ವಾಡಿ: ಪಟ್ಟಣದ ಅಜಾದ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಮೇಣದ ಬತ್ತಿ ಬೆಳಗುವ ಮೂಲಕ ಪಹಲ್ಗಾಮ್ ಘಟನೆಯಲ್ಲಿ ಉಗ್ರಗಾಮಿಗಳ ದಾಳಿಗೆ ಬಲಿಯಾದವರಿಗೆ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಪಹಲ್ಗಾಮ್’ದಲ್ಲಿ ಉಗ್ರಗಾಮಿಗಳು ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಭೀಕರವಾಗಿ ಹತ್ಯೆ ಮಾಡಿದ್ದಾರೆ. ದಾಳಿ ವೇಳೆ ಉಗ್ರರು ಪ್ರವಾಸಿಗರ ಧರ್ಮ ಯಾವುದು ಎಂದು ಕೇಳಿ ಗುಂಡಿಕ್ಕಿ ಕೊಂದಿರುವುದು ಅತ್ಯಂತ ಹೇಯ ಕೃತ್ಯವಾಗಿದೆ ಎಂದರು.
ದುಷ್ಕರ್ಮಿಗಳು ಧರ್ಮದ ಹೆಸರಿನಲ್ಲಿ ಅಮಾಯಕ, ಮುಗ್ಧ ಜನರನ್ನು ಬಲಿ ತೆಗೆದುಕೊಂಡಿದ್ದಾರೆ. ಈ ದುಷ್ಕೃತ್ಯದ ಹಿಂದೆ ಪಾಕಿಸ್ತಾನದ ಕೈವಾಡದಿಂದ ನಮ್ಮ ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿರುವುದರಿಂದ ಆ ಪಾಪಿ ದೇಶವನ್ನು ಕೇಂದ್ರ ಸರ್ಕಾರ ತಕ್ಷಣ ಯುದ್ದ ಸಾರಿ ಸದೆಬಡಿಯಬೇಕು ಎಂದರು.
ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬೇಕು. ಇದಕ್ಕಾಗಿ ಎಲ್ಲರು ಒಟ್ಟಾಗಿ ದೇಶದ ಭವಿಷ್ಯಕ್ಕಾಗಿ ಭಯೋತ್ಪಾದಕರ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಹರಿ ಗಲಾಂಡೆ, ರವೀಂದ್ರ ವಾಲ್ಮೀಕ ನಾಯಕ, ಕಿಶನ ಜಾಧವ, ರಾಮು ರಾಠೊಡ, ಸುಭಾಷ ವರ್ಮಾ, ಅಯ್ಯಣ್ಣ ದಂಡೊತಿ, ವಿಶ್ವರಾಧ್ಯ ತಳವಾರ,
ಸತೀಶ ಸಾವಳಗಿ, ಭೀಮರಾವ ಸುಬೇದಾರ, ಸಂಜಯ ಗಾಯಕವಾಡ, ದತ್ತಾ ಖೈರೆ, ಶಿವಕುಮಾರ ಹೂಗಾರ, ಈರಣ್ಣ ನಾಟೀಕರ, ದೇವೇಂದ್ರ ಬಡಿಗೇರ ಸೇರಿದಂತೆ ನೂರಾರು ಕಾರ್ಯಕರ್ತರು ಪಾಕಿಸ್ತಾನದ ವಿರುದ್ಧ ಘೋಷಣೆ ಕೋಗಿದರು.