ಸಂಸ್ಕಾರ ರೂಪಿಸಲು ಧಾರ್ಮಿಕ ಕಾರ್ಯಕ್ರಮ ಅಗತ್ಯ: ಟೆಂಗಳಿ ಶ್ರೀ

ಸುದ್ದಿ ಸಂಗ್ರಹ ಕಾಳಗಿಮನುಷ್ಯತ್ವ, ಸಂಸ್ಕಾರ ರೂಪಿಸಲು ಶಾಲೆಗಳಿಂದ ಸಾಧ್ಯವಿಲ್ಲ, ಧಾರ್ಮಿಕ ಚಟುವಟಿಕೆಗಳು ಸಹ ಸೌಹಾರ್ದತೆ ಮೂಡಿಸಿ ಬಲವಾದ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದು ಟೆಂಗಳಿ- ಮಂಗಲಗಿಯ ಶಾಂತೇಶ್ವರ ಹಿರೇಮಠದ ಧರ್ಮಾಧಿಕಾರಿ ಡಾ.ಶಾಂತಸೋಮನಾಥ ಶಿವಾಚಾರ್ಯರು ಹೇಳಿದರು. ತಾಲೂಕಿನ ಟೆಂಗಳಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಬುಧವಾರ ರಾತ್ರಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯ, ಶ್ರೀ ಶಾಂತವೀರ ಶಿವಾಚಾರ್ಯರ ದರ್ಶನಂ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾತೃ ದೇವೋ ಭವ, ಪಿತೃ ದೇವೋ ಭವ, ಗುರು ದೇವೋ ಭವ, […]

Continue Reading

ಎಟಿಎಂಗೆ ಹಾಕಬೇಕಿದ್ದ ಕೋಟ್ಯಂತರ ರೂ. ಹಣ ಗುಳುಂ: ಸಿಬ್ಬಂದಿ ವಿರುದ್ಧ ಶಂಕೆ

ಸುದ್ದಿ ಸಂಗ್ರಹ ಹಾಸನ ನಗರದ ಎಟಿಎಂಗಳಿಗೆ ಹಾಕಬೇಕಿದ್ದ ಕೋಟಿ ಕೋಟಿ ರೂ. ಹಣವನ್ನು ತಾವೆ ಲಪಟಾಯಿಸಿ ಕಂಪನಿಗೆ ಸುಳ್ಳು ಲೆಕ್ಕ ನೀಡಿರುವ ಗಂಭೀರ ಆರೋಪ ಸಿಎಂಎಸ್ ಕಂಪನಿ ವಿರುದ್ಧ ಕೇಳಿ ಬಂದಿದೆ. ಕಂಪನಿಯ ಸಿಬ್ಬಂದಿ ನಂದೀಶ್ ಹಾಗೂ ಮಧು ಎಂಬವರು ಕೋಟ್ಯಂತರ ರೂ. ಹಣ ನುಂಗಿ ಹಾಕಿದ್ದಾರೆ ಎಂದು ಶಂಕಿಸಲಾಗಿದೆ. ಬೆಂಗಳೂರಿನಿಂದ ಆಗಮಿಸಿರುವ ಕಂಪನಿಯ ಅಧಿಕಾರಿಗಳು ಆಡಿಟ್ ಮಾಡಿಸುತ್ತಿದ್ದಾರೆ. ಹಾಸನ ನಗರದ ಗೌರಿಕೊಪ್ಪಲಿನಲ್ಲಿ ಕ್ಯಾಶ್ ಮ್ಯಾನೆಜ್‍ಮೆಂಟ್ ಸರ್ವಿಸಸ್ ಕಚೇರಿಯಿದ್ದು, ಪ್ರತಿನಿತ್ಯ ನಗರದಲ್ಲಿರುವ ಕೆನರಾ ಬ್ಯಾಂಕ್, ಎಸ್‍ಬಿಐ, ಬ್ಯಾಂಕ್ […]

Continue Reading

ವಾಡಿ: ಬಿಜೆಪಿ ಕಛೇರಿಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ಸುದ್ದಿ ಸಂಗ್ರಹ ವಾಡಿ ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿ ಜೈ ಘೋಷ ಮೊಳಗಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ರಾಜ್ಯಭಾರ ವಹಿಸಿಕೊಂಡು ವೀರ, ಶೂರ, ತ್ಯಾಗಿಯಾಗಿ ವೈರಿಯ ಎದುರು ಶರಣಾಗದ ಸ್ವಾಭಿಮಾನಿಯಾಗಿ ಮೆರೆದವರು ಛತ್ರಪತಿ ಶಿವಾಜಿ ಮಹಾರಾಜರು ಎಂದರು. ಛತ್ರಪತಿ ಶಿವಾಜಿ ಮಹಾರಾಜರು ಉತ್ತಮ ಆಡಳಿತ ಸುಧಾರಣಾ ನೀತಿಗಳನ್ನು ಜಾರಿಗೊಳಿಸುವ ಮೂಲಕ ಶ್ರೇಷ್ಠ ಆಡಳಿತಗಾರರಾಗಿದ್ದರು. […]

Continue Reading

ಕೋರವಾರ: ಅಣಿವೀರಭದ್ರೇಶ್ವರ ಅದ್ಧೂರಿ ರಥೋತ್ಸವ

ಸುದ್ದಿ ಸಂಗ್ರಹ ಕಾಳಗಿಶಿವರಾತ್ರಿ ವೇಳೆ ರಾತ್ರಿಯಲ್ಲೆ ಜರುಗುವ ಐತಿಹಾಸಿಕ ದೇವಾಲಯ ಕೋರವಾರ ಹೊರವಲಯದ ಅಣಿವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ತಡರಾತ್ರಿ ದೇವಸ್ಥಾನದ ಮೈದಾನದಲ್ಲಿ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಹಲಗೆ, ಡೊಳ್ಳು, ಬಾಜಾ ಭಜಂತ್ರಿ, ವಾದ್ಯಮೇಳಗಳ ಝೇಂಕಾರ, ಪುರವಂತರ ಕುಣಿತ, ಮದ್ದು ಸುಡುವ ಆಕರ್ಷಕ ನೋಟದ ಸದ್ದಿನ ನಡುವೆ ಭಕ್ತರು ತೇರು ಎಳೆದು ಸಂಭ್ರಮಿಸಿದರು. ನೆರೆದಿದ್ದ ರಾಜ್ಯ ಹೊರ ರಾಜ್ಯಗಳ ಅಸಂಖ್ಯಾತ ಭಕ್ತರು ಫಲಪುಷ್ಪ, ನಾಣ್ಯ ತೇರಿನ ಮೇಲೆ ತೂರಿ ಜೈಕಾರ ಹಾಕಿ ಕೈಮುಗಿದು ನಮಿಸಿದರು. […]

Continue Reading

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ – ಸರ್ಕಾರದ ಹೇಡಿತನಕ್ಕೆ ಸಾಕ್ಷಿ: ಜೆಡಿಎಸ್

ಸುದ್ದಿ ಸಂಗ್ರಹ ಬೆಂಗಳೂರು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಮಾಡಿರುವ ಸರ್ಕಾರದ ನಡೆಯನ್ನು ಜೆಡಿಎಸ್ ಖಂಡಿಸಿದೆ. ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಜೆಡಿಎಸ್, ಇದು ಸರ್ಕಾರದ ಹೇಡಿತನಕ್ಕೆ ಸಾಕ್ಷಿ ಅಂತ ವಾಗ್ದಾಳಿ ನಡೆಸಿದೆ. ಎಕ್ಸ್‌ನಲ್ಲಿ ಏನಿದೆ ?ಪ್ರಶ್ನೆ ಕೇಳುವ ಪತ್ರಕರ್ತರನ್ನು ಕಂಡರೆ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟೊಂದು ನಡುಕವೆ ? ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ಹೇಡಿತನಕ್ಕೆ ಸಾಕ್ಷಿ. ಸಚಿವರು, ಶಾಸಕರ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ಭಯವೇಕೆ ? ಮಾಧ್ಯಮಗಳ ಧ್ವನಿ ಅಡಗಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ […]

Continue Reading

ಶಾಲಾ ವಾರ್ಷಿಕೋತ್ಸವವು ಮಕ್ಕಳ ಪ್ರತಿಭೆ ಅರಳಿಸುವ ವೇದಿಕೆಯಾಗಿದೆ: ಜಯಶ್ರೀ ಮತ್ತಿಮೂಡ

ಸುದ್ದಿ ಸಂಗ್ರಹ ಶಹಾಬಾದ್ಶಾಲಾ ವಾರ್ಷಿಕೋತ್ಸವವು ಮಕ್ಕಳ ಪ್ರತಿಭೆ ಅರಳಿಸುವ ವೇದಿಕೆಯಾಗಿದ್ದು, ಶಿಸ್ತು, ಸಂಸ್ಕಾರ, ಸ್ವದೇಶಿ ಸಂಸ್ಕೃತಿ, ಭಾಷಾಭಿಮಾನ ಮತ್ತು ಸಮಾಜ ಪರಿವರ್ತನೆ ಶಾಲೆಯ ಮುಖ್ಯ ಗುರಿಯಾಗಿದೆ ಎಂದು ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೂಡ ಹೇಳಿದರು. ತಾಲೂಕಿನ ತೋನಸನಹಳ್ಳಿ (ಎಸ್) ಗ್ರಾಮದ ಶರಣ ಗ್ರಾಮೀಣಾಬಿವೃದ್ದಿ ಶಿಕ್ಷಣ ಸಂಸ್ಥೆಯ ಕೋತಲಪ್ಪ ಮುತ್ಯಾ ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿವಿ ಕೇವಲ ವೀಕ್ಷಣೆ ಬಳಸದೆ, ಅವುಗಳಿಂದ ಜ್ಞಾನ ವಿಕಾಸದ ಪೂರಕವಾಗಿ ಬಳಸಬೇಕು […]

Continue Reading

ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ರೈಲ್ವೆ ವಿಭಾಗದ ಮುಖ್ಯ ವ್ಯವಸ್ಥಾಪಕರಿಗೆ ಬಿಜೆಪಿ ಮುಖಂಡರು ಮನವಿ

ಸುದ್ದಿ ಸಂಗ್ರಹ ವಾಡಿಪಟ್ಟಣದ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳು ಮತ್ತು ಕುಂದು ಕೊರತೆಗಳನ್ನು ವೀಕ್ಷಿಸಿಲು ಆಗಮಿಸಿದ ಮುಂಬಯಿ ರೈಲ್ವೆ ವಿಭಾಗದ ಮುಖ್ಯ ವ್ಯವಸ್ಥಾಪಕ ಪ್ರತೀಕ್ ಗೋಸ್ವಾಮಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು. ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮತ್ತು ಮುಖಂಡ ರಾಜು ಮುಕ್ಕಣ್ಣ ಮಾತನಾಡಿ, ವಾಡಿ ಪಟ್ಟಣದ ರೈಲ್ವೆ ನಿಲ್ದಾಣದ ಅಭಿವೃದ್ಧಿ ಬಗ್ಗೆ ವಿವರಿಸುತ್ತಾ ವಾಡಿ ತನ್ನದೆಯಾದ ಇತಿಹಾಸ ಹೊಂದಿದೆ, ಪುರಾತನ ರೈಲ್ವೆ ನಿಲ್ದಾಣದಲ್ಲಿ ಇದು ಒಂದಾಗಿದೆ, ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು […]

Continue Reading

ಶಿವ ಧ್ಯಾನದಿಂದ ಶಾಂತಿ, ನೆಮ್ಮದಿ

ಸುದ್ದಿ ಸಂಗ್ರಹ ಶಹಾಬಾದ್ಶಿವನ ಧ್ಯಾನದದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಈಶ್ವರಿ ವಿವಿಯ ರಾಜಯೋಗಿನಿ ಜಗದೇವಿ ಅಕ್ಕ ಹೇಳಿದರು. ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಸೋಮವಾರ ಶಿವರಾತ್ರಿ ಅಂಗವಾಗಿ ಏರ್ಪಡಿಸಲಾಗಿದ್ದ ಶಿವರಾತ್ರಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ದೇಶ ಹಬ್ಬಗಳ ನಾಡು, ಧರ್ಮಗಳ ಬೀಡಾಗಿದೆ. ದೇವರ ಧ್ಯಾನದಿಂದ ಬದುಕು ಉಜ್ವಲವಾಗುತ್ತದೆ. ಶಿವರಾತ್ರಿ ಉಪವಾಸ, ಜಾಗರಣೆ ಬದಲು ಅರಿಷಡ್ವರ್ಗಗಳಿಂದ ದೂರವಾಗುವ ಸಂಕಲ್ಪ ಮಾಡಬೇಕು, ಜಗತ್ತಿಗೆ ಭಗವಂತ ಒಬ್ಬನೆ ಆಗಿದದು ಆತನನ್ನು ಮನಸ್ಸು ಮತ್ತು […]

Continue Reading

ಮಹಿಳೆಯ ಸರ ಕಸಿದು ಓಡುತ್ತಿದ್ದ ಕಳ್ಳನನ್ನು ಒಂದು ಕಿ.ಮೀ ಬೆನ್ನತ್ತಿ ಹಿಡಿದ ಕಾನ್ಸ್‌ಟೇಬಲ್

ಸುದ್ದಿ ಸಂಗ್ರಹ ಬೆಂಗಳೂರುವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಸರ ಕಸಿದು ಓಡುತ್ತಿದ್ದ ಕಳ್ಳನನ್ನು ಕಾನ್ಸ್‌ಟೇಬಲ್ ಒಬ್ಬರು ಒಂದು ಕಿ.ಮೀ ಬೆನ್ನತ್ತಿ ಹಿಡಿದಿದ್ದಾರೆ. ಫೆ.5 ರಂದು ಸರಗಳ್ಳತನ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಹನುಮಂತ ಪುಟಾಣಿ ಸುಮಾರು ಒಂದು ಕಿ.ಮೀ ಓಡಿ ಬೆನ್ನತ್ತಿ ಹಿಡಿದಿದ್ದರು. ದಾಕ್ಷಾಯಣಿ ಎಂಬವರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದ ಸೈಯದ್ ಜಾಫರ್ ಎಂಬ ಆರೋಪಿಯನ್ನು ಹನುಮಂತ ಪುಟಾಣಿ ಬೆನ್ನಟ್ಟಿ ಹಿಡಿದಿದ್ದರು. ಆ ದಿನ ಕೆಲಸ ಮುಗಿಸಿ […]

Continue Reading

ಕೋಲಾರದಲ್ಲಿ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಇಂದು ಮೋದಿ ಚಾಲನೆ‌

ಸುದ್ದಿ ಸಂಗ್ರಹ ನವದೆಹಲಿಕೋಲಾರದ ವೇಮಗಲ್‌ನಲ್ಲಿ ದೇಶದಲ್ಲೆ ಮೊದಲ ಖಾಸಗಿ ಮಿನಿ ಹೆಲಿಕಾಪ್ಟರ್ ನಿರ್ಮಾಣ ಘಟಕ ಕಾರ್ಯಾರಂಭ ಮಾಡಲಿದೆ. ರಕ್ಷಣಾ ಮಿನಿ ಹೆಲಿಕಾಪ್ಟರ್ ನಿರ್ಮಾಣ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಮಂಗಳವಾರ ವರ್ಚುವಲ್‌ ಆಗಿ ಚಾಲನೆ ನೀಡಲಿದ್ದಾರೆ. ಟಾಟಾ ಕಂಪನಿಯಿಂದ ಮೊದಲ ಬಾರಿಗೆ ಮಿನಿ ಏರ್ ಬಸ್, ಹೆಲಿಕಾಪ್ಟರ್ ನಿರ್ಮಾಣ ಕಂಪನಿಯನ್ನು ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಆರಂಭಿಸುತ್ತಿದ್ದು ಇಂದಿನಿಂದ ಮಿನಿ ಹೆಲಿಕಾಪ್ಟರ್ ಘಟಕ ಕಾರ್ಯಾರಂಭ ಮಾಡಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖುದ್ದು […]

Continue Reading