ಆ ಗಂಡನನ್ನು ಬಿಟ್ಟು ಬೇರೊಬ್ಬನ ಜೊತೆಗೆ ಮದುವೆ, ಈಗ ಇವನನ್ನು ಬಿಟ್ಟು ಮತ್ತೊಬ್ಬನ ಜೊತೆ ಓಡಿ ಹೋದಳು: ಬಾಳು ಕೊಟ್ಟ ಪತಿ, 3 ಮಕ್ಕಳು ಅನಾಥ

ರಾಜ್ಯ

ಆನೇಕಲ್: 11 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನು ಬಿಟ್ಟು 3 ಮಕ್ಕಳ ತಾಯಿ ಪ್ರಿಯಕರನ ಜೊತೆ ಎಸ್ಕೇಪ್‌ ಆಗಿರುವ ಘಟನೆ ಬೆಂಗಳೂರಿನ ಬನ್ನೆರುಘಟ್ಟ ಸಮೀಪದ ಬಸವನಪುರ ಗ್ರಾಮದಲ್ಲಿ ನಡೆದಿದೆ.

11 ವರ್ಷಗಳ ಹಿಂದೆ ಮಂಜುನಾಥ​ ಎಂಬ ವ್ಯಕ್ತಿಯ ಜೊತೆಗೆ ಲೀಲಾವತಿ ಎಂಬ ಮಹಿಳೆ ಮದುವೆಯಾಗಿದ್ದಳು. ಇವರಿಗೆ ಮೂರು ಮಕ್ಕಳು ಸಹ ಇದ್ದಾರೆ. ಆದರೆ ಮೂರು ಮಕ್ಕಳ ತಾಯಿ ಲೀಲಾವತಿ ಮತ್ತೊರ್ವನ ಜೊತೆ ಓಡಿಹೋಗಿದ್ದಾಳೆ. ಪತಿ ಮಂಜುನಾಥ, ಮೂರು ಮಕ್ಕಳು ಕಣ್ಣೀರಿಡುತ್ತಿದ್ದಾರೆ. ಮೂವರು ಮಕ್ಕಳು ಮತ್ತು ಗಂಡನನ್ನು ಬಿಟ್ಟು ಪ್ರಿಯಕರ ಸಂತೋಷ​​ನೊಂದಿಗೆ ಮನೆ ಬಿಟ್ಟು ಓಡಿಹೋದ ಲೀಲಾವತಿ ಆಂಟಿ ಕಥೆ ಒಂದೊಂದಲ್ಲ. ಈ ಲೀಲಾವತಿಗೆ ಈಗ ಇರುವ ಗಂಡನಿಗಿಂತ ಮೊದಲೇ ಮತ್ತೊಬ್ಬನೊಂದಿಗೆ ಮದುವೆಯಾಗಿದ್ದಳು ಎಂದು ಗಂಡ ಆರೋಪಿಸಿದ್ದಾನೆ. ಈಗ ನನ್ನನ್ನು ಬಿಟ್ಟು ಮತ್ತೊಬ್ಬನ ಹಿಂದೆ ಹೋಗಿದ್ದಾಳೆ ಎಂದು ಗೋಳಾಡಿದ್ದಾನೆ.

ಬಸವನಪುರದಲ್ಲಿ ವಾಸವಿದ್ದ ಲೀಲಾವತಿ -ಮಂಜುನಾಥ ದಂಪತಿ 11 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದರು. ಮಂಜುನಾಥ ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದ. ಕಳೆದ 2 ವರ್ಷಗಳ ಹಿಂದೆ ಲೀಲಾವತಿಗೆ ಪ್ರಿಯಕರ ಸಂತೋಷ್‌ನ ಪರಿಚಯವಾಗಿತ್ತು. ಇಬ್ಬರ ನಡುವೆ ಸಲುಗೆ ಹೆಚ್ಚಾಗಿ ಅಕ್ರಮ ಸಂಬಂಧ ಬೆಳೆದಿತ್ತು. ಸಾಕಷ್ಟು ಬಾರಿ ಮಂಜುನಾಥ ಇದನ್ನು ಪ್ರಶ್ನೆ ಮಾಡಿದ್ದ. ಆದರೂ ಬುದ್ಧಿ ಕಲಿಯದ ಲೀಲಾವತಿ ರವಿವಾರ ಮನೆಯಿಂದ ಎಸ್ಕೇಪ್‌ ಆಗಿದ್ದಾಳೆ. ಈ ಕುರಿತು ಪತಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ಠಾಣೆಗೆ ಹಾಜರಾದ ಲೀಲಾವತಿ ತನಗೆ ಪ್ರಿಯಕರನೇ ಬೇಕೆಂದು ತಾಳಿ ಕಿತ್ತು ಗಂಡನ ಕೈಗೆ ಕೊಟ್ಟು ಹೋಗಿದ್ದಾಳೆ.

ಮತ್ತೊಬ್ಬನನ್ನು ಮದ್ವೆಯಾಗಿದ್ದ ಲೀಲಾವತಿ
11 ವರ್ಷಗಳ ಪ್ರೀತಿ-ಮದ್ವೆ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಬಸವನಪುರ ಗ್ರಾಮದ ಬ್ಯೂಟಿಯ ಬಗ್ಗೆ ಇನ್ನಷ್ಟು ರಹಸ್ಯಗಳು ಬಯಲಾಗಿವೆ. ಮೂರು ಮಕ್ಕಳ ತಾಯಿಯಾಗಿರುವ ಈಕೆ ಒಂದಲ್ಲ ಎರಡಲ್ಲ ಮೂವರೊಂದಿಗೆ ಸಂಪರ್ಕದಲ್ಲಿದ್ದಳು ಎಂದು ತಿಳಿದುಬಂದಿದೆ. ಪ್ರಿಯಕರನೊಂದಿಗೆ ಓಡಿಹೋಗಿರುವ ಪತ್ನಿ ಲೀಲಾವತಿ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಗಂಡ ರಿವೀಲ್​ ಮಾಡಿದ್ದು, ನನ್ನನ್ನು ಮದುವೆಯಾಗುವುದಕ್ಕೂ ಮೊದಲೇ ಮತ್ತೊಬ್ಬನನ್ನು ಮದುವೆಯಾಗಿದ್ದಳು ಎಂದು ಗಂಡ ಆರೋಪಿಸಿದ್ದಾನೆ. ಅಲ್ಲದೆ 2 ವರ್ಷಗಳಿಂದ ಸತೋಷ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದ ಆಂಟಿ ಲೀಲಾವತಿ ಇನ್ನೊಬ್ಬಾತನೊಂದಿಗೆ ಸಂಪರ್ಕದಲ್ಲಿದ್ದಳು ಎನ್ನುವುದಕ್ಕೆ ಫೋಟೋ ಸಾಕ್ಷ್ಯಿಯಾಗಾ ಸಿಕ್ಕಿದೆ.

ಪತ್ನಿಯನ್ನು ರೆಡ್​ ಹ್ಯಾಂಡ್ ಆಗಿ ಹಿಡಿದ ಪತಿ
ಬಸವನಪುರದಲ್ಲಿ ವಾಸವಿದ್ದ ಲೀಲಾವತಿ, ಮಂಜುನಾಥ ದಂಪತಿ 11 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದರು. ಮಂಜುನಾಥ ಕ್ಯಾಬ್‌ ಡ್ರೈವರ್‌ ಆಗಿದ್ದ. ರಾತ್ರಿ ಕ್ಯಾಬ್‌ ಡ್ರೈವಿಂಗ್‌ ಕೆಲಸಕ್ಕೆ ಹೋಗುತ್ತಿದ್ದರೆ, ಇತ್ತ ಲೀಲಾವತಿ ಪ್ರಿಯಕರ ಸಂತೋಷನನ್ನು ಮನೆಗೆ ಕರೆಯಿಸಿಕೊಂಡು ಚಕ್ಕಂದವಾಡುತ್ತಿದ್ದಳು. ಕೆಲ ದಿನಗಳ ಬಳಿಕ ಲೀಲಾವತಿ ನಡವಳಿಕೆಯಿಂದ ಪತಿ ಮಂಜುನಾಥ ಅನುಮಾನಗೊಂಡಿದ್ದ. ಈಕೆಯ ಕಾಮದಾಟ ಬಯಲಿಗೆಳೆಯಬೇಕು ಎಂದು ರವಿವಾರ ಕೆಲಸಕ್ಕೆ ಹೋಗುವುದಾಗಿ ಹೇಳಿ, ಮನೆಯ ಸಮೀಪವೇ ಕಾರಿನಲ್ಲಿ ಕುಳಿತಿದ್ದ.

ರಾತ್ರಿ ಲೀಲಾವತಿ ಫೋನ್‌ ಮಾಡಿ ಎಲ್ಲಿದ್ದಿಯಾ ಅಂತ ಕೇಳಿದಾಗ ಎಚ್‌ಎಎಲ್‌ ಬಳಿ ಇದ್ದಿನಿ ಎಂದು ಮಂಜುನಾಥ ಹೇಳಿದ್ದ. ಆಗ ಲೀಲಾವತಿ, ಸಂತೋಷ್‌ಗೆ ಫೋನ್‌ ಮಾಡಿ ಮನೆಗೆ ಕರೆಸಿಕೊಂಡು ತಮ್ಮ ಆಟ ಶುರು ಮಾಡಿಕೊಂಡಿದ್ದರು. ಅಷ್ಟರಲ್ಲಿ ಮನೆಗೆ ಎಂಟ್ರಿ ಕೊಟ್ಟ ಪತಿ, ರೆಡ್‌ಹ್ಯಾಂಡಾಗಿ ಇಬ್ಬರನ್ನು ಹಿಡಿದಿದ್ದ. ಈ ವೇಳೆ ಜೋರು ಗಲಾಟೆ ನಡೆದಿತ್ತು. ಬಳಿಕ ಈ ಪ್ರಕರಣ ಬನ್ನೆರುಘಟ್ಟ ಪೊಲೀಸ್‌ ಠಾಣೆ ಮೆಟ್ಟಿಲೇರಿದ. ಠಾಣೆಯಲ್ಲಿ ಪತಿ ಮನವೊಲಿಸಲು ಪ್ರಯತ್ನಿಸಿದ ಹೊರತಾಗಿಯೂ ವಿಫಲವಾಯಿತು. ತಾಳಿಯನ್ನು ಕಿತ್ತು ಮಂಜುನಾಥ ಕೈಗೆ ಕೊಟ್ಟವಳೇ ಪೊಲೀಸ್ ಠಾಣೆಯಿಂದ ನೇರವಾಗಿ ಸಂತೋಷ ಜೊತೆ ಹೋಗಿದ್ದಾಳೆ.

Leave a Reply

Your email address will not be published. Required fields are marked *