ಕೆಡಿಪಿ ಮೀಟಿಂಗ್‌ನಲ್ಲಿ ರಮ್ಮಿ ಆಡಿದ ಅರಣ್ಯಾಧಿಕಾರಿ: ಕ್ರಮಕ್ಕೆ ಸೂಚಿಸಿದ ಸಚಿವರು

ರಾಯಚೂರು: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಮೊಬೈಲ್ ನಲ್ಲಿ ರಮ್ಮಿ ಆಟದಲ್ಲಿ ಮಗ್ನರಾಗಿದ್ದರು. ಅಧಿಕಾರಿಯ ವರ್ತನೆಗೆ ಗರಂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ರಾಯಚೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ರಮ್ಮಿ ಆಟದಲ್ಲಿ ಮಗ್ನರಾಗಿದ್ದರು. ಸಚಿವ ಡಾ.ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ರಮ್ಮಿ ಆಟವಾಡುತ್ತ ಕುಳಿತಿದ್ದರು. ಒಂದು ಕಡೆ ಶಾಸಕರು, ಸಚಿವರ ಮಧ್ಯೆ ಕೆಡಿಪಿ […]

Continue Reading

ಶಾಸಕಿ ಕಚೇರಿಯನ್ನು ಬಿಡದ ಕಳ್ಳರು: ಲಕ್ಷಾಂತರ ರೂ. ಹಣ, ಚಿನ್ನ-ಬೆಳ್ಳಿ ಆಭರಣ ದೋಚಿದ ಖದೀಮರು

ವಿಜಯನಗರ: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಲತಾ ಮಲ್ಲಿಕಾರ್ಜುನ ಅವರ ಕಚೇರಿಯ ಬೀಗ ಮುರಿದ ಕಳ್ಳರು ಹಣ, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿರುವುದು ಬೆಳಕಿಗೆ ಬಂದಿದೆ. ನಾಲ್ವರು ಮುಸುಕುದಾರಿಗಳು ಹರಪನಹಳ್ಳಿಯ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿರುವ ಲತಾ ಮಲ್ಲಿಕಾರ್ಜುನ ಅವರ ಶಾಸಕ ಕಚೇರಿಯ ಬೀಗ ಮುರಿದ ಒಳಗೆ ನುಗ್ಗಿದ್ದು. 2.5 ಲಕ್ಷ ನಗದು ಹಣ ಹಾಗೂ 10.80 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಬುಧವಾರ ಮಧ್ಯರಾತ್ರಿ ಒಂದು ಗಂಟೆಯಿಂದ ಗುರುವಾರ […]

Continue Reading

ಸಾರ್ವಜನಿಕವಾಗಿ ಕೈ ಎತ್ತಿದ್ದ ಸಿಎಂ: ಅವಮಾನದಿಂದ ರಾಜೀನಾಮೆಗೆ ಮುಂದಾಗಿದ್ದ ಪೊಲೀಸ್ ಅಧಿಕಾರಿಗೆ ಜಾಕ್‌ಪಾಟ್

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈ ಎತ್ತಿ ಹೊಡೆಯಲು ಯತ್ನಿಸಿದ್ದರಿಂದ ಅವಮಾನಕ್ಕೊಳಗಾದ ಧಾರವಾಡ ಎಎಸ್ಪಿ ನಾರಾಯಣ ಬರಮನಿ ಲಾಟರಿ ಹೊಡೆದಿದ್ದಾರೆ. ಹೌದು ಬೆಳಗಾವಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರಿಂದ ಮುಜುಗರಕ್ಕೀಡಾಗಿ ಸ್ವಯಂ ನಿವೃತ್ತಿಗೆ ಪತ್ರ ಬರೆದಿದ್ದ ನಾರಾಯಣ ಬರಮನಿ ಅವರಿಗೆ ರಾಜ್ಯ ಸರ್ಕಾರ ಮುಂಬಡ್ತಿ ನೀಡಿದೆ. ಧಾರವಾಡ ಎಎಸ್ಪಿಯಾಗಿದ್ದ ನಾರಾಯಣ ಬರಮನಿ ಅವರಿಗೆ ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿ ಹುದ್ದೆ ನೀಡಲಾಗಿದೆ. ಈ ಮೂಲಕ ಸರ್ಕಾರ ಡ್ಯಾಮೇಜ್ ಕಂಟ್ರೋಲ್’ಗೆ ಮುಂದಾಗಿದೆ. ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿದ್ದ […]

Continue Reading

ಕನ್ನಡಿಗರ ಹಿರಿಮೆ, ಇತಿಹಾಸ ಸಾರುತ್ತಿರುವ ಗೊಬ್ಬುರ(ಬಿ) ಸ್ಮಾರಕಗಳು: ಮುಡುಬಿ ಗುಂಡೇರಾವ

ಕಲಬುರಗಿ: ಗೊಬ್ಬುರ(ಬಿ) ಗ್ರಾಮದ ಐತಿಹಾಸಿಕ ಸ್ಮಾರಕಗಳು ಕನ್ನಡಿಗರ ಹಿರಿಮೆ, ಗರಿಮೆ, ಇತಿಹಾಸವನ್ನು ಸಾರುತ್ತಿವೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು. ಅಫಜಲಪುರ ತಾಲೂಕಿನ ಗೊಬ್ಬುರ(ಬಿ) ಗ್ರಾಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-24ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಗೊಬ್ಬುರ(ಬಿ) ಗ್ರಾಮಕ್ಕೆ ಸಂತೆ ಗೊಬ್ಬುರು ಎಂಬುದು ಶಾಸನೋಕ್ತ ಹೆಸರು.10,11 ಮತ್ತು 12ನೇ ಶತಮಾನದಲ್ಲಿ ಈ ಗ್ರಾಮವು ಕರುನಾಡಿನ ಬಹುದೊಡ್ಡ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿ ದೇಶದ […]

Continue Reading

ಸಗರ ನಾಡಿನ ಅನರ್ಘ್ಯ ರತ್ನ ಕಡಿಕೋಳ ಮಡಿವಾಳಪ್ಪ: ಮುಡುಬಿ ಗುಂಡೇರಾವ

ಕಲಬುರಗಿ: ತತ್ವಪದಕಾರ ಕಡಿಕೋಳ ಮಡಿವಾಳಪ್ಪನವರು ಬಿದನೂರಲ್ಲಿ ಜನಿಸಿ, ಚಿಣಮಗೇರಾದಲ್ಲಿ ತತ್ವಪದ ರಚಿಸಿ, ಕಡಕೋಳದಲ್ಲಿ ನೆಲೆನಿಂತು ತತ್ವ ಪದಗಳ ಶಿಖರವಾಗಿದ್ದಾರೆ. ಅವರು ಸಗರ ನಾಡಿನ ಅನರ್ಘ್ಯ ರತ್ನವಾಗಿದ್ದಾರೆ ಎಂದು ಸಂಶೋಧಕ ಸಾಹಿತಿ-ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು. ಅಫಜಲಪುರ ತಾಲೂಕಿನ ಬಿದನೂರು ಗ್ರಾಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-23ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕಡಿಕೋಳ ಮಡಿವಾಳಪ್ಪನವರು ಸಾವಿರಾರು ತತ್ವಪದಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಲ್ಯಾಣ ಕರ್ನಾಟಕದ […]

Continue Reading

ಕುಂತಳ ನಾಡಿನ ಕಿರೀಟ ಭೈರಾಮಡಗಿ: ಮುಡುಬಿ ಗುಂಡೇರಾವ

ಕಲಬುರಗಿ: ಪ್ರಾಚೀನ ಕರ್ನಾಟಕದ ಆಡಳಿತದ ಘಟಕವಾಗಿದ್ದ ಕುಂತಳ ನಾಡಿನ ಪ್ರಮುಖ ಧಾರ್ಮಿಕ, ಶೈಕ್ಷಣಿಕ, ವಾಣಿಜ್ಯ ಕೇಂದ್ರವಾಗಿ ಮೆರೆದ ಭೈರಾಮಡಗಿಯು ಕುಂತಳ ನಾಡಿನ ಕಿರೀಟವಾಗಿ ಇತಿಹಾಸದಲ್ಲಿ ವಿಜ್ರಂಭಿಸಿದೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಹೇಳಿದರು. ಜಿಲ್ಲೆಯ ಅಫಜಲಪುರ ತಾಲೂಕಿನ ಭೈರಾಮಡಗಿಯ ಐತಿಹಾಸಿಕ ಕಾಲಭೈರೇಶ್ವರ ದೇವಾಲಯದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-22ರಲ್ಲಿ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದ ಅವರು, ಗ್ರಾಮದಲ್ಲಿ ದೊರೆಯುವ ವೀರಗಲ್ಲುಗಳು, ಮಹಾಸತಿಗಲ್ಲುಗಳು, ಶಿಲ್ಪಗಳು, ಚದುರಿಬಿದ್ದ ದೇವಾಲಯದ ಸ್ಥಂಭಗಳು, […]

Continue Reading

ಮದುವೆಯಾದ ಮೂರೇ ತಿಂಗಳಲ್ಲಿ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ ಪತ್ನಿ

ರಾಯಚೂರು: ತಾಲೂಕಿನ ಗುರ್ಜಾಪುರ ಬಳಿಯ ಕೃಷ್ಣಾ ನದಿಯ ಬ್ರಿಜ್‌ ಕಂ ಬ್ಯಾರೇಜ್‌ ಮೇಲೆ ಫೋಟೋ ತೆಗೆಸಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿಯೇ ಶನಿವಾರ ನದಿಗೆ ತಳ್ಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೂರು ತಿಂಗಳ ಹಿಂದೆಯಷ್ಟೆ ಮದುವೆಯಾಗಿರುವ ನವದಂಪತಿ ಸೇತುವೆ ಮಾರ್ಗದಿಂದ ತೆರಳುವ ಸಂದರ್ಭದಲ್ಲಿ ಬ್ಯಾರೇಜ್‌ ಮೇಲೆ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳಲು ನಿರ್ಧರಿಸಿದ್ದಾರೆ. ಮೊದಲು ಪತ್ನಿಯ ಫೋಟೋ ತೆಗೆದ ಪತಿ ಬಳಿಕ ತನ್ನ ಫೋಟೋ ತೆಗೆಯುವಂತೆ ಪತ್ನಿಗೆ ಹೇಳಿದ್ದಾನೆ. ಸೇತುವೆ ಕಟ್ಟೆಯ ಮೇಲೆ ನಿಲ್ಲಿಸಿ ಸಮೀಪದಿಂದ ಪೋಟೋ […]

Continue Reading

ಸಹಕಾರಿ ಚಳುವಳಿಯ ಯಶಸ್ವಿಗೆ ಜನರ ಸಕ್ರಿಯ ಭಾಗವಹಿಸುವಿಕೆ ಅಗತ್ಯ

ಕಲಬುರಗಿ: ಭಾರತದಲ್ಲಿ ಸಹಕಾರಿ ಚಳುವಳಿ ಆರಂಭವಾಗಿ ಶತಮಾನ ಕಳೆದರು ಕೂಡಾ ಅದರ ತತ್ವ, ಆಶಯ ಜನಸಾಮಾನ್ಯರಿಗೆ ಮುಟ್ಟುತ್ತಿಲ್ಲ. ‘ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ’ ಎಂಬ ಸಹಕಾರದ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅವುಗಳ ಸದುಪಯೋಗ ಪಡೆದುಕೊಂಡು ಸಹಕಾರಿ ಚಳುವಳಿಯ ಯಶಸ್ವಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆ ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ಜಿಲ್ಲೆಯ ಶಹಾಬಾದ ತಾಲೂಕಿನ ಭಂಕೂರ್‌ನ ಕೆರಿಯಮ್ಮ ದೇವಸ್ಥಾನದ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಅಂತಾರಾಷ್ಟ್ರೀಯ […]

Continue Reading

ಅರಣ್ಯ ಇಲಾಖೆಯಲ್ಲಿ 540 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭ: ಸಚಿವ ಖಂಡ್ರೆ

ಕಲಬುರಗಿ: ಅರಣ್ಯ ಇಲಾಖೆಯಲ್ಲಿ 6000 ಹುದ್ದೆಗಳು ಖಾಲಿ ಇದ್ದು, ಅದರಲ್ಲಿ 540 ಹುದ್ದೆಗಳ ಭರ್ತಿ ಆರಂಭವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 540 ಹುದ್ದೆಗಳ ಜೊತೆಗೆ 340 ಹುದ್ದೆಗಳ ನೇಮಕಾತಿಗೆ ಮುಂದಾಗಲಾಗುವುದು ಎಂದರು.‌ ಮಲೆಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವು ಪ್ರಕರಣ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಹುಲಿಗಳಿಗೆ ವಿಷಪ್ರಾಷನ ಮಾಡಿದ್ದು ವರದಿಯಲ್ಲಿ ಗೊತ್ತಾಗಿದೆ. ಪ್ರಮುಖವಾಗಿ ಕರ್ತವ್ಯ ಲೋಪ ಆರೋಪದ ಮೇಲೆ ಇಬ್ಬರು ಅಧಿಕಾರಿಗಳ ಸಸ್ಪೆಂಡ್ ಮಾಡಿದ್ದೆವೆ.‌ ಓರ್ವ ಅಧಿಕಾರಿ ಅಮಾನತಿಗೆ ಡಿಪಿಎಆರ್‌ ಇಲಾಖೆಗೆ […]

Continue Reading

200 ರೂ. ವಂಚಿಸಿದ ಆರೋಪಿಯನ್ನು 30 ವರ್ಷಗಳ ನಂತರ ಬಂಧಿಸಿದ ಶಿರಸಿ ಪೊಲೀಸರು

ಕಾರವಾರ: ಕಳೆದ 30 ವರ್ಷಗಳ ಹಿಂದೆ ನೌಕರಿ ನೀಡುವುದಾಗಿ ನಂಬಿಸಿ 200 ರೂ. ವಂಚನೆ ಮಾಡಿದ್ದ ಆರೋಪಿಯನ್ನು ಶಿರಸಿ ಗ್ರಾಮೀಣ ಪೊಲೀಸರು ತೀವ್ರ ಹುಡುಕಾಟದ ನಂತರ ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ವಂಚನೆಯ ಮೊತ್ತಕ್ಕಿಂತ ಪ್ರಕರಣದ ಗಂಭೀರತೆ ಮತ್ತು ಕಾಲಾವಧಿ ಗಮನ ಸೆಳೆಯುತ್ತಿದೆ. ಘಟನೆ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 30 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಉದ್ಯೋಗ ಕೊಡುವುದಾಗಿ ಭರವಸೆ ನೀಡಿ ಆರೋಪಿ 200 ರೂ. ತೆಗೆದುಕೊಂಡಿದ್ದನು. ಆದರೆ ನೌಕರಿ […]

Continue Reading