ನುಡಿದಂತೆ ನಡೆದ ಶಾಸಕ ಮತ್ತಿಮೂಡ: ರಾವೂರ ಶ್ರೀ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಜನರಿಗೆ ಆಶ್ವಾಸನೆ ನೀಡಿ ಮರೆತು ಹೋಗುವ ಜನಪ್ರತಿನಿಧಿಗಳ ಮಧ್ಯೆ, ಪಕ್ಷ ಭೇದ ಮರೆತು ಜನಪರ ಕೆಲಸ ಮಾಡುತ್ತಿರುವ ಮತ್ತು ನುಡಿದಂತೆ ನಡೆಯುತ್ತಿರುವ ಶಾಸಕ ಬಸವರಾಜ ಮತ್ತಿಮೂಡ ಅಪರೂಪದ ಶಾಸಕರು ಎಂದು ರಾವೂರಿನ ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಗೋಳಾ(ಕೆ) ಗ್ರಾಮದಲ್ಲಿ ಸಮುದಾಯ ಭವನ ಹಾಗೂ ರಸ್ತೆ ಕಾಮಗಾರಿ ಅಡಿಗಲ್ಲು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಶಾಸಕ ಬಸವರಾಜ ಮತ್ತಿಮಡು ಗುದ್ದಲಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ಕಡೆಯ ಗ್ರಾಮವಾದ ಗೋಳಾ(ಕೆ) ಗ್ರಾಮದಲ್ಲಿ ಬಹುದಿನದ ಬೇಡಿಕೆಯಾದ ನಿಜಾಮ್ ಬಜಾರದಿಂದ ಗ್ರಾಮದವರೆಗೆ 60 ಲಕ್ಷ ರೂ ಸಿಸಿ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ, 50 ಲಕ್ಷ ರೂ ಯಲ್ಲಿ ಸಮುದಾಯ ಭವನ ನಿರ್ಮಿಸಲು ಗುದ್ದಲಿ ಪೂಜೆ ಮಾಡಲಾಗಿದೆ. ಬೆಂಕಿ ಮುತ್ಯಾ ಗುಡಿಯಿಂದ ರೈಲ್ವೆ ಗೇಟ್ ವರೆಗೆ ರಸ್ತೆ ಸುಧಾರಣೆಗೆ 55 ಲಕ್ಷ ರೂ, ನೀಲಮ್ಮ ಗುಡಿಯಿಂದ ಸರ್ಕಾರಿ ಶಾಲೆಯವರೆಗೆ ರಸ್ತೆ ಸುಧಾರಣೆಗಾಗಿ 20 ಲಕ್ಷ ರೂ, ಬೋರ್ವೆಲ್ ಮೋಟರ್ ರಿಪೇರಿ, ಪೈಪ್ ಲೈನ್ ನಿರ್ಮಿಸಲು 10 ಲಕ್ಷ ರೂ ಮತ್ತು ಹಳೆ ಶಹಾಬಾದ್ ರಸ್ತೆಯಿಂದ ರಾಯಚೋಟಿ ವೀರಭದ್ರೇಶ್ವರ ಮಠದವರೆಗೆ 60 ಲಕ್ಷ ರೂ ಸಿಸಿ ರಸ್ತೆ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು. ಇನ್ನೂ ಹಲವಾರು ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ನನ್ನ ಅವಧಿಯ ಒಳಗೆ ಎಲ್ಲಾ ಕಾಮಗಾರಿ ಸಂಪೂರ್ಣ ಗೊಳಿಸುತ್ತೆನೆ ಎಂದರು.

ವೇದಿಕೆ ಮೇಲೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಸೂಷ್ಮ ಮರಲಿಂಗ, ಅರುಣಕುಮಾರ ಪಟ್ಟಣಕರ, ಎಇಇ ರಜನಿಕಾಂತ ಶೃಂಗೇರಿ, ಅರ್ಜುನ ಬಿ. ಭೌಗತಿ, ಜೆಇ ಮಿರಾಜುದ್ದೀನ, ಪ್ರಮುಖರಾದ ಅಣವೀರ ಇಂಗಿನಶೆಟ್ಟಿ, ನಿಂಗಣ್ಣ ಹುಳುಗೋಳ್ಕರ್, ಶರಣಗೌಡ ಪೊಲೀಸ್ ಪಾಟೀಲ, ವಿಶ್ವರಾಧ್ಯ ದಿಡ್ಡಿ, ವಿಜಯಕುಮಾರ ಚವ್ಹಾಣ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಲಿಂ ಪಟೇಲ್, ಬೀಮರಾವ ಸಾಳೊಂಕೆ, ವಿಜಯಾನಂದ ಮಾಣಿಕ, ಮರಲಿಂಗ ಗಂಗಬೋ, ರಾಜೇಶ ಯನಗುಂಟಿಕರ, ದಿನೇಶ ಗೌಳಿ, ಸಿದ್ದರಾಮ ಕುಸಾಳೆ, ಅಮರ ಕೋರೆ ಇದ್ದರು.

ಕಾರ್ಯಕ್ರಮವನ್ನು ಅರುಣ ಪಟ್ಟಣಕರ ಸ್ವಾಗತಿಸಿದರು, ಬಸವರಾಜ ಬಿರಾದಾರ ನಿರೂಪಿಸಿದರು.

Leave a Reply

Your email address will not be published. Required fields are marked *