ಚಿತ್ತಾಪುರ: ಹಾಲಿನಲ್ಲಿ ಸಗಣಿ ಎಸೆಯುವವರಿಂದ ಜನರು ಎಚ್ಚರವಿರಬೇಕು. ತಮ್ಮ ಸ್ವಾರ್ಥಕ್ಕೆ ಸಮಾಜ ಒಡೆಯುವುದು, ಸಂಘಟನೆಗೆ ಮತ್ತು ಒಗ್ಗಟ್ಟಿಗೆ ಧಕ್ಕೆಯುಂಟು ಮಾಡುವುದು ಅಕ್ಷಮ್ಯ. ಅದು ಯಾರೇ ಮಾಡಿದರೂ ಸಮಾಜದ ಜನರು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣಾ ಸಾಲಿ ಹೇಳಿದರು.
ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಶನಿವಾರ ತಾಲೂಕು ಕೋಲಿ ಸಮಾಜದ ವಿವಿಧ ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಸನ್ಮಾನ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಚಿತ್ತಾಪುರ ಕೋಲಿ ಸಮಾಜದ ಒಗ್ಗಟ್ಟು ಇಡಿ ಜಿಲ್ಲೆಗೆ ಮಾದರಿಯಾಗಿದೆ. ಹಣಮಂತಪ್ಪ ಅಲ್ಲೂರ್, ಕಾಮಣ್ಣಾ ವಚ್ಚಾ ಅವರ ನೇತೃತ್ವದಲ್ಲಿ ಸಮಾಜದ ಸಂಘಟನೆ ಬಲವಾಗಿದೆ. ಅದನ್ನು ಹಾಳು ಮಾಡಲು, ಸಮಾಜದಲ್ಲಿ ಒಡಕ್ಕುಂಟು ಮಾಡಲು ಎಂ.ಎಲ್.ಸಿ ಕಮಕನೂರು ಅವರು ತಮ್ಮ ಪತ್ರವನ್ನು ಬಳಿಸಿಕೊಂಡಿದ್ದು ಸರಿಯಾದ ಕ್ರಮವಲ್ಲ ಎಂದರು.
ಸಮಾಜದ ಗೌರವಾಧ್ಯಕ್ಷ ರಾಮಲಿಂಗ ಬಾನರ, ಮಾಜಿ ಅಧ್ಯಕ್ಷರಾದ ಬಸವರಾಜ ಚಿನ್ನಮಳ್ಳಿ, ಹಣಮಂತ ಸಂಕನೂರು, ಮುಖಂಡ ಸುರೇಶ ಬೆನಕನಳ್ಳಿ ಅವರು ಮಾತನಾಡಿದರು.

ತಾಲೂಕು ಘಟಕ
ನಿಂಗಣ್ಣಾ ಹೆಗಲೇರಿ (ಅಧ್ಯಕ್ಷ), ರಾಮಲಿಂಗ ಬಾನರ (ಗೌರವಾಧ್ಯಕ್ಷ), ಮಲ್ಲಿಕಾರ್ಜುನ ಸಂಗಾವಿ, ಮುನಿಯಪ್ಪ ಕೊಳ್ಳಿ, ರಾಮಣ್ಣಾ ನಾಟಿಕಾರ, ಶೇಕಪ್ಪ ಭೀಮನಹಳ್ಳಿ, ಭಾಗಣ್ಣಾ ಹಲಕರ್ಟಿ(ಉಪಾಧ್ಯಕ್ಷರು), ಕರಣಕುಮಾರ ಅಲ್ಲೂರ್ (ಪ್ರಧಾನ ಕಾರ್ಯದರ್ಶಿ), ಸಾಬಣ್ಣಾ ಹಾಸ್ಬಾ, ಶ್ರೀಶೈಲ್ ನಾಟಿಕಾರ, ತಮ್ಮಣ್ಣಾ ಹೊಸೂರು (ಸಹ ಕಾರ್ಯದರ್ಶಿ), ಅಂಬು ಹೋಳಿಕಟ್ಟಿ (ಖಜಾಂಚಿ), ಸಾಬಣ್ಣಾ ಕೊಲ್ಲೂರ, ಶಿವಶರಣಪ್ಪ ಸಾಲಹಳ್ಳಿ, ಸಾಬಣ್ಣಾ ರಾಂಪುರಹಳ್ಳಿ, ಯಮನಪ್ಪ ಸೂಗೂರ (ಸಂಘಟನಾ ಕಾರ್ಯದರ್ಶಿ).
ನಗರ ಘಟಕ
ಪ್ರಭು ಹಲಕರ್ಟಿ (ಅಧ್ಯಕ್ಷ), ಭೀಮಣ್ಣಾ ಹೋತಿನಮಡಿ (ಗೌರವಾಧ್ಯಕ್ಷ), ದತ್ತು ಮೈನಾಳಕರ್, ಶಿವಣ್ಣ ದೊಡ್ಡಮನಿ (ಉಪಾಧ್ಯಕ್ಷರು)
ತಾಲೂಕು ಯುವ ಘಟಕ
ರಾಜೇಶ ಹೋಳಿಕಟ್ಟಿ (ಅಧ್ಯಕ್ಷ), ಬಸವರಾಜ ಅಲ್ಲೂರ್ (ಕೆ), ಹಣಮಂತ ಬೋಳೆವಾಡ, ಮಲ್ಲಣ್ಣ ಬಮ್ಮನಹಳ್ಳಿ, ನಾಗರಾಜ ಕದ್ದರಗಿ, ರವೀಂದ್ರ ಭೀಮನಹಳ್ಳಿ, ಮಲ್ಲಿಕಾರ್ಜುನ ದಂಡಗುಂಡ (ಉಪಾಧ್ಯಕ್ಷ), ಮೌನೇಶ ರಾಮತೀರ್ಥ, ಚೆನ್ನಪ್ಪ ಸಾತನೂರು (ಸಂಘಟನಾ ಕಾರ್ಯದರ್ಶಿ), ಶಿವರಾಜ ಕದ್ದರಗಿ, ಬಸವರಾಜ ರಾಜೋಳಾ (ಸಹ ಕಾರ್ಯದರ್ಶಿ).
ನಗರ ಯುವ ಘಟಕ: ಬಸವರಾಜ ಮೈನಾಳಕರ್ (ಅಧ್ಯಕ್ಷ), ಅಪ್ಪು ಸುಲ್ತಾನಪುರ (ಉಪಾಧ್ಯಕ್ಷ).
ಈ ಸಂದರ್ಭದಲ್ಲಿ ತಾಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣ ಹೆಗಲೇರಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ದೇವೀಂದ್ರ ಹೊನಗುಂಟಿ, ಬಸಣ್ಣಾ ತಳವಾರ, ಭೀಮಣ್ಣಾ ಹೋತಿನಮಡಿ, ವೆಂಕಟರಮಣ ಬೇವಿನಗಿಡ, ನಾಗರಾಜ ಜೈಗಂಗಾ, ಮಹಾದೇವ ಬೂನಿ, ಚಂದ್ರಪ್ಪ ಹೊಸೂರು, ತಮ್ಮಣ್ಣ ಹೊಸೂರು, ಕರಿಗೂಳಿ ರಾಮತೀರ್ಥ, ಮಲ್ಲಿಕಾರ್ಜುನ ಭೀಮನಹಳ್ಳಿ, ಶರಣಪ್ಪ ಹೊನ್ನಪೂರ, ಸಾಬಣ್ಣಾ ಹೋಳಿಕಟ್ಟಿ, ಭೀಮಾಶಂಕರ ಹೋಳಿಕಟ್ಟಿ ಅವರು ಇದ್ದರು.
ದೇವಿಂದ್ರ ಅರಣಕಲ್ ಸ್ವಾಗತಿಸಿ ನಿರೂಪಿಸಿದರು.