ಹಂಪಿ ಉತ್ಸವ ಯುವ ಕವಿಗೋಷ್ಠಿಗೆ ವಿಜಯಭಾಸ್ಕರರೆಡ್ಡಿ ಆಯ್ಕೆ

ಸೇಡಂ: ವಿಜಯನಗರ ಜಿಲ್ಲೆಯಲ್ಲಿ ಫೆ.28 ರಂದು ನಡೆಯುವ ಪ್ರಖ್ಯಾತ ಹಂಪಿ ಉತ್ಸವದ ಯುವ ಕವಿಗೋಷ್ಠಿಗೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕವಿ, ಪತ್ರಕರ್ತ ವಿಜಯಭಾಸ್ಕರರೆಡ್ಡಿ ಅವರು ಆಯ್ಕೆಯಾಗಿದ್ದಾರೆ. ಫೆ.28 ರಿಂದ ಮಾ.2 ವರೆಗೆ ನಡೆಯಲಿರುವ ಹಂಪಿ ಉತ್ಸವದಲ್ಲಿ ಮಾರ್ಚ್ 2 ರಂದು ಬೆಳಿಗ್ಗೆ 10.30 ಕ್ಕೆ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಜರುಗಲಿರುವ ಯುವ ಕವಿ ಗೋಷ್ಠಿಯಲ್ಲಿ ವಿಜಯಭಾಸ್ಕರರೆಡ್ಡಿ ತಮ್ಮ ಕವಿತೆ ವಾಚಿಸಲಿದ್ದಾರೆ. ವಿಮರ್ಶಕ ಡಾ.ವೆಂಕಟಗಿರಿ ದಳವಾಯಿ ಉದ್ಘಾಟಿಸಲಿದ್ದಾರೆ, ಸಾಹಿತಿ ಎಸ್.ವಿ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.

Continue Reading

ಸಾಮ್ರಾಟ ಅಶೋಕ ಸಮಾಜಮುಖಿ ಅರಸ

ಚಿತ್ತಾಪುರ: ಇಂದ್ರಿಯಗಳ ಸಂಯಮ, ಭಾವಶುದ್ಧಿ ಚಿಂತನೆ, ಕೃತಜ್ಞತಾ ಭಾವ, ದೃಢ ಭಕ್ತಿ, ದಯೆ, ದಾನ, ಆತ್ಮ ಶುದ್ಧತೆ, ಸತ್ಯ, ಸೇವಾಗುಣದಂತಹ ತತ್ವಗಳನ್ನು ಅಳವಡಿಸಿಕೊಂಡು ಎಲ್ಲಾ ಪ್ರಜೆಗಳಿಗೆ ಸಮಾನವಾಗಿ ಕಂಡ ಸಾಮ್ರಾಟ ಅಶೋಕ ಅಪರೂಪದ ಅರಸನಾಗಿದ್ದರು ಎಂದು ಸಮಾಜ ಸೇವಕ, ಚಿಂತಕ ಡಾ.ಸುನೀಲಕುಮಾರ ಎಚ್ ವಂಟಿ ಹೇಳಿದರು. ತಾಲೂಕಿನ ಸನ್ನತಿ ಗ್ರಾಮದ ಬುದ್ಧ ವಿಹಾರದ ಅಶೋಕ ಶಾಸನದ ಸ್ಥಳಕ್ಕೆ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ಐತಿಹಾಸಿಕ ಕ್ಷೇತ್ರಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-11’ರಲ್ಲಿ ಮಾತನಾಡಿದ […]

Continue Reading

ನಾಲವಾರ ಮಠ ಕಲಾವಿದರ ಆಶ್ರಯ ಧಾಮ: ನಟ ಶರಣ್

ಚಿತ್ತಾಪುರ: ನಾಲವಾರದ ಸದ್ಗುರು ಕೋರಿಸಿದ್ದೇಶ್ವರ ಸಂಸ್ಥಾನ ಮಠವು ನನ್ನಂತಹ ಅನೇಕ ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸಿದ ಆಶ್ರಯಧಾಮ ಎಂದು ಕನ್ನಡದ ಖ್ಯಾತ ಚಿತ್ರನಟ ಶರಣ್ ಹೇಳಿದರು. ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಸಂಸ್ಥಾನ ಜಾತ್ರಾಮಹೋತ್ಸವ ಸಾಂಸ್ಕೃತಿಕ ಸಮಾರೋಪ ಸಮಾರಂಭದ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು, ಪಕ್ಕದ ಯಾದಗಿರಿ ಜಿಲ್ಲೆಯ ಅಮೇರಿಕನ್ ಆಸ್ಪತ್ರೆ ಎಂದು ಕರೆಯಲ್ಪಡುತ್ತಿದ್ದ ಹೋಲ್ ಸ್ಟನ್ ಆಸ್ಪತ್ರೆಯಲ್ಲಿ ನನ್ನ ಜನನವಾಗಿದ್ದು,ಈ ಭಾಗಕ್ಕೆ ಬಂದಾಗಲೆಲ್ಲ ನನ್ನ ಮನೆಗೆ ಬಂದ ಅನುಭವವಾಗುತ್ತದೆ ಎಂದರು. ಕಲಬುರಗಿ ಶರಣನ ಆಶೀರ್ವಾದ ಫಲದಿಂದ ನಾನು ಜನ್ಮತಾಳಿರುವೆ, […]

Continue Reading

ಅಂಗನವಾಡಿಗಳಲ್ಲಿ‌ ಶುಚಿತ್ವ ಕಾಪಾಡಿ: ಸಚಿವ ಪ್ರಿಯಾಂಕ್ ಖರ್ಗೆ

ಚಿತ್ತಾಪುರ: ಅಂಗನವಾಡಿ ಕೇಂದ್ರಗಳಲ್ಲಿ ತಯಾರಿಸುವ ಅಡುಗೆಯಲ್ಲಿ ಶುಚಿತ್ವ ಹಾಗೂ ಸ್ವಚ್ಛತೆ ಕಾಪಾಡಿಕೊಂಡು ಮಕ್ಕಳಿಗೆ ವಿದ್ಯೆ ಕಲಿಸುವುದರ ಜೊತೆಗೆ ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವಪ್ರಿಯಾಂಕ್ ಖರ್ಗೆ ಸೂಚಿಸಿದರು. 2022-23ನೇ ಸಾಲಿನ ಕೆಕೆಆರ್ ಡಿಬಿ ಮೆಗಾ ಮ್ಯಾಕ್ರೋ ಯೋಜನೆಯಡಿಯಲ್ಲಿ ತಲಾ 20 ಲಕ್ಷ ರೂ ವೆಚ್ಚದಲ್ಲಿ ದಂಡೋತಿ ಗ್ರಾಮದಲ್ಲಿ ಮೂರು ಹಾಗೂ ಚಿತ್ತಾಪುರ ಪಟ್ಟಣದಲ್ಲಿ ಎರಡು ಅಂಗನವಾಡಿ ಕೇಂದ್ರಗಳ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ […]

Continue Reading

ಕೋಲಿ ಸಮಾಜ ಒಡೆಯುವುದೆ ಕಮಕನೂರು ಪ್ರವೃತ್ತಿ: ಮುನಿಯಪ್ಪ ಕೊಳ್ಳಿ

ಚಿತ್ತಾಪುರ: ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರು‌ ಅವರು ದಿ.ವಿಠಲ್ ಹೇರೂರ ಅವರ ಹೋರಾಟದ ಸಮಯದಿಂದ ಇಂದಿನವರೆಗೂ ಕೋಲಿ ಸಮಾಜದಲ್ಲಿ ಒಡಕುಂಟು ಮಾಡುವದು ಮುಂದುವರೆಸಿದ್ದಾರೆ‌. ಅದು ಅವರ ಪ್ರವೃತ್ತಿಯಾಗಿದೆ ಎಂದು ಕೋಲಿ ಸಮಾಜದ ಮುಖಂಡ ಮುನಿಯಪ್ಪ ಎಸ್ ಕೊಳ್ಳಿ ದಂಡೋತಿ ಹೇಳಿದ್ದಾರೆ. ಹೇರೂರ ಅವರು ಬದುಕಿರುವವರೆಗೂ ಅವರನ್ನು ವಿರೋಧ ಮಾಡುತ್ತಲೇ ಬಂದಿದ್ದಾರೆ. ಹೇರೂರ ಅವರು ಸಮಾಜದ ಒಳಿತಿಗಾಗಿ ಯಾವುದೆ ಸಭೆ, ಸಮಾರಂಭ, ಕಾರ್ಯಕ್ರಮ, ಪ್ರತಿಭಟನೆ, ಹೋರಾಟ ಹಮ್ಮಿಕೊಂಡರೆ ಆಗ ಕಮಕನೂರು ಅವರು ಪರ್ಯಾಯವಾಗಿ ಕಾರ್ಯಕ್ರಮ ಮಾಡುವ ಮೂಲಕ […]

Continue Reading

ಸಮಾಜದ ಒಗ್ಗಟ್ಟಿಗೆ ಧಕ್ಕೆ ತರುವುದು ಅಕ್ಷಮ್ಯ: ಭೀಮಣ್ಣಾ ಸಾಲಿ

ಚಿತ್ತಾಪುರ: ಹಾಲಿನಲ್ಲಿ ಸಗಣಿ ಎಸೆಯುವವರಿಂದ ಜನರು ಎಚ್ಚರವಿರಬೇಕು. ತಮ್ಮ ಸ್ವಾರ್ಥಕ್ಕೆ ಸಮಾಜ ಒಡೆಯುವುದು, ಸಂಘಟನೆಗೆ ಮತ್ತು ಒಗ್ಗಟ್ಟಿಗೆ ಧಕ್ಕೆಯುಂಟು ಮಾಡುವುದು ಅಕ್ಷಮ್ಯ. ಅದು ಯಾರೇ ಮಾಡಿದರೂ ಸಮಾಜದ ಜನರು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣಾ ಸಾಲಿ ಹೇಳಿದರು. ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಶನಿವಾರ ತಾಲೂಕು ಕೋಲಿ ಸಮಾಜದ ವಿವಿಧ ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಸನ್ಮಾನ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಚಿತ್ತಾಪುರ ಕೋಲಿ ಸಮಾಜದ […]

Continue Reading

ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಬೆಳೆಸುವ ಕೆಲಸ ರಾವೂರ ಸಂಸ್ಥೆ ಯಶಸ್ವಿಯಾಗಿ ಮಾಡುತ್ತಿದೆ: ಕೋಟೇಶ್ವರರಾವ

ರಾವೂರ: ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿ ಬೆಳೆಸುವ ಕೆಲಸ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಯಶಸ್ವಿಯಾಗಿ ಮಾಡುತ್ತಿದೆ ಎಂದು ಎಸಿಸಿಯ ಸಿ ಎಸ್ ಆರ್ ಕ್ಲಸ್ಟರ್ ಹೆಡ್ ಕೋಟೇಶ್ವರರಾವ ಹೇಳಿದರು. ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ 42ನೇ ವಾರ್ಷಿಕೋತ್ಸವದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಸಂಸ್ಕಾರ ಮನೆಯಲ್ಲಿ ಮತ್ತು ಶಾಲೆಗಳಲ್ಲಿ ಸಿಗದೆ ವಿಚಿತ್ರ ಪೀಳಿಗೆ ಹುಟ್ಟುತ್ತಿದೆ. ಸಮಾಜದಲ್ಲಿ ಇಂತಹ ಪೀಳಿಗೆ ಸಮಾಜಘಾತುಕ ಚಟುವಟಿಕೆ ಮಾಡುತ್ತಿವೆ. ಸಂಸ್ಕಾರದ ಕೊರತೆಯಾದಲ್ಲಿ […]

Continue Reading

ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಸೃಜನಾತ್ಮಕತೆ ಹೆಚ್ಚಿಸುತ್ತವೆ: ಸಿಸ್ಟರ್ ಸಿಂಪ್ರೋಜ್

ಚಿತ್ತಾಪುರ: ಮಕ್ಕಳಿಗೆ ಶಿಕ್ಷಣದಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಕ. ವಸ್ತು ಪ್ರದರ್ಶನಗಳು ಮಕ್ಕಳಲ್ಲಿರುವ ಸೃಜನಾತ್ಮಕತೆಯನ್ನು ಹೆಚ್ಚಿಸುತ್ತವೆ ಎಂದು ಶಿಶುವಿಹಾರ ಪ್ರಾಥಮಿಕ ಶಾಲೆಯ ಮುಖ್ಯಗುರು ಸಿಸ್ಟರ್ ಸಿಂಪ್ರೋಜ್ ಹೇಳಿದ್ದಾರೆ. ಪಟ್ಟಣದ ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುವ ಘಟನೆಗಳ ಮೂಲಕ ಮಕ್ಕಳು ಅನೇಕ ವಿಷಯಗಳು ಕಲಿಯುತ್ತಾರೆ. ಮಕ್ಕಳಲ್ಲಿ ಅನೇಕ ಪ್ರತಿಭೆ ಇರುತ್ತವೆ. ಅಂತಹ ಪ್ರತಿಭೆಯನ್ನು ಹೊರತರುವ ಕೆಲಸ ಶಿಕ್ಷಕರು ಮಾಡಬೇಕು. ಶಿಕ್ಷಕರಿಗೆ ಪಾಲಕರು ಪ್ರೋತ್ಸಾಹಿಸುವ ಮೂಲಕ […]

Continue Reading

ಮಹಾದೇವಿ ಭೀಮನಹಳ್ಳಿ ಕಲಾ ರತ್ನ ಪ್ರಶಸ್ತಿಗೆ ಆಯ್ಕೆ

ಚಿತ್ತಾಪುರ: ತಾಲೂಕಿನ ಭೀಮನಹಳ್ಳಿ ಗ್ರಾಮದ ಜಾನಪದ ಕಲಾವಿದೆ ಮಹಾದೇವಿ ಶರಣಪ್ಪ ಹೊಸಮನಿ ಅವರು ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ತಿಳಿಸಿದ್ದಾರೆ. ಜನವರಿ 11 ಮತ್ತು 12 ರಂದು ಬೀದರ್’ನಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ವಿಭಾಗ ಮಟ್ಟದ ತತ್ವಪದ ಸಮಾವೇಶ ಹಾಗೂ ಭಜನಾ ಸ್ಪರ್ಧೆ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದರು.

Continue Reading

ವಾಡಿ ಪಟ್ಟಣಕ್ಕೆ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಭೇಟಿ, ವಿವಿಧ ಇಲಾಖೆಯ ಕಾಮಗಾರಿ ಪರಿಶೀಲನೆ

ಚಿತ್ತಾಪುರ: ವಾಡಿ ಪಟ್ಟಣಕ್ಕೆ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಭೇಟಿ ನೀಡಿ ವಿವಿಧ ಇಲಾಖೆಯ ಕಾಮಗಾರಿ ಪರಿಶೀಲನೆ ಮಾಡಿದರು. ತಾಲೂಕಿನಲ್ಲಿ ವಾಡಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ, ಇಂದಿರಾ ಕ್ಯಾಂಟೀನ್ ಕಟ್ಟಡದ ಕಾಮಗಾರಿ ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಧರ್ಭದಲ್ಲಿ ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ತಹಸೀಲ್ದಾರ ನಾಗಯ್ಯ ಹಿರೇಮಠ ಮತ್ತು ಆಯಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading