ಚಿತ್ತಾಪುರ: ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರು ಹೀಗಾಗಿ ಮಕ್ಕಳಿಗೆ ಬಾಲ್ಯದಿಂದಲೆ ಸಂಸ್ಕಾರ, ಪರಂಪರೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು. ಸಂಸ್ಕಾರ ಎಂಬ ಆಹಾರ ನೀಡಿ ಬೆಳೆಯುವಂತೆ ಮಾಡಬೇಕು ಎಂದು ದಿಗ್ಗಾಂವ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಸನ್ನತಿ ಗ್ರಾಮದಲ್ಲಿ ಶ್ರೀ ಗುರು ಸೋಮೇಶ್ವರ ವೈದಿಕ ಜ್ಯೋತಿ ಗುರುಕುಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಂಗಮ ವಟುಗಳಿಗೆ ಬೇಸಿಗೆ ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರದ ಬಗ್ಗೆ ತಿಳಿಸಿಕೊಡಲು ಪೌರಾಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿರುವ ಪಾತ್ರಗಳ ಹೆಸರುಗಳೆ ಹಲವಾರು ವಿಷಯಗಳನ್ನು ತಿಳಿಸಿಕೊಡಲು ಸಾಧ್ಯ. ರಾಮ, ಕೃಷ್ಣ, ಗಣೇಶ, ಶಿವ, ವಿಷ್ಣು, ಗಂಗೆ ಹೀಗೆ ಒಂದೊಂದು ಹೆಸರಿನಲ್ಲಿಯೂ ಒಂದು ಪುರಾಣ ಮತ್ತು ಪರಂಪರೆಯಿದೆ. ಹೀಗಾಗಿ ಇವುಗಳನ್ನು ತಿಳಿಸಿಕೊಡುವ ಮೂಲಕ ಸಂಸ್ಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಸಾರಂಗ ಉಪನಿರ್ದೇಶಕ ಡಾ.ಮಲ್ಲಣ್ಣಗೌಡ ಎಸ್, ತಾಲೂಕು ಬೇಡ ಜಂಗಮ ಸಮಾಜದ ಉಪಾಧ್ಯಕ್ಷ ನಾಗಯ್ಯಸ್ವಾಮಿ ಮಾಲಗತ್ತಿ, ಕಿರಿಯ ಸಹಾಯಕ ಸುರೇಶ ಬಿ.ಆರ್, ಸಂಸ್ಥಾನ ಮಠದ ಗಡಿಲಿಂಗಯ್ಯಸ್ವಾಮಿ, ಶಿವಯ್ಯಸ್ವಾಮಿ ಗುಡಿ, ವೇದಮೂರ್ತಿ ರೇವಣಸಿದ್ದಯ್ಯ ಸ್ವಾಮಿ, ವೇದಮೂರ್ತಿ ಗಡಿಲಿಂಗಯ್ಯ ಸ್ವಾಮಿ, ವೇದಶ್ರೀ ಪಂಚಾಕ್ಷರಿ ಸ್ವಾಮಿ, ಪ್ರಮುಖರಾದ ಉಮೇಶಸ್ವಾಮಿ ಹಿರೇಮಠ, ಮಲ್ಲಿನಾಥಗೌಡ ಮಾಲಿಪಾಟೀಲ, ಮಂಜುನಾಥಗೌಡ ಪೊಲೀಸ್ ಪಾಟೀಲ, ಚಂದ್ರಶೇಖರ್ ಅವನೂರ, ಮಾದೇವಪ್ಪ ಅನವಾರ, ವೀರಣ್ಣಯ್ಯ ಸ್ವಾಮಿ, ಮಲ್ಲನಗೌಡ ಮಾಲಿಪಾಟೀಲ್, ಮಲ್ಲನಗೌಡ ಶ್ರೀಮದಿ ಸೋಮು ಪೂಜಾರಿ, ವಿಶ್ವನಾಥ ನಿಂಗನೂರ, ವೇದಶ್ರೀ ಜಗದೀಶ್ವರಸ್ವಾಮಿ ಸಂಸ್ಥಾನ ಮಠ, ವೇದಶ್ರೀ ಅಭಿಷೇಕ್ ಸ್ವಾಮಿ ಸೈದಾಪುರ, ಗ್ರಾಮದ ಹಿರಿಯ ಜಂಗಮ ವಟುಗಳ ತಂದೆ ತಾಯಿ ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮದಲ್ಲಿ ಗುರುಕುಲ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಗಡ್ಡಿಲಿಂಗಯ್ಯ ಸ್ವಾಮಿ ಸ್ವಾಗತಿಸಿದರು, ರೇವಣಸಿದ್ದಯ್ಯ ಶಾಸ್ತ್ರಿ ಸನ್ನತಿ ನಿರೂಪಿಸಿದರು.
.