ಸುದ್ದಿ ಸಂಗ್ರಹ ಶಹಾಬಾದ
ಮಹಾನ್ ಮಾನವತಾವಾದಿ ಸಂತ ಸೇವಾಲಾಲ್ ಮಹಾರಾಜರ ತತ್ವ ಆದರ್ಶಗಳು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಶಾಸಕ ಬಸವರಾಜ ಮತ್ತಿಮೂಡ್ ಹೇಳಿದರು.
ತಾಲೂಕಿನ ಗ್ರಾಮೀಣ ಬಂಜಾರ ಸೇವಾ ಸಂಘ ಹಾಗೂ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸೇವಾಲಾಲ್ ಮಹಾರಾಜ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂತ ಸೇವಾಲಾಲ್ ಮಹಾರಾಜರು ಸರ್ವರು ಶಾಂತಿಯಿಂದ ಸಹಭಾಳ್ವೆಯೊಂದಿಗೆ, ಸಹೋದರತೆ ಭಾವದಿಂದ ಸಮಾಜದಲ್ಲಿ ಬಾಳಬೇಕು, ಕಾಯಕ ಜೀವಿಯಾಗಿ ಬದುಕಬೇಕು, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮಾನವಿಯಗುಣ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಮಾನವ ಕುಲಕೋಟಿಯಲ್ಲದೆ ಪ್ರಾಣಿ, ಪಕ್ಷಿ ಎಲ್ಲರ ಹಿತ ಕಾಯಬೇಕು ಎಂದು ಸಂದೇಶ ನೀಡುವ ಮೂಲಕ ವಿಶ್ವಕ್ಕೆ ಒಳಿತನ್ನು ಬಯಸುವ ಸಂತರೆಂಬ ಹೆಗ್ಗಳಿಕೆ ಪಡೆದಿದ್ದಾರೆ. ಬಂಜಾರ ಸಮಾಜದ ಯುವಕರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೆರಿ ಸಮಾಜದ ಕೀರ್ತಿ ಉತ್ತುಂಗಕ್ಕೆರಿಸಬೇಕು ಎಂದು ಹಾರೈಸಿದರು.
ಜಿ.ಪಂ ಮಾಜಿ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ್ ಮಾತನಾಡಿ, ಬಂಜಾರ ಸಮಾಜವು ಸರ್ವ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸಮಾಜವಾಗಿದೆ, ಲಂಬಾಣಿ ಭಾಷೆ, ಸಂಸ್ಕೃತಿ ಆಚಾರ, ವಿಚಾರ, ಉಡುಗೆ- ತೊಡುಗೆ ವೈಶಿಷ್ಟ್ಯತೆಯಿಂದ ಕೂಡಿದೆ. ಸಮಾಜದ ಮುಖ್ಯವಾಹಿನಿಯಿಂದ ಬಂಜಾರ ಸಮಾಜವು ಇನ್ನೂ ದೂರವಿದ್ದು, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ, ಮಹಾನಗರ ಪಾಲಿಕೆ ಸದಸ್ಯ ರವಿ ರಾಠೋಡ ಮತ್ತು ಉಪನ್ಯಾಸಕ ವಸಂತ ಜಾಧವ ಮಾತನಾಡಿದರು.
ಜೇಮಸಿಂಗ ಮಹಾರಾಜ, ಮುರಾರಿ ಮಹಾರಾಜ, ಸುರೇಶ ಮಹಾರಾಜ, ಮಾತೋಶ್ರೀ ಸರಸ್ವತಿ ದೇವಿ ಸಾನಿಧ್ಯ ವಹಿಸಿದರು.
ನಿವೃತ್ತ ನ್ಯಾಯಾಧೀಶ ಸುಭಾಷ ರಾಠೋಡ, ಜಿ.ಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ್, ಉದ್ಯಮಿ ನರೇಂದ್ರ ವರ್ಮಾ, ಪ್ರಮುಖರಾದ ಶಂಕರ ಚವ್ಹಾಣ್, ಜಗದೀಶ ಚವ್ಹಾಣ್, ಗೋಪಾಲ ರಾಠೋಡ, ನಿಂಗಣ್ಣ ಹುಳಗೋಳಕರ್, ಕಿರಣ ಚವ್ಹಾಣ್, ಸುರಜ ರಾಠೋಡ ಮತ್ತು ಗಣ್ಯರು ವೇದಿಕೆಮೇಲ್ಲಿದ್ದರು.
ಸಂಘದ ಅಧ್ಯಕ್ಷ ರಾಜು ಚವ್ಹಾಣ್, ಸಮಿತಿ ಅಧ್ಯಕ್ಷ ರಾಜು ಪವಾರ, ಗೌರವಾಧ್ಯಕ್ಷ ಗೋಪಾಲ ರಾಠೋಡ, ಮುಖಂಡರಾದ ಗಂಗಾರಾಮ ರಾಠೋಡ, ಚಂದ್ರಕಾಂತ ರಾಠೋಡ, ವಸಂತ ರಾಠೋಡ, ದೇವರಾಜ ರಾಠೋಡ, ವಿನೋದ ಜಾಧವ, ವೆಂಕಟೇಶ ಚವ್ಹಾಣ್, ಪ್ರದೀಪ ಪವಾರ, ಕಿರಣ ರಾಠೋಡ, ಶಶಿಕಾಂತ ರಾಠೋಡ ಮತ್ತು ತಾಲೂಕಿನ ವಿವಿಧ ತಾಂಡದ ಮುಖಂಡರು ಪಾಲ್ಗೊಂಡಿದರು.
ಕಾರ್ಯಕ್ರಮವನ್ನು ದೇವರಾಜ ರಾಠೋಡ, ಚಂದು ಜಾಧವ, ರಾಜು ರಾಠೋಡ ನಿರೂಪಿಸಿದರು, ನಾಮದೇವ ರಾಠೋಡ
ಪ್ರಾಸ್ತಾವಿಕ ಮಾತನಾಡಿದರು, ವಿನೋದ ರಾಠೋಡ ವಂದಿಸಿದರು.