ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಅಂಗವಾಗಿ ಮುಖಂಡರು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಜಾತಿ, ದ್ವೇಷದ ಗೋಡೆಯನ್ನು ಒಡೆದು ಎಲ್ಲರಲ್ಲಿ ಭಾತೃತ್ವ ಬೀಜ ಬಿತ್ತಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಆದರ್ಶಪೂರ್ಣವಾದದ್ದು ಎಂದರು.
ಮಹಾಭಾರತದಲ್ಲಿ ಶ್ರೀ ಕೃಷ್ಣನು ಜಗತ್ತಿನಲ್ಲಿ ಅಧರ್ಮ ಯಾವಾಗ ಹೆಚ್ಚುತ್ತದೆ ಅದನ್ನು ಮಟ್ಟ ಹಾಕಿ, ಧರ್ಮವನ್ನು ಪುನರ್ ಸ್ಥಾಪಿಸಲು ನಾನು ಮತ್ತೆ ಮತ್ತೆ ಜನ್ಮ ಎತ್ತುತ್ತೆನೆ ಎಂದು ಹೇಳಿದಂತೆ, ಭಾರತದ ನೆಲದಲ್ಲಿ ಅಶಾಂತಿ ದೌರ್ಜನ್ಯ ಮತಾಂತರ ಹೀಗೆ ನಮ್ಮ ಆಚಾರ, ಪರಂಪರೆಗೆ ಧಕ್ಕೆಯಾದ ಸಂದರ್ಭದಲ್ಲಿ ಅನೇಕ ಯುಗಪುರುಷರು ಜನ್ಮ ತಾಳಿದ್ದಾರೆ.
ಅಂತವರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಒಬ್ಬರಾಗಿ ತಮ್ಮದೆಯಾದ ರೀತಿಯಲ್ಲಿ ಸಮಾಜದಲ್ಲಿನ ದುಷ್ಟ ಪದ್ದತಿಗಳನ್ನು ಹೋಗಲಾಡಿಸಿ ಜನತೆಯನ್ನು ಉದ್ದರಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಸಮಾಜದಲ್ಲಿ ಸುಧಾರಣೆ ತರಲು ಯತ್ನಿಸಿ, ಹಿಂದೂ ಧರ್ಮ ಸಂಸ್ಕೃತಿಗಳನ್ನು ಸಂರಕ್ಷಿಸಿ ಕೆಳ ವರ್ಗದವರನ್ನು ಮೇಲೆತ್ತಿದ ಮಾಹನಸಂತ ಶ್ರೀ ನಾರಾಯಣ ಗುರುಗಳು ಎಂದರು.
ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜೀರೋಳ್ಳಿ ಮಾತನಾಡಿ, ಎಲ್ಲರಲ್ಲೂ ಮಾನವೀಯತೆಯ ಸದಾಶಯವನ್ನು ಬೆಳೆಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು,
ಶ್ರೀ ನಾರಾಯಣ ಗುರು ಯಾವುದೆ ಪ್ರತ್ಯೇಕ ಧರ್ಮಕ್ಕೆ ಮಾತ್ರ ಸೀಮಿತವಾದ ಯುಗ ಪುರುಷರಾಗದೆ ಎಲ್ಲಾ ಜಾತಿ, ಧರ್ಮದ ನಾಯಕರಾಗಿದ್ದರು. ಎಲ್ಲರ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದರು ಎಂದರು.
ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಆರ್ಯ ಈಡಿಗ ಸಮಾಜದ ಅಧ್ಯಕ್ಷ ಸುನಿಲ ಗುತ್ತೆದಾರ, ಮುಖಂಡರಾದ ಶರಣಗೌಡ ಚಾಮನೂರ, ಅರ್ಜುನ ಕಾಳೆಕರ, ಹರಿ ಗಲಾಂಡೆ, ಶಿವಶಂಕರ ಕಾಶೆಟ್ಟಿ, ಮಲ್ಲಿಕಾರ್ಜುನ ಸಾತಖೇಡ, ಅಯ್ಯಣ್ಣ ದಂಡೋತಿ, ಶ್ರೀಕಾಂತ ಪಂಚಾಳ, ಸಂತೋಷ
ಗುತ್ತೇದಾರ, ಅಶೋಕ ಗುತ್ತೇದಾರ, ದೀಪಿಕಾ ಗುತ್ತೇದಾರ, ಮಹೇಶ ಗುತ್ತೇದಾರ ಸೇರಿದಂತೆ ಅನೇಕರು ಇದ್ದರು.