ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ: ದಿಗ್ಗಾಂವ ಶ್ರೀ

ಚಿತ್ತಾಪುರ: ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರು ಹೀಗಾಗಿ ಮಕ್ಕಳಿಗೆ ಬಾಲ್ಯದಿಂದಲೆ ಸಂಸ್ಕಾರ, ಪರಂಪರೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು. ಸಂಸ್ಕಾರ ಎಂಬ ಆಹಾರ ನೀಡಿ ಬೆಳೆಯುವಂತೆ ಮಾಡಬೇಕು ಎಂದು ದಿಗ್ಗಾಂವ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯರು ಹೇಳಿದರು. ತಾಲೂಕಿನ ಸನ್ನತಿ ಗ್ರಾಮದಲ್ಲಿ ಶ್ರೀ ಗುರು ಸೋಮೇಶ್ವರ ವೈದಿಕ ಜ್ಯೋತಿ ಗುರುಕುಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಂಗಮ ವಟುಗಳಿಗೆ ಬೇಸಿಗೆ ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರದ […]

Continue Reading

ವಿಶ್ವದ ಪ್ರಥಮ ಸ್ತ್ರೀವಾದಿ ಚಿಂತಕಿ ಅಕ್ಕಮಹಾದೇವಿ

ಕಲಬುರಗಿ: ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನೈಜ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖವನ್ನು ತ್ಯಜಿಸಿ, ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಅಕ್ಕಮಹಾದೇವಿಯವರು ವಿಶ್ವದ ಪ್ರಥಮ ಸ್ತ್ರೀವಾದಿ ಚಿಂತಕರಾಗಿದ್ದಾರೆ ಎಂದು ಶರಣ ಚಿಂತಕಿ ಜಯಶ್ರೀ ಎಚ್ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಶನಿವಾರ ಬಸವೇಶ್ವರ ಸಮಾಜ ಸೇವಾ ಬಳಗದ ಐತಿಹಾಸಿಕ, ಸಾರ್ವಕಾಲಿಕ ವಿಶ್ವ ದಾಖಲೆಯ 5000ನೇ ಕಾರ್ಯಕ್ರಮವಾದ ‘ವೈರಾಗ್ಯ […]

Continue Reading

ವಾಟ್ಸಪ್‌ ಫೋಟೋ ಡೌನ್‌ಲೋಡ್‌ ಮಾಡುವ ಮುನ್ನ ಎಚ್ಚರವಾಗಿರಿ: ಫೋನ್‌ ಹ್ಯಾಕ್‌ ಆಗಬಹುದು

ನವದೆಹಲಿ: ವಾಟ್ಸಪ್‌ನಲ್ಲಿ ಬರುವ ಎಲ್ಲಾ ಚಿತ್ರಗಳನ್ನು ಡೌನ್‌ಲೋಡ್‌ ಮಾಡುವ ಮುನ್ನ ಎಚ್ಚರವಾಗಿರಿ. ಡೌನ್‌ಲೋಡ್‌ ಆದ ಚಿತ್ರದಿಂದಲೇ ನಿಮ್ಮ ಫೋನ್‌ ಹ್ಯಾಕ್‌ ಆಗುವ ಸಾಧ್ಯತೆಯಿದೆ. ಇಲ್ಲಿಯವರೆಗೆ ಲಿಂಕ್‌, ಇತ್ಯಾದಿಗಳನ್ನು ಕಳುಹಿಸಿ ಸೈಬರ್‌ ಕಳ್ಳರು ಫೋನ್‌ ಹ್ಯಾಕ್‌ ಮಾಡುತ್ತಿದ್ದರು. ಆದರೆ ತಂತ್ರಜ್ಞಾನ ಮುಂದುವರಿದಂತೆ ಫೋಟೋವನ್ನು ಕಳುಹಿಸಿ ಹ್ಯಾಕ್‌ ಮಾಡುತ್ತಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. ಹ್ಯಾಕರ್‌ಗಳು ಒಂದು ಫೋಟೋವನ್ನು ಸೃಷ್ಟಿಸಿ ಅದರಲ್ಲಿ ಮಾಲ್ವೇರ್‌ (ಕುತಂತ್ರಾಂಶ) ತುರುಕಿಸಿ ಕಳುಹಿಸುತ್ತಾರೆ. ಈ ಫೋಟೋವನ್ನು ವಾಟ್ಸಪ್‌ನಲ್ಲಿ ಯಾರೆಲ್ಲ ಡೌನ್‌ಲೋಡ್‌ ಮಾಡುತ್ತಾರೋ ಅವರ ಫೋನ್‌ ಹ್ಯಾಕ್‌ […]

Continue Reading

ರಾವೂರ: ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ

ಕಲಬುರಗಿ: ಶಹಾಬಾದ ತಾಲೂಕಿನ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವವು ಇಂದು ಹೇಮರೆಡ್ಡಿ ಮಲ್ಲಮ್ಮ ಪುರಾಣದೊಂದಿಗೆ ಪ್ರಾರಂಭವಾಗಲಿದೆ ಎಂದು ಶ್ರೀಮಠದ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಹೇಳಿದರು. ಏಪ್ರಿಲ್ 12 ರಿಂದ 20ರ ವರೆಗೆ ಪ್ರತಿದಿನ ಸಂಜೆ 7.30ಕ್ಕೆ ಯೋಗಿರಾಜ್ ಖಾನಾಪುರ ಅವರಿಂದ ಪುರಾಣ ನಡೆಯಲಿದೆ. ಶ್ರೀಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಪ್ರತಿದಿನ ನಾಡಿನ ವಿವಿಧ ಪೂಜ್ಯರು, ಗಣ್ಯರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಏಪ್ರಿಲ್ 17 ರಂದು ಪ್ರತಿಭಾ ಪುರಸ್ಕಾರ, 18 ರಂದು ಮುತೈದೆಯರಿಗೆ ಉಡಿ […]

Continue Reading

ಮನೆಯ ಹಿಂಬಾಗಿಲ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳ್ಳತನ

ಮೈಸೂರು: ಮನೆಯ ಹಿಂಬಾಗಿಲ ಬೀಗ ಮುರಿದು ಸುಮಾರು 22 ಲಕ್ಷ ರೂ ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳ್ಳತನ ಮಾಡಿರುವ ಘಟನೆ ಮೈಸೂರು ತಾಲೂಕಿನ ನಾಗವಾಲದಲ್ಲಿ ನಡೆದಿದೆ. ನಾಗವಾಲದ ನಿವಾಸಿ ರೇಣುಕಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯವರು ಮಹದೇಶ್ವರ ಬೆಟ್ಟಕ್ಕೆ ಹೋಗಿರುವ ವೇಳೆ ಹಿಂಬಾಗಿಲ ಬೀಗ ಮುರಿದು ಕಳ್ಳತನ ಮಾಡಲಾಗಿದೆ. 3,26,700 ರೂ ನಗದು, 276 ಗ್ರಾಂ ಚಿನ್ನ, 1,350 ಗ್ರಾಂ ಬೆಳ್ಳಿ ಸೇರಿ ಸುಮಾರು 22 ಲಕ್ಷ ಮೌಲ್ಯದ ವಸ್ತುಗಳನ್ನು ಖದೀಮರು ದೋಚಿದ್ದಾರೆ. ಸದ್ಯ […]

Continue Reading

ತಾಯಂದಿರು ಆರೋಗ್ಯ ಕಾಪಾಡಿಕೊಂಡರೆ ಸುರಕ್ಷಿತ ಮಾತೃತ್ವ ಸಾಧ್ಯ

ಕಲಬುರಗಿ: ಆರೋಗ್ಯವಂತ ಮಗು ಪಡೆಯಬೇಕಾದರೆ, ಸದೃಢ, ಆರೋಗ್ಯಯುತ ತಾಯಂದಿರಿರಬೇಕು. ಸಾಮಾನ್ಯವಾಗಿ ತಾಯಂದಿರು ರಕ್ತಹೀನತೆ ಸಮಸ್ಯೆ ಎದುರಿಸುತ್ತಾರೆ. ಶುದ್ದವಾದ ಕುಡಿಯುವ ನೀರಿನ ಸೇವನೆ, ದಿನಕ್ಕೆ 7-8ರಿಂದ ಗಂಟೆಗಳ ಕಾಲ ಗಾಡ ನಿದ್ರೆ, ವ್ಯಾಯಾಮ, ಯೋಗ, ಧನಾತ್ಮಕ ಚಿಂತನೆ, ಎಣ್ಣೆಯಲ್ಲಿ ಹುರಿದ, ಕರಿದ ಮಸಾಲೆಯುಕ್ತ, ಹೆಚ್ಚು ಹುಳಿ, ಖಾರ, ಉಪ್ಪು ಇರುವ ಆಹಾರ ಸೇವನೆ ಮಾಡದಿರುವ ಮತ್ತಿತರ ಆರೋಗ್ಯಕರ ಕ್ರಮಗಳನ್ನು ಪಾಲಿಸುವ ಮೂಲಕ ತಾಯಂದಿರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡರೆ ಸುರಕ್ಷಿತ ಮಾತೃತ್ವ ಸಾಧ್ಯವಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು. […]

Continue Reading

ಶ್ರೇಷ್ಠ ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ

ಕಲಬುರಗಿ: ಮಹಿಳಾ ಶಿಕ್ಷಣಕ್ಕೆ ಪ್ರಯತ್ನ, ಸ್ತಿçÃ-ಪುರುಷರ ನಡುವಿನ ಅಸಮಾನತೆ ನಿರ್ಮೂಲನೆ, ಜಾತಿ, ಧರ್ಮದ ಹೆಸರಿನ ಮೇಲೆ ನಡೆಯುತ್ತಿದ್ದ ವ್ಯಾಪಕ ಶೋಷಣೆ, ಮೌಢ್ಯತೆ, ಅಂಧಶೃದ್ಧೆ, ಅಸ್ಪೃಷ್ಯತೆ ಹೋಗಲಾಡಿಸಲು ನಿರಂತರವಾಗಿ ಇಡೀ ಜೀವನದುದ್ದಕ್ಕೂ ಹೋರಾಟ ಮಾಡಿದ ಮಹಾತ್ಮ ಜ್ಯೋತಿಬಾ ಫುಲೆಯವರು ಶ್ರೇಷ್ಠ ಸಮಜ ಸುಧಾರಕರಾಗಿದ್ದರು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಮತಪಟ್ಟರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿಯ ಕರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ಮಹಾತ್ಮ […]

Continue Reading

ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಮುಂಜಾಗೃತೆ ವಹಿಸುವುದು ಅಗತ್ಯ

ಕಲಬುರಗಿ: ಕೇಂದ್ರ ನರಮಂಡಲದ ಮೇಲೆ ದುಷ್ಪರಿಣಾಮ ಬೀರುವ ಮೂಲಕ ಮೆದಳು, ದೇಹದ ಚಲನೆಗೆ ತೊಂದರೆ ಉಂಟು ಮಾಡುತ್ತದೆ. ಕೈಕಾಲು ಜೋಮು ಹಿಡಿಯುವುದು, ನಿಲ್ಲಲು ಹಾಗೂ ನಡೆಯಲು ಆಯಾಸವಾಗುವದು, ನಿದ್ರಾಹೀನತೆ, ಮಾತಿನಲ್ಲಿ ಬದಲಾವಣೆ, ಮೂಗಿನ ಕಾರ್ಯದಲ್ಲಿ ತೊಂದರೆ, ಮೂತ್ರ ಸೋರುವಿಕೆಯಂತಹ ಲಕ್ಷಣಗಳು ಪಾರ್ಕಿನ್ಸನ್ ಕಾಯಿಲೆಯದಾಗಿದೆ, ಇದರ ಬಗ್ಗೆ ಮುಂಜಾಗೃತೆ ವಹಿಸುವುದು ಅಗತ್ಯ ಎಂದು ಹಿರಿಯ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಸಲಹೆ ನೀಡಿದರು. ನಗರದ ಆಳಂದ ರಸ್ತೆಯ, ಸಂತೋಷ ಕಾಲೋನಿ ಕ್ರಾಸ್ ಸಮೀಪದ ಬಸವಗಂಗಾ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ […]

Continue Reading

ಸ್ವಾತಂತ್ರ್ಯ ಹೋರಾಟದ ಮಹಿಳಾ ಸೇನಾನಿ ಕಸ್ತೂರಬಾ ಗಾಂಧೀಜಿ

ಕಲಬುರಗಿ: ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ ಹೋರಾಟಕ್ಕೆ ಸಂಪೂರ್ಣವಾಗಿ ಕೈಜೋಡಿಸುವ ಮೂಲಕ ತಮ್ಮದೆಯಾದ ಅಮೂಲ್ಯ ಸೇವೆ ಸಲ್ಲಿಸಿದ ಸ್ವಾತಂತ್ರ್ಯ ಹೋರಾಟದ ವೀರ ಮಹಿಳೆಯಾಗಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ, ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ಕಸ್ತೂರಬಾ ಗಾಂಧೀಜಿಯವರ 156ನೇ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಸ್ತೂರಬಾ ಅವರು ರಾಷ್ಟ್ರಪತಿ ಗಾಂಧೀಜಿವರ ಪತ್ನಿ ಮಾತ್ರವಲ್ಲದೆ ಸ್ವಾತಂತ್ರ್ಯ ಆಂದೋಲದಲ್ಲಿ […]

Continue Reading

ಹೈಕೋರ್ಟ್‌ನಲ್ಲಿ ಜನ್ಮದಿನದ ಮೋಜು-ಮಸ್ತಿ: ಎ.ಟಿ ಮೀನಾ ಸೇರಿ ಐವರ ಅಮಾನತು

ಬೆಂಗಳೂರು: ಹೈಕೋರ್ಟ್‌ನ ನೆಲಮಾಳಿಗೆಯ ಲೋಕೋಪಯೋಗಿ ವಿಶೇಷ ಕಟ್ಟಡಗಳ ಉಪ ವಿಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿಸಿ ಜನ್ಮದಿನ ಆಚರಿಸಿಕೊಂಡು ಮೋಜು-ಮಸ್ತಿ ಮಾಡಿದ ಆರೋಪದಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಎ.ಟಿ ಮೀನಾ ಸೇರಿದಂತೆ ಒಟ್ಟು ಐವರನ್ನು ಸೇವೆಯಿಂದ ಅಮಾನತುಗೊಳಿಸಿ ಲೋಕೋಪಯೋಗಿ ಇಲಾಖೆ ಆದೇಶಿಸಿದೆ. ದೂರಿನ ಕುರಿತು ವಿಚಾರಣೆ: ಶಿವಮೊಗ್ಗದ ಸಂಪರ್ಕ ಮತ್ತು ಕಟ್ಟಡ ವಿಭಾಗದ ಇಲಾಖಾ ಮುಖ್ಯ ಎಂಜಿನಿಯರ್ ಸಲ್ಲಿಸಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. 22 ಫೆಬ್ರುವರಿ 2025 ರಂದು ಜನ್ಮದಿನ ಆಚರಿಸಿಕೊಂಡಿರುವ ಎ.ಟಿ […]

Continue Reading