ಅತಿವೃಷ್ಟಿಯಿಂದ ಬೆಳೆ ಹಾನಿ, ಎಕರೆಗೆ 25 ಸಾವಿರ ಪರಿಹಾರ ನೀಡಲು ಕರವೇ ಆಗ್ರಹ

ಚಿತ್ತಾಪುರ: ಅತಿವೃಷ್ಟಿಯಿಂದ ಮುಂಗಾರು ಬೆಳೆಗಳು ಹಾನಿಯಾಗಿವೆ. ಹೀಗಾಗಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಮತ್ತು ಹೆಸರು, ಉದ್ದು ಬೆಳೆಗೆ ಸರ್ಕಾರದಿಂದ ಯೋಗ್ಯ ಬೆಲೆಯಲ್ಲಿ ಖರೀದಿಸಬೇಕು ಎಂದು ಕರವೇ ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಗ್ರಹಿಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಮಾತನಾಡಿ, ಎರಡು ತಿಂಗಳುಗಳಿಂದ ಸುರಿದ ಭಾರಿ ಮಳೆಯಿಂದ ಮುಂಗಾರು ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ರೈತರು ಬಹಳ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅತಿವೃಷ್ಟಿಯಿಂದ ತಾಲೂಕಿನ ಬೆಳೆಗಳು […]

Continue Reading

ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಪಾಲಕರ ಸಭೆ ಪೂರಕ

ಕಲಬುರಗಿ: ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಪಾಲಕರ ಸಭೆಗಳು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ಜೇವರ್ಗಿ ಪಟ್ಟಣದ ಕೋರ್ಟ್ ಸಮೀಪದ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಜರುಗಿದ ‘ಪಾಲಕರ ಸಭೆ’ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರ ಸಭೆಗಳು ಮಕ್ಕಳ ಶಿಕ್ಷಣಕ್ಕೆ ನಿರ್ಣಾಯಕವಾಗಿವೆ. ಏಕೆಂದರೆ ಪಾಲಕರು ಮತ್ತು ಶಿಕ್ಷಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಮಗುವಿನ ಶೈಕ್ಷಣಿಕ, ಸಾಮಾಜಿಕ ಮತ್ತು ಭಾವನಾತ್ಮಕ ಪ್ರಗತಿಯನ್ನು ಚರ್ಚಿಸಲು ಅವಕಾಶ ಒದಗಿಸುತ್ತವೆ. ಈ ಸಭೆಗಳು ಪೋಷಕರು ತಮ್ಮ […]

Continue Reading

ಕಾಗಿಣಾ- ಭೀಮಾ ನದಿಗಳ ಸಂಗಮವು ಕನ್ನಡ ಸಾಹಿತ್ಯ ಸಂಸ್ಕೃತಿಗೆ ಪ್ರೇರಣೆ: ಮುಡುಬಿ ಗುಂಡೇರಾವ

ಚಿತ್ತಾಪುರ: ಕಾಗಿಣಾ- ಭೀಮಾ ನದಿಗಳ ಸಂಗಮವು ಕನ್ನಡ ಸಾಹಿತ್ಯ ಸಂಸ್ಕೃತಿಗೆ ಪ್ರೇರಣೆ ನೀಡಿದೆ ಎಂದು ಸಂಶೋಧಕ ಮುಡುಬಿ ಗುಂಡೇರಾವ ಅಭಿಮತವ್ಯಕ್ತ ಪಡಿಸಿದರು. ತಾಲೂಕಿನ ಕುಂದನೂರು- ಹೊನಗುಂಟಿ ಸಮೀಪದ ಕೂಡಲ ಸಂಗಮನಾಥ ದೇವಾಲಯದಲ್ಲಿ ಗ್ರಾಮದ ಬಸವೇಶ್ವರ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-35ದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕೊಂದನೂರು, ಹೊನಗುಂಟಾ, ಶಹಬಾದ, ಭಂಕೂರ, ಮರತೂರ, ಮಾಲಗತ್ತಿ ಮುಂತಾದ ಗ್ರಾಮಗಳು ಪ್ರಾಚೀನ ಕಾಲದಲ್ಲಿ ಪ್ರಸಿದ್ದಿ ಹೊಂದಿದ್ದವು. ಧರ್ಮ, ಆಧ್ಯಾತ್ಮ, ಶಿಕ್ಷಣ, ಕಲೆ, […]

Continue Reading

ಪ್ರಾಚೀನ ಕಾಲದ ಅಗ್ರಹಾರ, ವಾಣಿಜ್ಯ ಕೇಂದ್ರ ಮಂಗಲಗಿ: ಮುಡುಬಿ ಗುಂಡೇರಾವ

ಕಾಳಗಿ: ಕನ್ನಡಿಗರ ಸಾಧನೆಗಳನ್ನು ಸಾದರಪಡಿಸುವ ಮಂಗಲಗಿಯ ಸ್ಮಾರಕಗಳು ನಾಡಿನ ಇತಿಹಾಸ ಕಟ್ಟಿಕೊಡುವಲ್ಲಿ ಸಹಕಾರಿಯಾಗಿದೆ. 11ನೇ ಶತಮಾನದಲ್ಲಿ ವಿವಿಧ ಧರ್ಮಿಯರು ಬಾಳಿ ಬೆಳಗಿದ ಸಾಮರಸ್ಯದ ನೆಲವೀಡು ಇದಾಗಿದೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು. ತಾಲೂಕಿನ ಮಂಗಲಗಿ ಗ್ರಾಮದ ಐತಿಹಾಸಿಕ ಕ್ಷೇತ್ರ ಮಲ್ಲಿಕಾರ್ಜುನ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಕಲಬುರಗಿಯ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-31ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಂಗಲಗಿ ಗ್ರಾಮವು ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರ […]

Continue Reading

ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ: ಶಂಕರಗೌಡ ಪಾಟೀಲ

ಚಿತ್ತಾಪುರ: ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪರಿಸರ ಕಾಪಾಡಿಕೊಳ್ಳಬೇಕು ಎಂದು ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್-ಮಿಲಾದ್ ಹಬ್ಬದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ್ ಹಬ್ಬದ ಮತ್ತು ಈದ್ – ಮಿಲಾದ್ ಒಟ್ಟಿಗೆ ಬಂದಿದ್ದು, ಹೀಗಾಗಿ ಎಲ್ಲರೂ ಸಂತೋಷದಿಂದ ಹಬ್ಬಗಳು ಆಚುಸಬೇಕು, ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಇತರರಿಗೆ ತೊಂದರೆಯಾಗದಂತೆ ಹಬ್ಬಗಳು ಆಚುಸಬೇಕು ಎಂದರು. ಗಣೇಶ ಪ್ರತಿಷ್ಠಾಪಿಸುವ ಉತ್ಸವ ಮಂಡಳಿಯವರುಪೊಲೀಸ್ ಠಾಣೆಗೆ ಮಾಹಿತಿ […]

Continue Reading

ಪ್ರಾಚೀನ ಅವಶೇಷಗಳ ತಾಣ ಹೊಳಕುಂದಾ: ಮುಡಬಿ

ಕಲಬುರಗಿ: ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯರ, ಬಹುಮನಿ ಅರಸರ ಕಾಲದ ಅನೇಕ ಅವಶೇಷಗಳು, ಸ್ಮಾರಕಗಳುಳ್ಳ ತಾಣ ಹೊಳಕುಂದಾ ಗ್ರಾಮವಾಗಿದೆ. ಇದರ ಇತಿಹಾಸ ರೋಚಕವಾಗಿದೆ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಹೇಳಿದರು. ಕಮಲಾಪುರ ತಾಲೂಕಿನ ಹೊಳಕುಂದಾ ಗ್ರಾಮದ ಐತಿಹಾಸಿಕ ರುಕ್ಮಿಣಿ-ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಕಲಬುರಗಿ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-30ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕನ್ನಡಿಗರ ಧರ್ಮ, ಆಧ್ಯಾತ್ಮಿಕತೆ, ಶಿಕ್ಷಣ, ಆಡಳಿತ, ಶೌರ್ಯ, ಪರಾಕ್ರಮ ಸಾದರ […]

Continue Reading

ನಾಲವಾರ: ಆ.21 ರಂದು ಭಕ್ತರಿಗೆ ಗುರುದೀಕ್ಷಾ, ಅಯ್ಯಾಚಾರ ಕಾರ್ಯಕ್ರಮ

ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಇಷ್ಟಲಿಂಗ ಸಹಿತ ಗುರುಪಾದಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ ಭಾವದಿಂದ ನಡೆಯುತ್ತಿದ್ದು, ಶ್ರಾವಣ ಸಂಭ್ರಮ ಕಳೆಗಟ್ಟಿದೆ ಎಂದು ಮಠದ ವಕ್ತಾರ ಮಹಾದೇವ ಕೆ ಗಂವ್ಹಾರ ತಿಳಿಸಿದ್ದಾರೆ. ಪ್ರತಿ ವರ್ಷದ ಪದ್ಧತಿಯಂತೆ ಶ್ರಾವಣದ ಕೊನೆಯ ಗುರುವಾರ ಆಗಸ್ಟ್ 21ರಂದು ಶ್ರೀಮಠದ ಪೀಠಾಧಿಪತಿ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಭಕ್ತರಿಗೆ ಗುರುದೀಕ್ಷೆ ಹಾಗೂ ಜಂಗಮ […]

Continue Reading

ನ್ಯಾ.ಎಚ್‌.ಎನ್‌ ನಾಗಮೋಹನ್‌ ದಾಸ್‌ ಒಳಮೀಸಲಾತಿ ವರದಿ ಅವೈಜ್ಞಾನಿಕ ಎಂಬ ಬೆಣ್ಣೂರಕರ್ ಆರೋಪ ಸತ್ಯಕ್ಕೆ ದೂರ: ದೀಪಕ್ ಹೊಸೂರಕರ್

ಚಿತ್ತಾಪುರ: ನ್ಯಾ.ಎಚ್‌.ಎನ್‌ ನಾಗಮೋಹನ್‌ ದಾಸ್‌ ಒಳಮೀಸಲಾತಿ ವರದಿ ಅವೈಜ್ಞಾನಿಕ ಎಂಬ ಜಿ‌‌.ಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಆರೋಪ ಸತ್ಯಕ್ಕೆ ದೂರ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸೂರಕರ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಗಸ್ಟ್ 19ರ ವಿಶೇಷ ಸಂಪುಟ ಸಭೆಯಲ್ಲಿ ಒಳ ಮಿಸಲಾತಿ ಜಾರಿಗೆ ಅಂತಿಮ ತೀರ್ಮಾನ ಸರ್ಕಾರ ಕೈಗೊಳ್ಳಲೇಬೇಕು. ಇಲ್ಲವಾದರೆ ರಾಜ್ಯದ 29 ಸಾವಿರ ಹಳ್ಳಿಗಳಲ್ಲಿ ಅಸ್ಪೃಶ್ಯ ಸಮಾಜದವರು ಬೀದಿಗಿಳಿದು ಮಾಡು ಇಲ್ಲವೇ ಮಡಿ ಹೋರಾಟ […]

Continue Reading

ದಂಡೋತಿ: ಪ್ರವಾಹದಲ್ಲಿ ಕಿತ್ತುಹೋದ ಸೇತುವೆ ರಸ್ತೆ

ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದಹತ್ತಿರದ ಕಾಗಿಣಾ ನದಿಗೆ ಕಟ್ಟಿರುವ ಸೇತುವೆ ಮೇಲಿನ ರಸ್ತೆ ಪ್ರವಾಹದಲ್ಲಿ ಕಿತ್ತು ಹೋಗಿದೆ. ಸೇತುವೆ ಮೇಲಿನ ಡಾಂಬರ್ ರಸ್ತೆ ಮತ್ತು ಸಿಮೆಂಟ್ ಕಾಂಕ್ರಿಟ್ ರಸ್ತೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಗುರುವಾರ ದಿನವಿಡಿ ಪ್ರವಾಹದಲ್ಲಿ ಸೇತುವೆ ಮುಳುಗಿತ್ತು. ಶುಕ್ರವಾರ ಬೆಳಿಗ್ಗೆ ಪ್ರವಾಹ ಕಡಿಮೆಯಾದಾಗ ಸೇತುವೆ ಮೇಲಿನ ರಸ್ತೆ ಕಿತ್ತು ಹೋಗಿರುವುದು ಬೆಳಕಿಗೆ ಬಂದಿದೆ. ಸೇತುವೆ ಮೇಲಿನ ಅನೇಕ ಸಿಮೆಂಟ್ ಕಂಬಗಳು ಕೊಚ್ಚಿಕೊಂಡು ಹೋಗಿವೆ. ಸೇತುವೆ ಮೇಲೆ ಅಳವಡಿಸಿದ ಮೊಬೈಲ್ ನೆಟ್‌ವರ್ಕ್ ಮತ್ತು ಕೇಬಲ್ ಕಿತ್ತು […]

Continue Reading

ದಂಡೋತಿ ಸೇತುವೆ ಮುಳುಗಡೆ: ಸಂಚಾರ ಸ್ತಬ್ಧ

ಚಿತ್ತಾಪುರ: ಬುಧವಾರ ರಾತ್ರಿ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗಿದೆ. ಗುರುವಾರ ಬೆಳಿಗ್ಗೆ ಕಾಗಿಣಾ ನದಿಯಲ್ಲಿ ಭಾರಿ ಪ್ರವಾಹ ಬಂದು ತಾಲೂಕಿನ ದಂಡೋತಿ ಸಮೀಪದ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮಾರ್ಗದ ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ಕಾಗಿಣಾ ನದಿಯ ಮೇಲ್ಭಾಗದ ಸೇಡಂ, ಕಾಳಗಿ, ಚಿಂಚೋಳಿ ತಾಲೂಕುಗಳಲ್ಲಿ ಮಳೆಯಾಗಿದ್ದರಿಂದ ಕಾಗಿಣಾ ನದಿ ತುಂಬಿ ಹರಿಯುತ್ತಿದೆ. ಬೆಣ್ಣೆತೊರಾ ಜಲಾಶಯದಿಂದ ನೀರು ಹೊರಗೆ ಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಏರುಗತಿಯಲ್ಲಿದ್ದು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ಆಚೆಗಿರುವ ಗ್ರಾಮಗಳ ವಿದ್ಯಾರ್ಥಿಗಳು ಬೆಳಿಗ್ಗೆ ಪಟ್ಟಣದ ವಿವಿಧ […]

Continue Reading