ಟೇಕ್ ಆಫ್ ವೇಳೆ ಉರುಳಿದ ಚಕ್ರ: ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ವಿಮಾನ ತುರ್ತು ಭೂಸ್ಪರ್ಶ

ರಾಷ್ಟೀಯ

ಮುಂಬೈ: ಮುಂಬೈನಲ್ಲಿ ಸ್ಪೈಸ್ ಜೆಟ್ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.

ಗುಜರಾತ್‌ನ ಕಾಂಡ್ಲಾದಿಂದ ಬಂದಿದ್ದ ಸ್ಪೈಸ್‌ಜೆಟ್ ವಿಮಾನದ ಟೇಕಾಫ್​ ವೇಳೆ ಹೊರಚಕ್ರ ಕೆಳಗೆ ಬಿದ್ದ ಹಿನ್ನೆಲೆಯಲ್ಲಿ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಈ ಘಟನೆಯಲ್ಲಿ ಯಾವುದೆ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ.

ಈ ವಿಮಾನವು ಕಾಂಡ್ಲಾ ವಿಮಾನ ನಿಲ್ದಾಣದಿಂದ ಹೊರಟು ಮುಂಬೈಗೆ ತೆರಳುತ್ತಿತ್ತು. ವಿಮಾನದ ಆರಂಭಿಕ ಹಂತದ ರನ್‌ವೇಯಲ್ಲಿ ಹೊರ ಚಕ್ರ ಪತ್ತೆಯಾಗಿತ್ತು. ನಂತರ ಆ ಚಕ್ರ ಉರುಳಿ ಬಿದ್ದಿತ್ತು.

Leave a Reply

Your email address will not be published. Required fields are marked *