ಕಲಬುರಗಿಗೂ ಕಾಲಿಟ್ಟ ಐ ಲವ್ ಮೊಹಮ್ಮದ್ ಬ್ಯಾನರ್ ವಿವಾದ: ಹಿಂದೂ ಸಂಘಟನೆಗಳಿಂದ ಆಕ್ರೋಶ

ಕಲಬುರಗಿ: ಉತ್ತರ ಪ್ರದೇಶದ ಕಾನಪುರನಲ್ಲಿ ಆರಂಭವಾದ ಐ ಲವ್ ಮೊಹಮ್ಮದ್ ಬ್ಯಾನರ್ ಸಾಕಷ್ಟು ವಿವಾದ ಸೃಷ್ಟಿಸಿದ್ದು, ಇದೀಗ ಈ ಐ ಲವ್ ಮೊಹಮದ್ ಎಂಬ ಬ್ಯಾನರ್ ಕಲಬುರಗಿಗೂ ಕಾಲಿಟ್ಟಿದೆ. ವೈದ್ಯಕೀಯ ಶಿಕ್ಷಣ ಸಚಿವರ ತವರು ಕ್ಷೇತ್ರವಾದ ಜಿಲ್ಲೆಯ ಸೇಡಂ ತಾಲೂಕಿನ ಊಡಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಐ ಲವ್ ಬ್ಯಾನರ್ ಕಂಡು ಬಂದಿದ್ದು, ವಿವಿಧ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಸೇಡಂ ತಾಲೂಕಿನ ಊಡಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಐ ಲವ್ ಮೊಹಮದ್ ಬ್ಯಾನರ್ […]

Continue Reading

ನವಜಾತ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ: ಹುಬ್ಬಳ್ಳಿ ಕಿಮ್ಸ್’ನಲ್ಲಿ ಅಪರೂಪದ ಘಟನೆ

ಹುಬ್ಬಳ್ಳಿ,: ಜಗತ್ತಿನಲ್ಲಿ ‌ಸಯಾಮಿ ಮಕ್ಕಳ ಜನನ ಸೇರಿದಂತೆ ಅನೇಕ ಅಪರೂಪದ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇರುತ್ತವೆ. ಆದರೆ ಹುಬ್ಬಳ್ಳಿಯ ಕಿಮ್ಸ್​ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಎರಡನೇ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯು ಜನ್ಮ ನೀಡಿದ ಮಗುವಿನೊಳಗೊಂದು ಭ್ರೂಣ ಇರೋದು ಪತ್ತೆಯಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗರ್ಭಿಣಿಯೊಬ್ಬರು ಎರಡನೇ ಹೆರಿಗೆಗೆಂದು ಕಿಮ್ಸ್ ನ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದರು. ಕಳೆದ‌ ಸೆಪ್ಟಂಬರ್ 23ರಂದು ಗಂಡು ಮಗುವಿಗೆ ಈಕೆ ಜನ್ಮ ನೀಡಿದ್ದಾಳೆ. ಮಗುವಿನ ದೇಹದಲ್ಲಿ ಕೆಲ […]

Continue Reading

ನಾಲವಾರ ಶ್ರೀಗಳ ಜನ್ಮದಿನೋತ್ಸವ: ಅಂಧ, ಬುದ್ಧಿಮಾಂದ್ಯರಿಗೆ ಉಚಿತ ಕ್ಷೌರ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ಚಿತ್ತಾಪುರ ತಾಲೂಕಿನ ಶ್ರೀಕ್ಷೇತ್ರ ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ ಅ.1 ರಂದು ಅನಾಥ, ನಿರ್ಗತಿಕ, ಬುದ್ಧಿಮಾಂದ್ಯರಿಗೆ ಉಚಿತ ಕ್ಷೌರ ಸೇವೆ ಮಾಡಲಾಗುವುದು ಎಂದು ಹಡಪದ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ (ಎನ್) ಹೇಳಿದರು. ಕಲಬುರಗಿ ನಗರದ ಬಿದ್ದಾಪೂರ ಕಾಲೋನಿಯ ಅನಾಥ, ನಿರ್ಗತಿಕ ಮತ್ತು ಬುದ್ಧಿಮಾಂದ್ಯರ ಕೇಂದ್ರಕ್ಕೆ ಭೇಟಿ ನೀಡಿ ಉಚಿತ ಕ್ಷೌರ ಸೇವೆ […]

Continue Reading

ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳುತ್ತಿದ್ದ ಅಧಿಕಾರಿಗಳು ಮಧ್ಯದಲ್ಲೇ ಲಾಕ್

ವಿಜಯಪುರ: ಮಹಾರಾಷ್ಟ್ರದಲ್ಲಿ ಮಳೆ ಎಫೆಕ್ಟ್‌ ಹಿನ್ನೆಲೆ ಜಯಪುರದಲ್ಲಿ ಭೀಮಾನದಿ‌ ಪ್ರವಾಹ ಉಂಟಾಗಿದೆ. ಹೀಗಾಗಿ ಈ ಭಾಗದ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳುತ್ತಿದ್ದ ಅಧಿಕಾರಿಗಳು ಮಧ್ಯದಲ್ಲೇ ಲಾಕ್ ಆದ ಘಟನೆ ನಡೆದಿದೆ. ನೀರಿದ್ದ ಕಾರಣ ಸೇತುವೆ ಮೇಲೆ ವಾಹನ ಕೆಟ್ಟು ಅಧಿಕಾರಿಗಳು ಸಮಸ್ಯೆ ಅನುಭವಿಸಿದ್ದಾರೆ. ಪಿಡಬ್ಲ್ಯೂಡಿ ಅಧಿಕಾರಿಗಳು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಿಂದ ಭೀಮಾ ನದಿ ಪಾತ್ರಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಪ್ರವಾಹದಿಂದ ಅಧಿಕ ನೀರು ಬಂದಿದ್ದು, ರಸ್ತೆಯ ಮೇಲೆ ಸಂಚಾರ ಮಾಡುವಾಗ ವಾಹನ ಕೈಕೊಟ್ಟಿದೆ. ಕೊನೆಗೆ […]

Continue Reading

ಪ್ರತಿಯೊಬ್ಬರಲ್ಲಿ ರಾಷ್ಟ್ರಪ್ರಜ್ಞೆ ಮೈಗೂಡಲಿ: ಡಾ.ಸಿದ್ದಲಿಂಗ ಶ್ರೀ

ಕಲಬುರಗಿ: ಪ್ರತಿಯೊಬ್ಬರು ಧರ್ಮ ಮತ್ತು ಪ್ರದೇಶಕ್ಕೆ ಪ್ರಾತಿನಿಧ್ಯ ನೀಡದೆ, ಎಲ್ಲರು ಭಾರತೀಯರು ಒಂದೆ ಎಂಬ ರಾಷ್ಟ್ರಪ್ರಜ್ಞೆ ಮೈಗೂಡಿಸಿಕೊಳ್ಳಬೇಕು ಎಂದು ಯಡ್ರಾಮಿ ವಿರಕ್ತ ಮಠದ ಪೂಜ್ಯ ಡಾ.ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಜೇವರ್ಗಿ ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ‘ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಶಿಕ್ಷಕರ ದಿನಾಚರಣೆ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ತಂದೆ-ತಾಯಿ, ಗುರು-ಹಿರಿಯರು, ದೇಶಕ್ಕೆ ಗೌರವ ನೀಡಬೇಕು. ವಿದ್ಯಾರ್ಥಿ ದಿಸೆಯಿಂದಲೇ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು […]

Continue Reading

ಬಾಡಿಗೆಗೆಂದು ಸುಮಾರು 500 ಕಾರುಗಳನ್ನು ಪಡೆದು ಗಿರವಿಗೆ ಇಟ್ಟ ಭೂಪ

ಬಳ್ಳಾರಿ: ಬಾಡಿಗೆ ವಾಹನಗಳ ಟ್ರೆಂಡ್​ ಸದ್ಯ ಜೋರಾಗಿದೆ. ಅದರಲ್ಲೂ ಸೆಲ್ಫ್​ ಡ್ರೈವಿಂಗ್​ಗೆಂದು ವಾಹನ ಪಡೆಯುವವರೆ ಹೆಚ್ಚು, ಹೀಗಾಗಿ ಕೆಲ ವಾಹನಗಳ ಮಾಲಿಕರು ಕಂಡ ಕಂಡವರಿಗೆ ವಾಹನಗಳನ್ನು ಬಾಡಿಗೆಗೆ ಕೊಡುವುದು ಉಂಟು. ಅಂತಹ ಮಾಲಿಕರಿಗೆ ಬಳ್ಳಾರಿಯಲ್ಲೊಬ್ಬ ವ್ಯಕ್ತಿ ಭರ್ಜರಿ ಶಾಕ್​ ಕೊಟ್ಟಿದ್ದಾನೆ. ಯಾಮಾರಿ ಯಾರ್ಯಾರಿಗೋ ವಾಹನಗಳನ್ನು ಬಾಡಿಗೆ ನೀಡಿದರೆ, ಅವು ಇನ್ಯಾರ ಬಳಿ ಗಿರವಿ ಇರುತ್ತವೆ ಎಂಬುದು ಪ್ರೂವ್ ಮಾಡಿ ತೋರಿಸಿದ್ದಾನೆ. ಕಾರು ಪಡೆದಿದ್ದು ಬಾಡಿಗೆಗೆ, ಇಟ್ಟಿದ್ದು ಗಿರವಿಗೆ ರಾಯಚೂರು ಜಿಲ್ಲೆಯ ಸಿಂಧನೂರಿನ M.D ಜಹೀದ್ ಭಾಷಾ ಅಲಿಯಾಸ್ […]

Continue Reading

ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಜಿಲ್ಲೆಯಲ್ಲಿ ನಿನ್ನೆಯಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆ ಮತ್ತು ಪ್ರವಾಹ ಪೀಡಿತ ಗ್ರಾಮಗಳಲ್ಲಿ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ ಬೆಣ್ಣೆತೊರಾ ನದಿ ತುಂಬಿ ಹರಿಯುತ್ತಿದ್ದು, ಕಾಳಗಿ ಮತ್ತು ಚಿತ್ತಾಪುರ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ನೀರು ನುಗ್ಗಿದೆ. ಪ್ರವಾಹ ಪೀಡಿತ […]

Continue Reading

ಮಣ್ಣಿನ ಮೂರ್ತಿಗೆ ಪೂಜಿಸಿ ಪಾಲಕರನ್ನು ಸ್ಮರಿಸಿದ ಅನಾಥ ಮಕ್ಕಳು

ಕಲಬುರಗಿ: ಮಹಾಗಾಂವ ಕ್ರಾಸ್ ಸಮೀಪದ ಚಿಗುರು ನಿರ್ಗತಿಕ ಮತ್ತು ಅನಾಥ ಮಕ್ಕಳ ನಿಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಭಾನುವಾರ ಜರುಗಿದ ‘ಮಹಾಲಯ ಅಮವಾಸ್ಯೆ’ಯ ಕಾರ್ಯಕ್ರಮದ ಪ್ರಯುಕ್ತ ಅನಾಥ ಮಕ್ಕಳು ಪಾಲಕರ ಮಣ್ಣಿನ ಮೂರ್ತಿಯನ್ನು ರಚಿಸಿ, ಪೂಜಿಸಿ ಸ್ಮರಿಸಿದ ಅಪರೂಪದ ಘಟನೆ ಜರುಗಿತು. ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಮಾತನಾಡಿ, ಏಕಲವ್ಯ ಮತ್ತು ದ್ರೋಣಾಚಾರ್ಯರ ಮೂರ್ತಿ ಸ್ಥಾಪಿಸಿ ಬಿಲ್ವವಿದ್ಯೆ ಕಲಿತಿದ್ದು ನಾವು ತಿಳಿದಿದ್ದೆವೆ. ಪ್ರಸ್ತುತವಾಗಿ ಇಲ್ಲಿನ ಅನಾಥ ಮಕ್ಕಳು ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥ […]

Continue Reading

ಜಿಎಸ್‌ಟಿ ಸುಧಾರಣೆಯಿಂದ ದಿನನಿತ್ಯದ ಅಗತ್ಯ ವಸ್ತುಗಳು, ಔಷಧಿಗಳು ಅಗ್ಗ: ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ ಹೊಸೂರಕರ್

ಚಿತ್ತಾಪುರ: ಜಿಎಸ್‌ಟಿ ಉಳಿತಾಯ ಉತ್ಸವದ ಆರಂಭದಿಂದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸೂರಕರ್ ಹರ್ಷ ವ್ಯಕ್ತಪಡಿಸಿದ್ದಾರೆ. ಜಿಎಸ್‌ಟಿ ಸುಧಾರಣೆಯಿಂದ ದಿನನಿತ್ಯದ ಅಗತ್ಯ ವಸ್ತುಗಳು, ಔಷಧಿಗಳು, ವಿಮೆ ಅಗ್ಗವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವರಾತ್ರಿಯ ಮುನ್ನಾ ದಿನದಂದು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಿಎಸ್‌ಟಿ ಉತ್ಸವ (ಉಳಿತಾಯ ಹಬ್ಬ) ಆರಂಭವಾಗುತ್ತಿದೆ ಎಂದು ಹೇಳಿದ್ದಾರೆ. ಕೇವಲ 5% ಮತ್ತು 18% ರ ಎರಡು ತೆರಿಗೆ ಸ್ಲ್ಯಾಬ್‌ಗಳಿಗೆ ತರಲಾಗಿದೆ. ಹಿಂದೆ 12% ತೆರಿಗೆಯಲ್ಲಿದ್ದ […]

Continue Reading

ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು

ಹಾಸನ: ದೇವಾಲಯದ ಕಬ್ಬಿಣದ ಬಾಗಿಲು ತೆರೆದು ಕಲ್ಲಿನ ಗಣೇಶ ಮೂರ್ತಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ. ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಬೇಲೂರು ಪುರಸಭೆ ಆವರಣದ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಪ್ರತಿನಿತ್ಯ ಪೂಜೆ ಕೈಂಕರ್ಯಗಳು ನಡೆಯುತ್ತವೆ. ಪ್ರತಿನಿತ್ಯ ವ್ಯಾಪಾರಿಗಳು ಬೆಳಗ್ಗೆ ಗಣೇಶ ಮೂರ್ತಿಗೆ ಕೈಮುಗಿದು ವ್ಯಾಪಾರ ಆರಂಭಿಸುತ್ತಾರೆ. ಶನಿವಾರ ರಾತ್ರಿ ಪುರಸಭೆ ಗೇಟ್‌ಗೆ ಬೀಗ ಹಾಕಿಕೊಂಡು ತೆರಳಿದ್ದರು. ಇಂದು ಬೆಳಗ್ಗೆ ಭಕ್ತಾಧಿಗಳು ಕೈಮುಗಿಯಲು ಹೋದಾಗ ಗಣಪತಿಗೆ ಚಪ್ಪಲಿ ಹಾರ ಹಾಕಿ […]

Continue Reading