ಚಿತ್ತಾಪುರ: ಜಿಎಸ್ಟಿ ಉಳಿತಾಯ ಉತ್ಸವದ ಆರಂಭದಿಂದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸೂರಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಜಿಎಸ್ಟಿ ಸುಧಾರಣೆಯಿಂದ ದಿನನಿತ್ಯದ ಅಗತ್ಯ ವಸ್ತುಗಳು, ಔಷಧಿಗಳು, ವಿಮೆ ಅಗ್ಗವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವರಾತ್ರಿಯ ಮುನ್ನಾ ದಿನದಂದು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಿಎಸ್ಟಿ ಉತ್ಸವ (ಉಳಿತಾಯ ಹಬ್ಬ) ಆರಂಭವಾಗುತ್ತಿದೆ ಎಂದು ಹೇಳಿದ್ದಾರೆ.
ಕೇವಲ 5% ಮತ್ತು 18% ರ ಎರಡು ತೆರಿಗೆ ಸ್ಲ್ಯಾಬ್ಗಳಿಗೆ ತರಲಾಗಿದೆ. ಹಿಂದೆ 12% ತೆರಿಗೆಯಲ್ಲಿದ್ದ ಶೇ.99 ರಷ್ಟು ವಸ್ತುಗಳ ಮೇಲೆ ಈಗ ಕೇವಲ 5% ತೆರಿಗೆ ವಿಧಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದರು.