ಚಿತ್ತಾಪುರ: ಪತ್ರಿಕೆಗಳು ಜ್ಞಾನದ ಬುತ್ತಿಯಾಗಿದ್ದು ಮರಳಿ ಪ್ರವರ್ಧಮಾನಕ್ಕೆ ಬರುತ್ತಿವೆ. ಹೀಗಾಗಿ ಪತ್ರಿಕೆಗಳು ಯಾವತ್ತು ಮುಚ್ಚುವುದಿಲ್ಲ. ಓದುಗರ ಸಂಖ್ಯೆ ಕುಸಿದಿಲ್ಲ. ಬದಲಿಗೆ ಹೆಚ್ಚಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಹೇಳಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಆದರೆ ಪ್ರಸ್ತುತ ದಿನಗಳಲ್ಲಿ ಅನೇಕ ಸಂಕಷ್ಟ ಹಾಗೂ ಸವಾಲುಗಳು ಎದುರಿಸಲಾತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಪತ್ರಕರ್ತರೇ ಪತ್ರಿಕೆಗಳ ಜೀವಾಳ, ಅವರಿಗೆ ಸಾಕಷ್ಟು ಸಮಸ್ಯೆಗಳಿವೆ. ಹೋರಾಟದ ಪರಿಣಾಮವಾಗಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ ಜಾರಿಯಾಗಿದೆ ಎಂದರು.
ರಾಯಚೂರಿನ ಪ್ರಗತಿಪರ ಚಿಂತಕ, ಉಪನ್ಯಾಸಕ ಡಾ.ಚಂದ್ರಗಿರೀಶ್ ವಿಶೇಷ ಉಪನ್ಯಾಸ ನೀಡಿದ ಅವರು, ಪ್ರಜಾತಂತ್ರದ ನಾಲ್ಕನೇ ಸ್ತಂಭವಾಗಿರುವ ಪತ್ರಿಕೆಗಳು ಸ್ವಾತಂತ್ರ‍್ಯ ಪೂರ್ವದಿಂದಲೂ ಹಲವಾರು ಸವಾಲುಗಳನ್ನು ಎದುರಿಸುತ್ತ ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಪತ್ರಿಕೆಗಳು ಇವತ್ತಿಗೂ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ ಎಂದರು.
ಸರ್ಕಾರ ಪಂಚ ಗ್ಯಾರಂಟಿಗಳು ಮಾಡಿದಂತೆ ಪತ್ರಕರ್ತರಿಗೂ ಒಂದು ಗ್ಯಾರಂಟಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಡಾ.ಶಿವರಂಜನ ಸತ್ಯಂಪೇಟೆ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಸಿದ್ದರಾಜ ಮಲ್ಕಂಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಸಿಪಿಐ ಚಂದ್ರಶೇಖರ ತಿಗಡಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರ, ಪ್ರಮುಖರಾದ ನಾಗರಾಜ ಭಂಕಲಗಿ, ಸಿದ್ದಲಿಂಗ ಬಾಳಿ, ಅಯ್ಯಪ್ಪ ರಾಮತೀರ್ಥ, ನಾಗರೆಡ್ಡಿ ಗೋಪಸೇನ್, ಅರ್ಜುನ್ ಗಂಗಾಣಿ, ಸೂರ್ಯಕಾಂತ ರದ್ದೆವಾಡಗಿ, ಹರಿಶ್ಚಂದ್ರ ಕರಣಿಕ್, ವೀರಣ್ಣ ಯಾರಿ, ಸಾಬಣ್ಣ ಅಣಮಿ, ಶರಣು ಹೇರೂರು, ಸಿದ್ದಯ್ಯಶಾಸ್ತ್ರಿ, ಸಿದ್ದು ಪೂಜಾರಿ, ಪತ್ರಕರ್ತರಾದ ವೀರೇಂದ್ರಕುಮಾರ ಕೊಲ್ಲೂರ, ಕಾಶಿನಾಥ ಗುತ್ತೇದಾರ, ರವಿಶಂಕರ ಬುರ್ಲಿ, ವಿಕ್ರಮ್ ತೇಜಸ್, ಎಂ.ಡಿ ಮಶಾಕ, ಸಂತೋಷಕುಮಾರ ಕಟ್ಟಿಮನಿ, ಜಗದೇವ ಕುಂಬಾರ, ಅನಂತನಾಗ ದೇಶಪಾಂಡೆ, ದಯಾನಂದ ಖಜುರಿ, ವಾಸು ಚವ್ಹಾಣ, ಅಣ್ಣಾರಾಯ ಇವಣಿ, ಚಂದ್ರಶೇಖರ ಬಳ್ಳಾ ಸೇರಿದಂತೆ ಅನೇಕರು ಇದ್ದರು.
ಡಾ.ಸಾಯಬಣ್ಣ ಗುಡುಬಾ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಗದೇವ ದಿಗ್ಗಾಂವಕರ್ ಸ್ವಾಗತಿಸಿದರು, ಮಡಿವಾಳಪ್ಪ ಹೇರೂರು ನಿರೂಪಿಸಿದರು, ರಾಯಪ್ಪ ಕಮರವಾಡಿ ವಂದಿಸಿದರು.