ತೇವಾಂಶ ಕಾಪಾಡಿ ಬೆಳೆಗಳ ಸಂರಕ್ಷಣೆ ಅಗತ್ಯ

ಜಿಲ್ಲೆ

ಕಲಬುರಗಿ: ತುಂತುರು ಅಥವಾ ಹನಿ ನೀರಾವರಿ ಮೂಲಕ ನೀರು ಉಪಯೋಗಿಸುವುದು ಸೇರಿದಂತೆ ಮತ್ತಿತರ ಕ್ರಮಗಳನ್ನು ಅನುಸರಿಸಿ, ಬೆಳೆಯನ್ನು ಕಾಪಾಡಬೇಕು ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ರೈತರಿಗೆ ಸಲಹೆ ನೀಡಿದರು.

ಸುಂಟನೂರ ಕ್ರಾಸ್ ಸಮೀಪದ ಪ್ರಗತಿಪರ ರೈತ ಸಂತೋಷ ಹಿರಮಶೆಟ್ಟಿ ತೋಟದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಕೃಷಿ ಕ್ಷೇತ್ರ ಭೇಟಿ ಮತ್ತು ರೈತರಿಗೆ ಸಲಹೆಗಳು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಮಳೆಯಾಗಬೇಕಾಗಿದ್ದು. ಆದರೆ ಜಿಲ್ಲೆಯ ಬಹುತೇಕ ಕಡೆ ಮಳೆಯ ಅಭಾವವಿದೆ. ನಮ್ಮ ಜಿಲ್ಲೆಯ ಪ್ರಮುಖ ಮುಂಗಾರು ಬೆಳೆ ಹೆಸರಾಗಿದೆ. ಇದರ ತೇವಾಂಶವನ್ನು ಕಾಪಾಡಲು ಮಧ್ಯಂತರ ಬೇಸಾಯ ಮಾಡಬೇಕು. ಕೈಯಿಂದ ಕಸ ಅಥವಾ ಕಳೆ ತೆಗೆಯಬೇಕು. ತೋಟಗಾರಿಕೆಯಿದ್ದವರು ನೀರುಣಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಎಚ್.ಬಿ ಪಾಟೀಲ, ಪ್ರಗತಿಪರ ರೈತ ಸಂತೋಷ ಹಿರಮಶೆಟ್ಟಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *