ಚಿತ್ತಾಪುರ: ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಶೇ.6, ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಮೀಸಲು ನೀಡುವಂತೆ ಆಗ್ರಹಿಸಿ ಬಂಜಾರ, ಭೋವಿ, ಕೊರಚಾ ಮತ್ತು ಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ಚಂದು ಜಾಧವ ಮಾತನಾಡಿ, ಒಳ ಮೀಸಲಾತಿ ಕುರಿತು ನಾಗಮೋಹನ್‌ದಾಸ್ ಆಯೋಗವು ಮಾಡಿರುವ ಶಿಫಾರಸ್ಸು ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರ ಮತ್ತು ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ 2022ರ ಸೆಕ್ಷನ್ (1)ರ ಅಡಿಯಲ್ಲಿ ರಚಿಸಲಾದ ಕರಡು ನಿಯಮಗಳಿಗೆ ಆಕ್ಷೇಪಣೆ ಇದೆ ಎಂದು ಹೇಳಿದರು.
ಈ ಸಮುದಾಯಗಳ ಜನಸಂಖ್ಯೆ ಹೆಚ್ಚಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಹಿಂದುಳಿದಿರುವದರಿಂದ ಬಂಜಾರ, ಭೋವಿ, ಕೋರಮಾ, ಕೋರಚಾ ಸಮುದಾಯಕ್ಕೆ ಶೇ.6 ಮತ್ತು ಅಲೇಮಾರಿ ಸಮುದಾಯಕ್ಕೆ ಶೇ.1 ರಷ್ಟು ಹಂಚಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಗದೀಶ ಚವ್ಹಾಣ, ಮಹೇಶ ಕಾಶಿ, ವಿಠಲ್ ಕಟ್ಟಿಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ಭೋವಿ ವಡ್ಡರ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ರಾಮಯ್ಯ ಪೂಜಾರಿ, ತಾಲೂಕು ಅಧ್ಯಕ್ಷ ಹಣಮಂತ ಕಟ್ಟಿಮನಿ, ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಮುಖಂಡರಾದ ಗೋಪಾಲ ರಾಠೋಡ, ಹೀರು ರಾಠೋಡ, ದೇವಿದಾಸ ಚವ್ಹಾಣ, ಶಿವು ಭಜಂತ್ರಿ, ವಿಜಯಕುಮಾರ ಚವ್ಹಾಣ ಯಾಗಪೂರ, ವಿನೋಧ ಪವಾರ, ರಾಮು ಹರವಾಳ, ಸುಭಾಷ್ ಪವಾರ, ಚಂದ್ರು ಗುಂಡಲಕರ್, ಜಗದೀಶ್ ಪವಾರ, ಕುಮಾರ ಚವ್ಹಾಣ, ವಿಜಯ ರಾಠೋಡ, ಅಶೋಕ್ ಕಾಶಿ, ರಾಜು ರಾಠೋಡ, ಸಂತೋಷ ರಾಠೋಡ, ವೆಂಕಟೇಶ್ ಇಂಗಳಗಿ ಸೇರಿದಂತೆ ಅನೇಕರು ಇದ್ದರು.