟ್ಸ ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಬಸವೇಶ್ವರ ಸೇವಾ ಬಳಗ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಸಕರಾತ್ಮಕ ಗುಣಗಳಿಂದ ಆದರ್ಶ ವ್ಯಕ್ತಿಯಾಗಲು ಸಾಧ್ಯ, ಸೋಮಾರಿತನ, ಆಲಸ್ಯ, ದುರವ್ಯಸನಗಳೇ ನಮ್ಮ ವೈರಿಗಳಾಗಿವೆ, ಜಗತ್ತಿನ ಸಾಧಕರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು, ನಿಶ್ಚಿತ ಗುರಿ ಸಾಧಿಸಬೇಕು, ಉತ್ತಮ ಸಂಸ್ಕಾರ ಪಡೆದು ಆದರ್ಶ ವ್ಯಕ್ತಿಗಳ ಸಾಲಿನಲ್ಲಿ ನಮ್ಮ ಮಕ್ಕಳು ಸೇರಬೇಕು. ಮಹಾತ್ಮ ಬುದ್ಧ, ಮಹಾ ಮಾನವತಾವಾದಿ ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ, ಅಧ್ಯಾತ್ಮ ಶಿಖರ ಸ್ವಾಮಿ ವಿವೇಕಾನಂದ ಮುಂತಾದವರ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಬಸವೇಶ್ವರ ಸೇವಾ ಬಳಗದ ಅಧ್ಯಕ್ಷ ಪ್ರೊ ಎಚ್.ಬಿ ಪಾಟೀಲ ಮಾತನಾಡಿ, ಶಿಸ್ತು, ಸಹನೆ, ನಿರಂತರ ಪ್ರಯತ್ನದಿಂದ ಗುರಿಸಾಧಿಸಬೇಕು, ಸಾಧನೆ ಎಂಬುದು ಸಾಧಕರ ಸ್ವತ್ತಾಗಿದೆ ಎಂದರು.

ಪ್ರಾಚಾರ್ಯ ಡಾ. ಎಚ್.ಬಿ ಕಂಟೆಗೋಳ ಮಾತನಾಡಿ, ಆತ್ಮವಿಶ್ವಾದಿಂದ ಗುರಿ ತಲುಪುವ ಕೆಲಸ ಮಾಡಬೇಕು, ಸಾಮಾನ್ಯ ಕುಟುಂಬದಿಂದ ಬಂದವರು ಸಾಧಕರಾದ ಅನೇಕ ಸಾಧಕರೇ ನಮಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ಸಾಧನೆಗೆ ಅಸಾಧ್ಯ ಎಂಬುದಿಲ್ಲ, ಕಠಿಣ ಪರಿಶ್ರಮ, ಆತ್ಮ ವಿಶ್ವಾದಿಂದ ಗುರಿಸಾಧಿಸಬೇಕು. ವಿನಯತೆ ರೂಢಿಸಿಕೊಳ್ಳಬೇಕು, ಸಕರಾತ್ಮಕ ಮೌಲ್ಯಗಳು ವ್ಯಕ್ತಿತ್ವಕ್ಕೆ ಭೂಷಣವಾಗಿವೆ, ಸದ್ಗುಣಗಳಿಂದ ಆದರ್ಶ ಸಮಾಜ ನಿರ್ಮಿಸಲು ಸಾಧ್ಯ.

ಮುಡುಬಿ ಗುಂಡೇರಾವ
ಸಂಶೋಧಕ ಸಾಹಿತಿಗಳು

ಈ ಸಂದರ್ಭದಲ್ಲಿ ಶಿವಲಿಂಗಪ್ಪ ತಳವಾರ, ನೀಲಮ್ಮ ಹಿರೇಮಠ, ಉಮಾದೇವಿ ಟಿ, ಪ್ರಜ್ಞಾ ಸೇರಿದಂತೆ ಅನೇಕರು ಇದ್ದರು.

ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ನಿರೂಪಿಸಿದರು.

Leave a Reply

Your email address will not be published. Required fields are marked *