ದೇಶದ ಸ್ವಾತಂತ್ರ್ಯದಲ್ಲಿ ಕ್ವಿಟ್‌ ಇಂಡಿಯಾ ಚಳುವಳಿಯ ಪಾತ್ರ ಪ್ರಮುಖ

ಕಲಬುರಗಿ: ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಸಂಖ್ಯಾತ ಭಾರತಿಯರು ನಿರಂತರ ಹೋರಾಟ ಮಾಡಬೇಕಾಯಿತು. ಸ್ವಾತಂತ್ರ್ಯಕ್ಕಾಗಿ ಜರುಗಿದ ಸಾಕಷ್ಟು ಹೋರಾಟಗಳಲ್ಲಿ ‘ಕ್ವಿಟ್‌ ಇಂಡಿಯಾ ಚಳುವಳಿ, ಪ್ರಮುಖವಾಗಿದೆ. ‘ಮಾಡು ಇಲ್ಲವೆ ಮಡಿ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಘೋಷಣೆಯೊಂದಿಗೆ ಜರುಗಿದ ಚಳುವಳಿ ಜನಸಾಮಾನ್ಯರ ಚಳುವಳಿಯಾಗಿದ್ದರಿಂದ ಮುಂದೆ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ತನ್ನದೆಯಾದ ಪ್ರಮುಖ ಪಾತ್ರ ವಹಿಸಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ಅಫಜಲಪುರ ತಾಲೂಕಿನ ಗೊಬ್ಬೂರ(ಕೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ […]

Continue Reading

ಬೀದರ: ಸೆ.7 ರಂದು ದ್ವಿತೀಯ ಅಖಿಲ ಕರ್ನಾಟಕ ಗಜಲ್ ಸಮ್ಮೇಳನ

ಕಲಬುರಗಿ: ಅಖಿಲ ಕರ್ನಾಟಕ ದ್ವಿತೀಯ ಗಜಲ್ ಸಾಹಿತ್ಯ ಸಮ್ಮೇಳನವನ್ನು ಸೆಪ್ಟೆಂಬರ್ 7 ರಂದು ರವಿವಾರ ಬೀದರ ನಗರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಗಜಲ್ ಸಮ್ಮೇಳನದ ರೂವಾರಿ ಆಗಿರುವ ಕರ್ನಾಟಕ ಗಜಲ್ ಅಕಾಡೆಮಿ ಕಾರ್ಯದರ್ಶಿ ಮಹಿಪಾಲರೆಡ್ಡಿ ಸೇಡಂ ತಿಳಿಸಿದ್ದಾರೆ. ಕಳೆದ ವರ್ಷ ಕಲಬುರಗಿಯ ವಿಶ್ವವಿದ್ಯಾಲಯದಲ್ಲಿ ಪ್ರಥಮ ಗಜಲ್ ಸಾಹಿತ್ಯ ಸಮ್ಮೇಳನ ನಡೆಸಲಾಗಿತ್ತು, ಈ ಬಾರಿ ಕರ್ನಾಟಕದ ಮುಕುಟಪ್ರಾಯ ಎನಿಸಿರುವ ಧರಿನಾಡಿನಲ್ಲಿ ದ್ವಿತೀಯ ಗಜಲ್ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದ್ದು, ಸಮ್ಮೇಳನಾಧ್ಯಕ್ಷರಾಗಿ ಕನ್ನಡದ ಹಿರಿಯ ಕವಿ, ಬಹುಭಾಷಾ ವಿದ್ವಾಂಸರು ಮತ್ತು ಗಜಲ್ […]

Continue Reading

ಕುಡಿತದ ಚಟ ಬಿಡಿಸಲು ನಾಟಿ ಔಷಧಿ ಸೇವಿಸಿ ನಾಲ್ವರು ಸಾವು: ನಕಲಿ ವೈದ್ಯ ಅರೆಸ್ಟ್

ಕಲಬುರಗಿ: ಕುಡಿತದ ಚಟ ಬಿಡಿಸಲು ನಕಲಿ ವೈದ್ಯನಿಂದ ಚಿಕಿತ್ಸೆ ಪಡೆದು ನಾಲ್ವರು ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ನಡೆದಿದೆ. ಲಕ್ಷ್ಮಿ, ಗಣೇಶ್ ರಾಠೋಡ, ನಾಗೇಶ್ ಹಾಗೂ ಮನೋಹರ ಮೃತ ದುರ್ದೈವಿಗಳು. ನಕಲಿ ವೈದ್ಯ ಸಾಯಪ್ಪ ಮುತ್ಯಾ ಅಲಿಯಾಸ್ ಫಕೀರಪ್ಪ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಮದ್ಯವ್ಯಸನಿಗಳಾಗಿದ್ದ ಲಕ್ಷ್ಮಿ, ಗಣೇಶ ರಾಠೋಡ, ನಾಗೇಶ್ ಹಾಗೂ ಮನೋಹರ ತಮ್ಮ ಕುಟುಂಬಸ್ಥರೊಂದಿಗೆ ಸೇಡಂ ತಾಲೂಕಿನ ಇಮಡಾಪುರ ಗ್ರಾಮಕ್ಕೆ ಬಂದಿದ್ದರು. ಇಮಡಾಪುರ ಗ್ರಾಮದ ಸಾಯಪ್ಪ ಮುತ್ಯಾ ಅಲಿಯಾಸ್ ಫಕೀರಪ್ಪ ಎಂಬ […]

Continue Reading

6 ಜನರಿಂದ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ಮೂವರು ಕಾಮುಕರ ಬಂಧನ

ಕೋಲಾರ: ಬಾಲಕಿಯೊಬ್ಬಳ ಮೇಲೆ ನಿರಂತರ ಪ್ರತ್ಯೇಕವಾಗಿ 6 ಜನ ಅತ್ಯಾಚಾರವೆಸಗಿರುವುದು ಕೋಲಾರ ಜಿಲ್ಲೆಯ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ರಾಹುಲ್, ನಾಗೇಶ್ ಮತ್ತು ಪುನೀತ್ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಚೇತನ್, ಕಿರಣ್, ಮಹೇಂದ್ರಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಾಲಕಿ ನೀಡಿದ ಹೇಳಿಕೆ ಆಧರಿಸಿ 6 ಜನರ ವಿರುದ್ದ ಜು.18 ರಂದು ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Continue Reading

ಪತ್ರಿಕೆಗಳ ಓದುಗರ ಸಂಖ್ಯೆ ಕುಸಿದಿಲ್ಲ ಬದಲಿಗೆ ಹೆಚ್ಚಾಗಿದೆ

ಚಿತ್ತಾಪುರ: ಪತ್ರಿಕೆಗಳು ಜ್ಞಾನದ ಬುತ್ತಿಯಾಗಿದ್ದು ಮರಳಿ ಪ್ರವರ್ಧಮಾನಕ್ಕೆ ಬರುತ್ತಿವೆ. ಹೀಗಾಗಿ ಪತ್ರಿಕೆಗಳು ಯಾವತ್ತು ಮುಚ್ಚುವುದಿಲ್ಲ. ಓದುಗರ ಸಂಖ್ಯೆ ಕುಸಿದಿಲ್ಲ. ಬದಲಿಗೆ ಹೆಚ್ಚಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಹೇಳಿದರು. ಪಟ್ಟಣದ ತಾ‌.ಪಂ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಆದರೆ ಪ್ರಸ್ತುತ ದಿನಗಳಲ್ಲಿ ಅನೇಕ ಸಂಕಷ್ಟ ಹಾಗೂ ಸವಾಲುಗಳು ಎದುರಿಸಲಾತ್ತಿದೆ ಎಂದು […]

Continue Reading

ಆಳಂದ ಸಾಸಿರ ನಾಡಿನ ಕೀರ್ತಿ ಹೆಚ್ಚಿಸಿದ ಲಾಡ ಚಿಂಚೋಳಿ ಸ್ಮಾರಕಗಳು: ಮುಡುಬಿ ಗುಂಡೇರಾವ

ಕಲಬುರಗಿ: ಆಲಂದಿ ಸಾಸಿರ ನಾಡಿನ ಕೀರ್ತಿ ಹೆಚ್ಚಿಸಿದ ಲಾಡ ಚಿಂಚೋಳಿ ಸ್ಮಾರಕಗಳ ಕೊಡುಗೆ ಅಪಾರವಾಗಿದೆ ಎಂದು ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು. ಆಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದಲ್ಲಿ ಪ್ರಾಚೀನ ಸಿದ್ದೇಶ್ವರ ದೇವಾಲಯದಲ್ಲಿ ಬಸವೇಶ್ವರ ಸೇವಾ ಬಳಗ ಆಯೋಜಿಸಿದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ- 25ರಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಈ ಗ್ರಾಮವು ಆಲಂದಿ ಸಾಸಿರ ಅಂದರೆ ಸಾವಿರ ಹಳ್ಳಿಗಳಿಗೆ ರಾಜಧಾನಿಯಾಗಿದ್ದ ಆಳಂದ ಪಟ್ಟಣದ ಆಡಳಿತಕ್ಕೆ ಸೇರಿತ್ತು, ಕಲ್ಯಾಣ […]

Continue Reading

ಒಳ ಮೀಸಲಾತಿ ಜಾರಿ ಮಾಡಿ ಇಲ್ಲವೆ ಮಾದಿಗರಿಗೆ 6% ಮೀಸಲಾತಿ ಕೊಡಿ

ಚಿತ್ತಾಪುರ: ಒಳ ಮೀಸಲಾತಿಗಾಗಿ ಆಗಸ್ಟ್ 1ರಂದು ಕಲಬುರಗಿ ನಗರದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಚಿತ್ತಾಪುರ ಮತ್ತು ವಾಡಿ ಪಟ್ಟಣದಿಂದ 3 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸೂರಕರ್ ಮತ್ತು ಸಮಾಜದ ಹಿರಿಯ ಮುಖಂಡ ರಾಜು ಮುಕ್ಕಣ್ಣ ಹೇಳಿದರು. ಈ ಬೃಹತ್ ಪ್ರತಿಭಟನೆಯಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಬೇಕು. ಒಳ ಮೀಸಲಾತಿ ಜಾರಿಗಾಗಿ ಮಾದಿಗರು ಮೂರುವರೆ ದಶಕಗಳಿಂದ ಹೋರಾಟ ನಡೆಸುತ್ತಿದ್ದರು ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುತ್ತಿಲ್ಲ […]

Continue Reading

ಆದಾಯ ಪ್ರಮಾಣ ಪತ್ರ ಪಡೆಯಲು ಹೋದ ವ್ಯಕ್ತಿಗೆ ಶಾಕ್​: ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಜಾತಿಗೆ ಸೇರಿಸಿದ ಕಲಬುರಗಿ ಅಧಿಕಾರಿಗಳು

ಕಲಬುರಗಿ: ಕೆಲ ಸಂದರ್ಭಗಳಲ್ಲಿ ಪ್ರಮಾಣ ಪತ್ರದಲ್ಲಿ ಹೆಸರು, ವಿಳಾಸ ಅಥವಾ ಫೋಟೋ ಬದಲಾವಣೆ ಆಗಿರುವುದನ್ನು ನಾವು ನೋಡಿದ್ದೆವೆ. ಆದರೆ ಕಲಬುರಗಿಯಲ್ಲಿ ವಿಚಿತ್ರ ಘಟನೆ ನಡೆದಿದೆ. ತಹಸೀಲ್ದಾರ್ ​ ಕಚೇರಿ ಅಧಿಕಾರಿಗಳ ಎಡವಟ್ಟಿನಿಂದ ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಧರ್ಮಕ್ಕೆ ಸೇರಿಸಿ ಪ್ರಮಾಣ ಪತ್ರ ವಿತರಣೆ ಮಾಡಲಾಗಿದೆ. ತಪ್ಪು ಸರಿಪಡಿಸುವಂತೆ ಸೂಚಿಸಿದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲವೆಂದು ಆರೋಪ ಕೇಳಿಬಂದಿದೆ. ಜಾತಿ ಕಾಲಂನಲ್ಲಿ ಮುಸ್ಲಿಂ ಅಂತಾ ಉಲ್ಲೇಖ‌ ಕಲಬುರಗಿಯ ರಾಮತೀರ್ಥ ನಗರದ ಮಹಾಂತಪ್ಪ ಕೊತ್ಲೆ ಎಂಬ ವ್ಯಕ್ತಿ ವೀರಶೈವ ಲಿಂಗಾಯತ ಸಮುದಾಯದವರು. ಇವರು […]

Continue Reading

ತೇವಾಂಶ ಕಾಪಾಡಿ ಬೆಳೆಗಳ ಸಂರಕ್ಷಣೆ ಅಗತ್ಯ

ಕಲಬುರಗಿ: ತುಂತುರು ಅಥವಾ ಹನಿ ನೀರಾವರಿ ಮೂಲಕ ನೀರು ಉಪಯೋಗಿಸುವುದು ಸೇರಿದಂತೆ ಮತ್ತಿತರ ಕ್ರಮಗಳನ್ನು ಅನುಸರಿಸಿ, ಬೆಳೆಯನ್ನು ಕಾಪಾಡಬೇಕು ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ರೈತರಿಗೆ ಸಲಹೆ ನೀಡಿದರು. ಸುಂಟನೂರ ಕ್ರಾಸ್ ಸಮೀಪದ ಪ್ರಗತಿಪರ ರೈತ ಸಂತೋಷ ಹಿರಮಶೆಟ್ಟಿ ತೋಟದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಕೃಷಿ ಕ್ಷೇತ್ರ ಭೇಟಿ ಮತ್ತು ರೈತರಿಗೆ ಸಲಹೆಗಳು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಮಳೆಯಾಗಬೇಕಾಗಿದ್ದು. ಆದರೆ ಜಿಲ್ಲೆಯ ಬಹುತೇಕ ಕಡೆ ಮಳೆಯ ಅಭಾವವಿದೆ. ನಮ್ಮ […]

Continue Reading

ಕಲಬುರಗಿ: ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆ, 50 ಸಾವಿರ ರೂ ದಂಡ

ಕಲಬುರಗಿ: ತಾಲೂಕಿನ ಗ್ರಾಮವೊಂದರ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಕಬ್ಬಿನ ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ ಅಪರಾಧ ಸಾಬೀತಾಗಿದ್ದರಿಂದ ಹೊನ್ನಪ್ಪ ಶರಣಪ್ಪ ದೊಡ್ಡಮನಿ ಎಂಬಾತನಿಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿದೆ. 22 ಜನವರಿ 2024 ರಂದು ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರ ಎಸಗುತ್ತಿದ್ದ. ಈ ಸಂದರ್ಭದಲ್ಲಿ ಮಹಿಳೆ ಚೀರಾಡಿದ್ದರಿಂದ ಆಕೆಯ ಸೋದರತ್ತೆ ಬಂದು ನೋಡಿದಾಗ ಹೊನ್ನಪ್ಪ ಪರಾರಿಯಾಗಿದ್ದ. ನಂತರ ಆಕೆ ಮಹಿಳೆಯ […]

Continue Reading