ಬೆಂಗಳೂರು: ನಿರ್ದೇಶಕ ಎಸ್ ನಾರಾಯಣ್ ಕುಟುಂಬದ ವಿರುದ್ಧ ದಾಖಲಾಗಿರುವ ವರದಕ್ಷಿಣೆ ಪ್ರಕರಣದ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ನೋಟಿಸ್ ನೀಡಿರುವ ಖಾಕಿ ಟೀಂ ಸ್ಪಾಟ್ ಮಹಜರು ನಡೆಸಿದ್ದಾರೆ. ಪವಿತ್ರಾಗೆ ಎಸ್ ನಾರಾಯಣ್ ಅವರ ಎರಡನೇ ಪುತ್ರ ಪವನ್ ಸಿನಿಮಾದ ಆಡಿಷನ್ನಲ್ಲಿ ಪರಿಚಯವಾಗಿದ್ದರು, ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು.
ಒಂದು ವರ್ಷದ ನಂತರ 2022 ರಲ್ಲಿ ಆರ್’ಆರ್ ನಗರದಲ್ಲಿರುವ ಎಸ್ ನಾರಾಯಣ್ ನಿವಾಸದಿಂದ ಹೊರಬಂದು ಸಪ್ರೇಟಾಗಿ ಜೀವನ ಆರಂಭಿಸಿದ್ದರು. ಆಗ ಗಂಡನಿಗೆ ಕಾರು ಕೊಡಿಸಿದ್ದಾರೆ ಮತ್ತು ಬ್ಯಾಂಕ್ ನಿಂದ ಲೋನ್ ಮಾಡಿಸಿಕೊಟ್ಟಿದ್ದರಂತೆ. ಮೂರು ತಿಂಗಳು ಮಾತ್ರ ಇಎಂಐ ಕಟ್ಟಿ ಕೆಲಸವಿಲ್ಲಾ ಎಂದು ಹೇಳಿ ಪವನ್ ಕಿರುಕುಳ ಕೊಡಲು ಶುರುಮಾಡಿದ್ದರು ಎನ್ನಲಾಗಿದೆ.
ಒಂದು ಮಗುವಾದ ಬಳಿಕ ಪವನ್ ಮತ್ತು ಪವಿತ್ರಾ ಅತ್ತೆ, ಮಾವ ಇರುವ ಮನೆಗೆ ವಾಪಸ್ ಬಂದಿದ್ದಾರೆ. ಬಂದ ಬಳಿಕೆ ಅತ್ತೆ ಭಾಗ್ಯವತಿ, ಮಾವ ಎಸ್ ನಾರಾಯಣ್ ಹಣಕ್ಕಾಗಿ ಕಿರುಕುಳ ಕೊಟ್ಟಿದ್ದಾರಂತೆ. ಇದರಿಂದ ಪವಿತ್ರಾ ಗಂಡನ ಮನೆ ಬಿಟ್ಟು ತವರುಮನೆ ಸೇರಿದ್ದಾರಂತೆ. ಇದೀಗ ನೊಂದ ಪವಿತ್ರಾ ಜ್ಞಾನಭಾರತಿ ಠಾಣೆಯಲ್ಲಿ ವರದಕ್ಷಿಣೆ ಮತ್ತು ಕಿರುಕುಳ ನೀಡಿದ ಪ್ರಕರಣ ದಾಖಲಿಸಿದ್ದರು. ಇನ್ನೂ ನಾರಾಯಣ್ ಮನೆ ಆರ್’ಆರ್ ನಗರದಲ್ಲಿರುವ ಕಾರಣ ಕೇಸ್ ಅಲ್ಲಿಗೆ ಟ್ರಾನ್ಸ್ಪಾರ್ ಮಾಡಿದ್ದು, ಪೋಲಿಸರು ಪವಿತ್ರಾ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು, ಸ್ಪಾಟ್ ಮಹಜರು ಮಾಡಿದ್ದಾರೆ.ಅಲ್ಲದೆ ಮೂವರಿಗು ನೋಟೀಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಎಸ್ ನಾರಾಯಣ್ ಕುಟುಂಬದ ಆರೋಪ ಬೇರೆಯಾಗಿದೆ, ಮದುವೆಯಾದ ದಿನದಿಂದ ಪವಿತ್ರಾ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ. ತಮಗೆ ಮಾರ್ಯಾದೆ ಕೊಡುತ್ತಿರಲಿಲ್ಲ. ಆಕೆಯದ್ದೆ ತಪ್ಪು ಎಂದಿದ್ದಾರೆ.
ಗಂಡನ ಮನೆಬಿಟ್ಟು ಹೋದ 14 ತಿಂಗಳ ನಂತರ ಈಗ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದು ಯಾಕೆ ? ಎಸ್ ನಾರಾಯಣ್ ಅವರ ಕುಟುಂಬ ಹಣಕ್ಕಾಗಿ ಕಿರುಕುಳ ಕೊಟ್ಟಿದ್ದು ನಿಜಾನಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ಯಾವ ಹಂತಕ್ಕೆ ತಲುಪುವುದು ಎಂಬುದು ಕಾದು ನೋಡಬೇಕಿದೆ.