ಕೋಲಿ ಸಮಾಜದ ಒಗ್ಗಟ್ಟು ಒಡೆಯಬೇಡಿ: ಭೀಮಣ್ಣ ಸಾಲಿ

ಚಿತ್ತಾಪುರ: ಜಿಲ್ಲೆಯಲ್ಲಿ ಕೋಲಿ ಸಮಾಜದ ಸ್ವಯಂ ಘೋಷಿತ ಅಧ್ಯಕ್ಷರು ಬಹಳ ಜನರಿದ್ದಾರೆ. ಎಲ್ಲರೂ ಒಗ್ಗೂಡಿ ಸಮಾಜದ ಸಂಘಟನೆಗೆ ಶಕ್ತಿ ತುಂಬಬೇಕು. ಸಮಾಜದ ಒಗ್ಗಟ್ಟಿಗೆ ಧಕ್ಕೆಯುಂಟು ಮಾಡಿ ಸಮಾಜ ಒಡೆಯುವ ಕೆಲಸ ಯಾರೂ ಮಾಡಬಾರದು ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ ಹೇಳಿದರು. ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕೋಲಿ ಸಮಾಜದ ತಾಲೂಕು ಘಟಕ ಮತ್ತು ನಗರ ಘಟಕದ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯರಾದವರು ಸಮಾಜದವರನ್ನು […]

Continue Reading

ತೊಟ್ನಳ್ಳಿ: ದುರ್ಗಾದೇವಿ ಜಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆ

ಸೇಡಂ: ತಾಲೂಕಿನ ತೊಟ್ನಳ್ಳಿ ಗ್ರಾಮದಲ್ಲಿ ಜ.12, 13 ರಂದು ದುರ್ಗಾದೇವಿ ಜಾತ್ರಾ ಮಹೋತ್ಸವ ಜರುಗುವದು. ಪ್ರಯುಕ್ತ ತೊಟ್ನಳ್ಳಿ ಗ್ರಾಮದ ಮಹಾಂತೇಶ್ವರ ಮಠದ ಡಾ. ತ್ರಿಮೂರ್ತಿ ಶಿವಾಚಾರ್ಯರು ಮತ್ತು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಕರಪತ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ತೊಟ್ನಳ್ಳಿ ಗ್ರಾಮದ ಕಲಾವಿದರು ಹಾಗೂ ಪತ್ರಿಕಾ ಸೇವೆ ದಾಸೋಹಿ ವಿಶ್ವನಾಥ ತೊಟ್ನಳ್ಳಿ, ಚಂದ್ರಕಾಂತ ಮುದಕನಳ್ಳಿ, ತೋಟಪ್ಪ ಪೂಜಾರಿ, ಹಣಮಂತ ಹಡಪದ, ರವಿರಾಜ ಹುಣಚಿಹಳ್ಳಿ, ದೇವಿಂದ್ರಪ್ಪ ಹುಳಗೇರಿ, ಉಮೇಶ ಮಠಪತಿ, […]

Continue Reading

ಚಿತ್ತಾಪುರ ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾಗಿ ಶಿವುಕುಮಾರ ಯಾಗಾಪೂರ ಆಯ್ಕೆ

ಚಿತ್ತಾಪುರ: ಕೋಲಿ ಸಮಾಜದ ಹಿರಿಯ ಮುಖಂಡರ ಹಾಗೂ ಯುವಕರ ಒಪ್ಪಿಗೆ ಮೇರೆಗೆ ಸಮಾಜದ ಸಂಘಟನೆಯ ದೃಷ್ಟಿಯಿಂದ ಶಿವುಕುಮಾರ ಯಾಗಾಪೂರ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಮಾಜಿ ನಿರ್ದೇಶಕ ಮತ್ತು ಕೋಲಿ ಸಮಾಜದ ಮುಖಂಡ ಶರಣಪ್ಪ ನಾಟೀಕಾರ ಹೇಳಿದರು‌. ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಹಾಗೂ ಕೋಲಿ ಸಮಾಜದ ರಾಜ್ಯ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಆದೇಶದಂತೆ […]

Continue Reading

ರಾವೂರ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆ

ಚಿತ್ತಾಪುರ: ಸಚ್ಚಿದಾನಂದ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಸಚ್ಚಿದಾನಂದ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಶರಣು ತಂದೆ ಮಹಿಂದ್ರಾ (10ನೇ) ಮತ್ತು ಉಲ್ಲಾಸ್ ತಂದೆ ಸುನೀಲ (9ನೇ) ರಾಷ್ಟ್ರೀಯ ಮತದಾರ ದಿನದ ಅಂಗವಾಗಿ ಕಲಬುರಗಿಯ ಸರಕಾರಿ ಬಾಲಕಿಯರ ಪ್ರೌಢ ಶಾಲೆಗಳಲ್ಲಿ ನಡೆದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. […]

Continue Reading

ಚಿತ್ತಾಪುರ ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾಗಿ ನಿಂಗಣ್ಣಾ ಹೆಗಲೇರಿ ಆಯ್ಕೆ

ಚಿತ್ತಾಪುರ: ತಾಲೂಕು ಕೋಲಿ ಸಮಾಜದ ಸಂಘಟನೆ, ಒಗ್ಗಟ್ಟು, ಐಕ್ಯತೆಯಿಂದ ಸಮಾಜದ ಎಲ್ಲರೂ ಸಾಮೂಹಿಕವಾಗಿ ಸಮಾಜಪರ ಕೆಲಸ ಮಾಡುವ ಹಾಗೂ ಸಮಾಜದಲ್ಲಿ ಸಾಮರಸ್ಯೆ ಮೂಡಿಸುವ ದೃಷ್ಟಿಯಿಂದ ಅಧ್ಯಕ್ಷರ ಮೂರು ವರ್ಷದ ಅಧಿಕಾರ ಅವಧಿಯನ್ನು ಇಬ್ಬರು ಆಕಾಂಕ್ಷಿಗಳಿಗೆ ಹಂಚಿಕೆ ಮಾಡಲು ನಿರ್ಣಯಿಸಿ ಮೊದಲ 18 ತಿಂಗಳ ಅವಧಿಗಾಗಿ ಡೋಣಗಾಂವ ಗ್ರಾಮದ ನಿಂಗಣ್ಣಾ‌ ದೇವಿಂದ್ರಪ್ಪಾ ಹೆಗಲೇರಿ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಇನ್ನುಳಿದ 18 ತಿಂಗಳ ಅಧಿಕಾರ ಅವಧಿಯನ್ನು ಕಾಟಮ್ಮದೇವರಹಳ್ಳಿ ಗ್ರಾಮದ ಶಿವಕುಮಾರ ಸಿದ್ರಾಮಪ್ಪ ಯಾಗಾಪೂರ ಅವರಿಗೆಂದು ಈ ಮೂಲಕ […]

Continue Reading

ಚಿತ್ತಾಪುರ: ಎಕ್ಸಲೆಂಟ್ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಆಚರಣೆ

ಚಿತ್ತಾಪುರ: ಎಕ್ಸಲೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಆಚರಿಸಲಾಯಿತು. ಪಟ್ಟಣದ ಗುರುಬಸವ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಎಕ್ಸಲೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ನಿಮಿತ್ಯ ಗಣಿತ ಪ್ರದರ್ಶನ ಸ್ಪರ್ಧೆ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಎಸಿಸಿ ಪ್ಲಾಂಟ್ ಹೆಡ್ ರವೀಂದ್ರ ಲಿಂಗಪ್ಪ ಬೊಮ್ಮನಳ್ಳಿ ಮಾತನಾಡಿ, ರಾಮಾನುಜನ್ ಅವರ ಸ್ಮರಣ ಶಕ್ತಿ, ಸಹನೆ, ಗಣಿಸುವ ಸಾಮರ್ಥ್ಯಗಳೊಂದಿಗೆ ಸಾರ್ವತ್ರಿಕರಣ ಶಕ್ತಿ, ಸ್ವರೂಪ ಜ್ಞಾನ, ಆಧಾರ ಭಾವನೆಗಳನ್ನು ಕ್ಷಿಪ್ರವಾಗಿ ಬದಲಾಯಿಸುವ ಚಾಕಚಕ್ಯತೆ ಅನೇಕ […]

Continue Reading

ಡಿ.20 ರಂದು ಕೋಲಿ ಸಮಾಜದ ಪದಾಧಿಕಾರಿಗಳ ಆಯ್ಕೆ

ಚಿತ್ತಾಪುರ: ಕೋಲಿ ಸಮಾಜದ ತಾಲೂಕು ಘಟಕ ಹಾಗೂ ನಗರ ಘಟಕದ ನೂತನ ಅದ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ ತಿಳಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ತಾಲೂಕು ಘಟಕ ಹಾಗೂ ನಗರ ಘಟಕದ ಅದ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಯಾರು ಸಮರ್ಥರು ಎಂಬುದರ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಲಾಗುತ್ತದೆ. ಸಮಾಜದ […]

Continue Reading

ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ: ಚಿತ್ತಾಪುರ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ

ಚಿತ್ತಾಪುರ: ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು . ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ ಸ್ವಾಮಿ ಮಿನಿ ಹಾಲ್ ನಲ್ಲಿ ರವಿವಾರ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಚೆನ್ನಯ್ಯ ವಸ್ತ್ರದ್, ಜಿಲ್ಲಾಧ್ಯಕ್ಷ ರಾಜೇಂದ್ರ ಪ್ರಸಾದ ಸಮ್ಮುಖದಲ್ಲಿ ತಾಲೂಕು ಗೌರವ ಅಧ್ಯಕ್ಷರಾಗಿ ಉದಯಕುಮಾರ ಎಚ್ ಸಾಗರ್, ತಾಲೂಕು ಅಧ್ಯಕ್ಷರಾಗಿ ಅಣ್ಣಾರಾಯ ವಿ ಇವಣಿ, ಉಪಾಧ್ಯಕ್ಷರಾಗಿ ನಾಗೇಶ ಎ ಹಲಗಿ, ಪ್ರಧಾನ ಕಾರ್ಯದರ್ಶಿಯಾಗಿ ಶಾಮಣ್ಣ ಡಿ ಮೇಧಾ, ಸಹ ಕಾರ್ಯದರ್ಶಿಯಾಗಿ ಚಂದ್ರಕಾಂತ ವಿ ಉಪ್ಪಿನ್, […]

Continue Reading

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್: ಅಣ್ಣಾರಾಯ ಇವಣಿ ಆಕ್ರೋಶ

ಚಿತ್ತಾಪುರ: ಪಂಚಮಸಾಲಿ ಸಮುದಾಯದ 2ಎ ಪ್ರವರ್ಗದ ಮೀಸಲಾತಿಗಾಗಿನಡೆಸುತ್ತಿರುವ ಹೋರಾಟದ ಕುರಿತು ಮುಂಚೆಯೇ ಸರ್ಕಾರದ ಅರಿವಿಗೆ ಬಂದಿದ್ದರೂ ಯಾವುದೇ ಮುಂಜಾಗ್ರತಾ ಕ್ರಮ ವಹಿಸದ ಸರ್ಕಾರ ದುರುದ್ದೇಶಪೂರ್ವಕವಾಗಿ ಚಳುವಳಿ ಹತ್ತಿಕ್ಕುವ ದುರಾಲೋಚನೆಯಿಂದ ಚಳವಳಿ ನಿರತ ಅಮಾಯಕರ ಮೇಲೆ ಲಾಠಿಚಾರ್ಜ್ ಪ್ರಯೋಗಿಸಿದೆ ಎಂದು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ತಾಲೂಕ ಅಧ್ಯಕ್ಷ ಅಣ್ಣಾರಾಯ ವಿ ಇವಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವಾರದಿಂದಲೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೋರಾಟದ ಕುರಿತು ಮಾಹಿತಿ ಒದಗಿಸುತ್ತಲೇ ಬಂದಿದ್ದಾರೆ. ಈ ಹಂತದಲ್ಲಿ ಪೂಜ್ಯರೊಂದಿಗೆ […]

Continue Reading

ಐತಿಹಾಸಿಕ ಮೇದಕ ಗ್ರಾಮವು ಕಲ್ಯಾಣ ಕರ್ನಾಟಕ ಹಳೇಬೀಡು: ಮುಡುಬಿ ಗುಂಡೇರಾವ

ಸೇಡಂ: ತಾಲೂಕಿನ ಐತಿಹಾಸಿಕ ಮೇದಕ ಗ್ರಾಮವು ಕಲ್ಯಾಣ ಕರ್ನಾಟಕ ಬೇಲೂರು ಮತ್ತು ಹಳೇಬೀಡು ಆಗಿದೆ ಎಂದು ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಅಭಿಮತವ್ಯಕ್ತಪಡಿಸಿದರು. ತಾಲೂಕಿನ ಮೇದಕ ಗ್ರಾಮದ ಭೂಥನಾತ ಮತ್ತು ಚನ್ನಕೇಶವ ದೇವಾಲಯದ ಪರಿಸರದಲ್ಲಿ ಕಲಬುರಗಿ ಬಸವೇಶ್ವರ ಸೇವಾ ಬಳಗ ಆಯೋಜಿಸಿದ ಐತಿಹಾಸಿಕ ದೇವಾಲಯಗಳ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇಡಂ ತಾಲೂಕಿನ ವಿವಿಧ ಗ್ರಾಮಗಳು ಸಾವಿರಾರು ವರ್ಷಗಳ ಹಿಂದೆ ಕನ್ನಡ ನಾಡಿನ ಕೀರ್ತಿ ಹೆಚ್ಚಿಸಿವೆ. ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟ, ಕನ್ನಡದ ಉಪಲಬ್ದ ಗ್ರಂಥ ಕವಿರಾಜಮಾರ್ಗ ಕೃತಿ […]

Continue Reading