ಸಾಮಾಜಿಕ ಸುಧಾರಣೆಗೆ ಅಲ್ಲಮಪ್ರಭುಗಳ ಕೊಡುಗೆ ಅನನ್ಯ

ಕಲಬುರಗಿ: ಸಾಮಾಜಿಕ ಸಮಾನತೆಯ ನಿರ್ಮಾಣಕ್ಕೆ ಶ್ರಮಿಸಿದ ಶರಣ ಅಲ್ಲಮಪ್ರಭು ಅವರ ಕೊಡುಗೆ ಅನನ್ಯ ಎಂದು ಶರಣ ಚಿಂತಕ ಡಾ.ರಾಜಶೇಖರ ಪಾಟೀಲ ಹೆಬಳಿ ಅಭಿಪ್ರಾಯಪಟ್ಟರು. ನಗರದ ಡಬರಾಬಾದ ಕ್ರಾಸ್ ಸಮೀಪದ ಪ್ರಭುದೇವ ನಗರದ ಬಡಾವಣೆ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಶರಣ ಅಲ್ಲಮಪ್ರಭು ದೇವರ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿಯೂ ಕೂಡಾ ಕಂಡು ಬರುತ್ತಿರುವ ಜಾತಿಯತೆ, ಮೂಢನಂಬಿಕೆ, ಕಂದಾಚಾರ, ಅಂಧಶೃದ್ಧೆ ಮುಂತಾದ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗೆ ಬಸವಣ್ಣನವರ ಜೊತೆಗೂಡಿ 950 ವರ್ಷಗಳ […]

Continue Reading

ಜೀವನದ ಸಾರ ಸಂದೇಶದ ಭಾರತೀಯರ ಹೊಸ ವರ್ಷ ಯುಗಾದಿ

ಕಲಬುರಗಿ: ಬೇವು-ಬೆಲ್ಲ ಸವಿಯುವ ವಿಶೇಷತೆಯ ಯುಗಾದಿ ಹಬ್ಬವು ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಮಭಾವದ ಮೇರು ಸಂದೇಶ ಹೊಂದಿದೆ. ಪ್ರತಿಯೊಬ್ಬರು ಪ್ರಯತ್ನಶೀಲರಾಗಿದ್ದರೆ ಉನ್ನತ ಸಾಧನೆ ಮಾಡಲು ಸಾಧ್ಯ, ಕಷ್ಟಗಳನ್ನು ಮೆಟ್ಟಿನಿಲ್ಲಬೇಕು ಎಂಬ ಜೀವನದ ಸಾರ ಸಂದೇಶ ಸಾರುವ ಭಾರತೀಯರ ಹೊಸ ವರ್ಷ ಯುಗಾದಿಯಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಮತಪಟ್ಟರು. ನಗರದ ಡಬರಾಬಾದ ಕ್ರಾಸ್ ಸಮೀಪದ ಪ್ರಭುದೇವ ನಗರದ ಬಡಾವಣೆ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಹೊಸ ವರ್ಷ […]

Continue Reading

ಅಳ್ಳೊಳ್ಳಿ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಅಮಾನತು

ಚಿತ್ತಾಪುರ: ಕರ್ತವ್ಯ ಪಾಲನೆ ಮಾಡುವಲ್ಲಿ ನಿರ್ಲಕ್ಷತನ, ಬೇಜವಾಬ್ದಾರಿತನ ಕಂಡುಬಂದಿರುವ ಪ್ರಯುಕ್ತ ಅಳ್ಳೊಳ್ಳಿ ಗ್ರಾಮ ಪಂಚಾಯತ ಪ್ರಭಾರಿ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್’ಸಿಂಗ್ ಮೀನಾ ಆದೇಶಿಸಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮದಡಿ ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರ ಅವರು ಅರ್ಜಿ ಸಲ್ಲಿಸಿ ಮಾಹಿತಿ ಕೇಳಿರುವ ಪ್ರಯುಕ್ತ ಅಳ್ಳೊಳ್ಳಿ ಪ್ರಭಾರಿ ಪಿಡಿಒ ದೇವಿಂದ್ರಪ್ಪ ಭಾಲ್ಕಿ ಅವರು ಕರೆ ಮಾಡಿ, ಬ್ಲಾಕಮೇಲ್ ಮಾಡಲು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಹಾಕಿದ್ದಿ, ನಿನ್ನನ್ನು ಪೋಲಿಸ್ ಕೇಸ್ ಮಾಡಿ […]

Continue Reading

ಬರೋಬ್ಬರಿ 1.15 ಲಕ್ಷಕ್ಕೆ ಕೋಣ ಮಾರಾಟ

ಚಿಕ್ಕೋಡಿ: ಮೇಕೆ, ಎಮ್ಮೆ, ಹಸು ದುಬಾರಿ ಹಣಕ್ಕೆ ಮಾರಾಟವಾಗಿರುವದು ಕೇಳಿರಬಹುದು. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಕೋಣವೊಂದು1.15 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ಸುದ್ದಿ ಮಾಡಿದೆ. ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ರಾಯಪ್ಪ ಚೌಗಲಾ ಎಂಬುವವರು ಸಾಕಿದ್ದ ಎರಡು ವರ್ಷದ ಕೋಣ ಬರೋಬ್ಬರಿ 1.15 ಲಕ್ಷ ರೂ.ಗೆ ಮಾರಾಟವಾಗಿದೆ. ಅಂದಾಜು 8.50 ಕ್ವಿಂಟಾಲ್ ತೂಕ ಹೊಂದಿರುವ ಕೋಣ ಸಂತಾನೋತ್ಪತ್ತಿಗೆ ಹೆಸರು ಮಾಡಿದೆ. ಕೋಣಕ್ಕೆ ದಿನನಿತ್ಯ 400 ರಿಂದ 500 ರೂ ಖರ್ಚು ಮಾಡುತ್ತಿದ್ದರು. ಇವರಿಗೆ ಕೋಣದ ಮೇಲೆ ಬಹಳ […]

Continue Reading

ಹೊಸತನ್ನು ಹೊತ್ತು ಮತ್ತೆ ಯುಗಾದಿ ಬಂದಿದೆ, ನಿಮ್ಮ ಆತ್ಮೀಯರಿಗೆ ಈ ರೀತಿ ಶುಭಾಶಯ ಕೋರಿ

ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿಯಿಂದ ಹೊಸ ವರ್ಷ ಪ್ರಾರಂಭವಾಗುವುದು, ಹೊಸತನ್ನು ಹೊತ್ತು ಯುಗಾದಿ ಬರುತ್ತಿದೆ. ಈ ಯುಗಾದಿಯನ್ನು ಬೇವು ಬೆಲ್ಲ ಹಾಗೂ ಸಿಹಿಯೊಂದಿಗೆ ಆಚರಿಸುತ್ತಾರೆ. ಈಗಾಗಲೇ ಹಬ್ಬಕ್ಕೆ ವಿವಿಧ ಸಿಹಿತಿಂಡಿಗಳು.ತಯಾರಾಗಿರುತ್ತವೆ. ಬದುಕಿನಲ್ಲಿ ಸಿಹಿ ಕಹಿ ಎರಡೂ ಇರುತ್ತದೆ, ಸಮನಾಗಿ ಸ್ವೀಕರಿಸಬೇಕು ಎನ್ನುವ ಸಂದೇಶ ಸಾರುವ ಯುಗಾದಿ ಹಬ್ಬಕ್ಕೆ ನಿಮ್ಮ ಸ್ನೇಹಿತರು, ಆತ್ಮೀಯರು ಹಾಗೂ ಪ್ರೀತಿಪಾತ್ರರಿಗೆ ಕೆಲವು ಅರ್ಥಪೂರ್ಣ ಸಂದೇಶಗಳನ್ನು ಕಳುಹಿಸುವ ಮೂಲಕ ಶುಭಾಶಯ ಕೋರಬಹುದು. ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು

Continue Reading

ಯುಗಾದಿ ವಿಶೇಷ: ಆರೋಗ್ಯಕರ ಪಚಡಿ ರೆಸಿಪಿ

ಭಾರತದಾದ್ಯಂತ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಯುಗಾದಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಆಪ್ತರಿಗೆ ಬೇವು ಬೆಲ್ಲ ಹಂಚುವ ಮೂಲಕ ಜೀವನದಲ್ಲಿ ಸಿಹಿ – ಕಹಿ ಎರಡು ಸಮಾನವಾಗಿ ಸ್ವೀಕರಿಸಿ ಎಂದು ಸಾರುವ ಹಬ್ಬ ಇದಾಗಿದೆ. ಯುಗಾದಿಯಂದು ವಿವಿಧ ಬಗೆಯ ಪಾಯಸ, ಒಬ್ಬಟ್ಟು ಬಗೆ ಬಗೆಯ ಅಡುಗೆಯ ಜೊತೆಗೆ ಪಚಡಿ ಎಂಬ ವಿಶೇಷ ರೆಸಿಪಿ ತಯಾರಿಸಲಾಗುತ್ತದೆ. ಆಂಧ್ರ ಪ್ರದೇಶದಲ್ಲಿ ಇದನ್ನು ಹೆಚ್ಚು ತಯಾರಿಸುತ್ತಾರಾದರೂ ಕರ್ನಾಟಕ ಕೆಲವು ಭಾಗದಲ್ಲಿ ಯುಗಾದಿಗೆ ಪಚಡಿ ತಯಾರಿಸುವ ಕ್ರಮವಿದೆ. ಪಚಡಿ ಎಂದರೇನು ?ಪಚಡಿ […]

Continue Reading

ಸಮಾಜಕ್ಕೆ ಸಿದ್ದಮುನಿಂದ್ರ ಶಿವಯೋಗಿಗಳ ಕೊಡುಗೆ ಅಪಾರ

ಚಿತ್ತಾಪುರ: ಮಠ ಕಟ್ಟದೆ, ಭಕ್ತರ ಮನಸ್ಸನ್ನು ಕಟ್ಟಿರುವ ಪವಾಡ ಪುರುಷ, ನಡೆದಾಡುವ ದೇವರು, ಸದಾ ಸಮಾಜಪರ ಕಾಳಜಿ ಹೊಂದಿದ್ದ ಸಿದ್ದಮುನಿಂದ್ರ ಶಿವಯೋಗಿಗಗಳ ಕೊಡುಗೆ ಅಪಾರ ಎಂದು ಕಲಬುರಗಿಯ ಚವದಾಪುರಿ ಹಿರೇಮಠದ ಡಾ.ರಾಜಶೇಖರ ಶಿವಾಚಾರ್ಯರು ಹೇಳಿದರು. ತಾಲೂಕಿನ ಬೆಳಗುಂಪಾ ಪರ್ವತೇಶ್ವರ ಮಠದಲ್ಲಿ ಶುಕ್ರವಾರ ಸಂಜೆ ಜರುಗಿದ ಮಠದ ಪೂಜ್ಯ ಸಿದ್ದಮುನಿಂದ್ರ ಶಿವಯೋಗಿಗಳ ದ್ವಿತೀಯ ವರ್ಷದ ಲಿಂಗೈಕ್ಯ ಸ್ಮರಣೋತ್ಸವ ಹಾಗೂ ತನಾರತಿ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಧ್ಯಾನದಿಂದ ಮನಸ್ಸು ಶುದ್ಧಿ, ದಾನದಿಂದ ಸಮಾಜ ಶುದ್ದಿಯಾಗುತ್ತದೆ. ಸಮಾಜದಲ್ಲಿ ಗುರುವಿನ […]

Continue Reading

ಒಳ ಮೀಸಲಾತಿ ಜಾರಿ‌ ಮಾಡಲು ಮತ್ತೆ ಸಮೀಕ್ಷೆ ಯಾಕೆ ಬೇಕು: ದೀಪಕ್ ಹೊಸ್ಸೂರಕರ್

ಚಿತ್ತಾಪುರ: ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮಹಂದಾಸ್ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿರುವ ಮಧ್ಯಂತರ ವರದಿ ಮೀಸಲಾತಿ ವರ್ಗೀಕರಣದ ಕುರಿತು ಎಲ್ಲೂ ಹೇಳಿಲ್ಲಲ ಮೊದಲಿಗೆ ಆದಿ ಕರ್ನಾಟಕ (ಎ.ಕೆ) ಆದಿ ದ್ರಾವಿಡ(ಎ.ಡಿ) ಜಾತಿಗಳಲ್ಲಿ ಗೊಂದಲವಿರುವುದರಿಂದ ಮತ್ತೊಂದು ಸಮೀಕ್ಷೆ ಮಾಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಸರ್ಕಾರ ಶಿಫಾರಸು ಮಾಡಿದೆ ಸಮೀಕ್ಷೆ ವಿವರಗಳು ಮತ್ತು ನಿರ್ವಹಣೆ ಮಾಡಲು ಸಮಿತಿ ರಚಿಸಬೇಕು ಎಂದು ಹೇಳಿರುವುದು ಸರಿಯಲ್ಲ ಎಂದು ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೀಪಕ್ ಹೊಸ್ಸೂರಕರ್ ತಿಳಿಸಿದ್ದಾರೆ. […]

Continue Reading

ದೂರಿಗೆ ಸ್ಪಂಧಿಸದ ಅಧಿಕಾರಿಗಳು: ಮಾನಸಿಕ ಆಘಾತದಿಂದ ವರದಿಗಾರ ಆಸ್ಪತ್ರೆ ಪಾಲು

ಚಿತ್ತಾಪುರ: ಮಾ.5 ರಂದು ತಾಲೂಕಿನ ಆಲಹಳ್ಳಿ ಗ್ರಾ‌.ಪಂ ಅಭಿವೃದ್ಧಿ ಅಧಿಕಾರಿ ದೇವಿಂದ್ರಪ್ಪ ಭಾಲ್ಕೆ ಅವರು ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರು ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ ಪ್ರಕರಣವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೆ ಇರುವದು ನಾಗಯ್ಯ ಸ್ವಾಮಿ ಅವರ ಆರೋಗ್ಯ ಹದಗೆಡಲು ಪ್ರಮುಖ ಕಾರಣ ಎಂದು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜ್‌ ಎಸ್ ಮಲ್ಕಂಡಿ ಆರೋಪಿಸಿದ್ದಾರೆ ಮಾ.6 ರಂದು ದೂರು ನೀಡಿದರೂ ಸ್ಪಂದನೆ ಮಾಡದ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಗಯ್ಯ ಸ್ವಾಮಿ ಅವರು ತೀವ್ರ ಮಾನಸಿಕ ಒತ್ತಡಕ್ಕೊಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ […]

Continue Reading

ಸಮಾಜಕ್ಕೆ ಹೃದಯವಂತರ ಅವಶ್ಯಕತೆಯಿದೆ: ಹಾರಕೂಡ ಶ್ರೀ

ಕಲಬುರಗಿ: ಸಮಾಜದಲ್ಲಿ ಜ್ಞಾನವಂತ, ಬುದ್ದಿವಂತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮಾತು ಮತ್ತು ಕೃತಿಯಲ್ಲಿ ಒಂದಾಗಿರುವ, ಸಮಾಜದಲ್ಲಿರುವ ಬಡವರು, ಅಸಹಾಯಕರ ಕಣ್ಣೀರು ಒರೆಸುವ, ಸಹಾಯ ಹಸ್ತ ಚಾಚುವ, ಜಾತಿ-ಧರ್ಮ ಮೀರಿ, ಸರ್ವರನ್ನು ಪ್ರೀತಿಯಿಂದ ಕಾಣುವ, ತಂದೆ-ತಾಯಿ, ಗುರು-ಹಿರಿಯರು, ಜನ್ಮಭೂಮಿ, ಗುರು-ಲಿಂಗ-ಜಂಗಮ ಪ್ರೇಮಿಗಳಾಗಿರುವ ಹೃದಯವಂತ ಜನರು ಪ್ರಸ್ತುತ ಸಮಾಜಕ್ಕೆ ಅವಶ್ಯಕತೆಯಿದೆ, ಅವರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದು ಹಾರಕೂಡ ಮಠದ ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರು ಆಶಯ ವ್ಯಕ್ತಪಡಿಸಿದರು. ಆಳಂದ ತಾಲೂಕಿನ ತಂಬಾಕವಾಡಿಯ ಜಕ್ಕೇಶ್ವರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಜರುಗಿದ ಧರ್ಮಸಭೆ ಉದ್ಘಾಟಿಸಿ ಆಶೀರ್ವಚನ […]

Continue Reading