ಸುದ್ದಿ ಸಂಗ್ರಹ ಶಹಾಬಾದ
ಅಪಘಾತ ತಡೆಯಲು ರಸ್ತೆ ನಿಯಮಗಳು ಎಲ್ಲರು ಪಾಲಿಸಬೇಕು ಮತ್ತು ವಾಹನ ಚಲಾಯಿಸುವ ಪ್ರತಿಯೊಬ್ಬರು ಚಾಲನಾ ಪರವಾನಗಿ, ವಿಮಾ ಪಾಲಿಸಿ, ನೊಂದಣಿ ಪತ್ರ, ವಾಯು ಮಾಲಿನ್ಯ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ನಗರ ಪೊಲೀಸ ಠಾಣೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡ್ರೈವಿಂಗ್ ಮಾಡುವಾಗ ಚಾಲಕರು ಮೊಬೈಲ್ ಫೋನ್ ಬಳಸುವುದು ಅನಾಹುತಕ್ಕೆ ಕಾರಣವಾಗಬಹುದು. ವಾಹನ ಡ್ಯಾಮೇಜಾದರೆ ಮತ್ತು ಚಾಲಕ ಗಾಯಗೊಂಡರೆ ಇನ್ಸೂರೆನ್ಸ್ ಮಾಡಬೇಕು ಎಂದರು.
ವಾಹನಗಳು ಹೆಚ್ಚಾದಷ್ಟು ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ, ರಸ್ತೆ ಸಂಚಾರ ನಿಯಮಗಳು ಪಾಲಿಸದಿರುವುದೆ ಅಪಘಾತಕ್ಕೆ ಕಾರಣವಾಗಿದೆ, ಸೂಚಿಸಿದ ಪಾರ್ಕಿಂಗ್ ಕಡೆ ವಾಹನಗಳು ನಿಲ್ಲಿಸಿ, ನೊ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಬಾರದು, ರಸ್ತೆ ಅಪಘಾತ ತಡೆಯಲು ಪ್ರಜ್ಞಾವಂತ ನಾಗರಿಕರು ಪೊಲೀಸರೊಂದಿಗೆ ಸಹಕರಿಸಬೇಕು, ಒಟ್ಟಿನಲ್ಲಿ ಅಪಘಾತ ಮುಕ್ತ ನಗರವಾಗಬೇಕು, ಹೀಗಾಗಬೇಕಾದರೆ ಸರ್ವರ ಸಹಕಾರ ಅಗತ್ಯ ಎಂದರು.
ವೇದಿಕೆ ಮೇಲೆ ಕಾಡಾ ಅಧ್ಯಕ್ಷ ಡಾ ಎಂ.ಎ ರಶೀದ, ಪ್ರಮುಖರಾದ ಅಣವೀರ ಇಂಗಿನಶೆಟ್ಟಿ, ವಿ.ಕೆ ವರ್ಮ ಮತ್ತು ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಗರ ಪೊಲೀಸ್ ಠಾಣೆಯ ಪಿಐ ಪರಶುರಾಮ ವನಂಜಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.