ಶಹಾಬಾದ: ಫೆ.10 ರಿಂದ ಸಾಂಸ್ಕೃತಿಕ ಜನೋತ್ಸವ

ತಾಲೂಕು

ಸುದ್ದಿ ಸಂಗ್ರಹ ಶಹಾಬಾದ
ಪ್ರಜಾತಂತ್ರದ ಬಗ್ಗೆ ನೇತಾಜಿ ಸುಭಾಶ್ಚಂದ್ರ ಭೋಸ್ ಕನಸು ಕಂಡಿದ್ದರು, ಭಾರತದಲ್ಲಿ ಪರ್ಯಾಯ ವ್ಯವಸ್ಥೆ ಬರಬೇಕಾಗಿದೆ, ಅಂತಹ ವ್ಯವಸ್ಥೆ ಜಾರಿಗೆ ಬರುವ ಉದ್ದೇಶದಿಂದ ಯುವಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೇತಾಜಿ ಅವರ 128ನೇ ಜಯಂತೋತ್ಸವ ನಿಮಿತ್ಯ ಫೆ.10,11 ರಂದು 12ನೇ ಸಾಂಸ್ಕೃತಿಕ ಜನೋತ್ಸವ ಆಯೋಜಿಸಲಾಗಿದೆ ಎಂದು ಎಐಡಿಎಸ್‌ಒ, ಎಐಸಿವೈಒ, ಎಐಎಮ್‌ಎಸ್‌ಎಸ್ ಪರವಾಗಿ ಜಗನ್ನಾಥ ಎಸ್.ಎಚ್. ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಸ್ವಾತಂತ್ರ್ಯಗೊಂಡು 75 ವರ್ಷವಾದರು ನೇತಾಜಿ ಕಂಡ ಕನಸು ಸಾಕಾರಗೊಂಡಿಲ್ಲ, ದೇಶದಲ್ಲಿ ನಿರುದ್ಯೋಗ, ಆರ್ಥಿಕ ಹಿಂಜರಿಕೆಯಿಂದ ದೇಶ ತತ್ತರಿಸುತ್ತಿದೆ. ಯುವಕರಲ್ಲಿ ಜಾಗೃತಿ ಮೂಡಿಸುವ ದೃಷ್ಠಿಯಿಂದ 12ನೇ ಸಾಂಸ್ಕೃತಿಕ ಜನೋತ್ಸವ ಆಯೋಜಿಸಲಾಗಿದೆ ಎಂದರು.

ಫೆ. 10 ರಂದು ಸಂಜೆ 5.30ಕ್ಕೆ ಸಿದ್ದರಾಮೇಶ್ವರ ಶಾಲೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಬಾಲರಾಜ ಮಾಚನೂರ ಉದ್ಘಾಟಿಸಲಿದ್ದು, ಕಸಾಪ ತಾಲೂಕ ಅಧ್ಯಕ್ಷ ಶರಣಬಸಪ್ಪ ಕೋಬಾಳ ಉಪಸ್ಥಿತರಿರುವರು. ಜನಜಾಗೃತಿ ಅಭಿಯಾನದ ಸಲಹೆಗಾರ ರಾಮಾಂಜನಪ್ಪ ಅಲ್ದಳ್ಳಿ ಮುಖ್ಯ ಭಾಷಣಕಾರರಾಗಿ ಆಗಮಿಸುವರು, ತುಳಜಾರಾ ಎನ್.ಕೆ. ಉಪಸ್ಥಿತರಿರುವರು, ಜಗನ್ನಾಥ ಎಸ್.ಎಚ್ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾವಗೀತೆ, ಜಾನಪದ ಗೀತೆ, ಪ್ರಗತಿಪರ ಗೀತೆ, ಸುಗಮ ಸಂಗೀತ, ಖವ್ವಾಲಿ, ಡೊಳ್ಳಿನ ಪದ, ಜಾನಪದ ನೃತ್ಯ, ಕೋಲಾಟ, ಜಾನಪದ ನೃತ್ಯ, ಕಿರು ನಾಟಕ, ಗೋ ವಿಂದ್ ಲಾಟ್ರಿ ನಾಟಕ    ನಡೆಯುವದು ಎಂದರು.

ಎಐಎಮ್‌ಎಸ್‌ಎಸ್ ಜಿಲ್ಲಾ ಅಧ್ಯಕ್ಷೆ ಗುಂಡಮ್ಮಾ ಮಡಿವಾಳ ಮಾತನಾಡಿ, ಫೆ.11 ರಂದು ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಮಾರಿ ಸೆಲ್ವರಾಜ್ ನಿರ್ದೇಶನದ ವಾಳೈ ಸಿನಿಮಾ ಪ್ರದರ್ಶನ, ಮುಖ್ಯ ಅತಿಥಿಗಳಾಗಿ ಎಸ್‌ಎಸ್‌ಎಂ ಕಾಲೇಜಿನ ಪ್ರಾಚಾರ್ಯ ಪ್ರೋ. ಕೆ.ಬಿ ಬಿಲ್ಲವ, ಅತಿಥಿಗಳಾಗಿ ಶೇಖ್ ಸಾಹೇರಾ ಬೇಗಂ ಉಪಸ್ಥಿತರಿರುವರು. ಡಾ.ಎನ್.ಪ್ರಮೋದ ಸಂವಾದ ನಡೆಸುವರು. ಸ್ಪೂರ್ತಿ ಗುರಜಾಲಕರ್ ಅಧ್ಯಕ್ಷತೆ ವಹಿಸುವರು ಎಂದರು.

ಗೋಷ್ಠಿಯಲ್ಲಿ ಮಹಾದೇವಿ, ಅಂಬಿಕಾ ಗುರುಜಾಲಕರ್, ರಮೇಶ ದೇವಕರ್, ದೇವರಾಜ, ಕೆ.ಪಿ ಮಾನೆ, ರಘು ಪವಾರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *