ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನಿ ನಾಗರಿಕರನ್ನು ತನಿಖೆ ಮಾಡಿ ದೇಶದಿಂದ ಹೊರಹೋಗುವ ಮಾರ್ಗ ತೋರಿಸಲಾಗಿದೆ. ಇದಾದ ನಂತರ ಸರ್ಕಾರ ಆಧಾರ್, ಪ್ಯಾನ್, ಪಡಿತರ ಚೀಟಿ ಭಾರತೀಯ ಪೌರತ್ವಕ್ಕೆ ಪುರಾವೆಯಲ್ಲ ಎಂದು ಹೇಳಿದೆ. ಇವು ಆಡಳಿತಾತ್ಮಕ ಅಗತ್ಯಗಳನ್ನು ಮಾತ್ರ ಪೂರೈಸುತ್ತವೆ.
ಇದಲ್ಲದೆ ಸರ್ಕಾರದಿಂದ ಗುರುತಿಸಲ್ಪಟ್ಟ ಏಕೈಕ ದಾಖಲೆಗಳು ಜನನ ಪ್ರಮಾಣಪತ್ರ ಮತ್ತು ನಿವಾಸ ಪ್ರಮಾಣಪತ್ರ ಎಂದು ಸರ್ಕಾರ ಹೇಳಿದೆ. ಇದರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಅಕ್ರಮ ವಿದೇಶಿ ನಾಗರಿಕರು ಪರಿಶೀಲನೆಯ ಸಮಯದಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಪ್ಯಾನ್ ಕಾರ್ಡ್ ತೋರಿಸಿದ ಕಾರಣ, ಕೇಂದ್ರವು ಈ ನಿರ್ಧಾರ ತೆಗೆದುಕೊಂಡಿದೆ. ಅಂತಹ ಪರಿಸ್ಥಿತಿಯಲ್ಲಿ, ಯಾರೊಬ್ಬರ ಪೌರತ್ವ ಪರಿಶೀಲಿಸಲು ಪ್ರತಿಯೊಂದು ದಾಖಲೆಯನ್ನು ಬಳಸಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.
ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾರ್ಡ್ ಗುರುತು ಮತ್ತು ನಿವಾಸದ ಪುರಾವೆಯಾಗಿ ಪರಿಗಣಿಸುತ್ತದೆ. ಆದರೆ ಪೌರತ್ವದ ಪುರಾವೆಯಾಗಿ ಪರಿಗಣಿಸುವುದಿಲ್ಲ. ಇದೆ ವಿಷಯ ಪ್ಯಾನ್ ಮತ್ತು ಪಡಿತರ ಚೀಟಿಗೂ ಅನ್ವಯಿಸುತ್ತದೆ. ಪ್ಯಾನ್ ಕಾರ್ಡ್ಗಳನ್ನು ತೆರಿಗೆ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಮತ್ತು ಪಡಿತರ ಕಾರ್ಡ್ಗಳನ್ನು ಆಹಾರ ವಿತರಣೆಗೆ ಬಳಸಲಾಗುತ್ತದೆ, ಇವೆರಡು ಪೌರತ್ವವನ್ನು ದೃಢೀಕರಿಸುವುದಿಲ್ಲ.
ಜನನ ಮತ್ತು ವಾಸಸ್ಥಳ ಪ್ರಮಾಣಪತ್ರ
ಸರ್ಕಾರವು ಜನನ ಪ್ರಮಾಣಪತ್ರ ಮತ್ತು ನಿವಾಸ ಪ್ರಮಾಣಪತ್ರವನ್ನು ಭಾರತೀಯ ಪೌರತ್ವವನ್ನು ತೋರಿಸುವ ದಾಖಲೆಗಳಾಗಿ ಪರಿಗಣಿಸುತ್ತದೆ. 1969ರ ಜನನ ಮತ್ತು ಮರಣ ಪ್ರಮಾಣಪತ್ರ ಕಾಯ್ದೆಯು, ಭಾರತದೊಳಗಿನ ಜನನದ ಹಕ್ಕುಗಳ ಆಧಾರದ ಮೇಲೆ ಪೌರತ್ವವನ್ನು ಮೌಲ್ಯೀಕರಿಸುವ ಜನನ ಪ್ರಮಾಣಪತ್ರ ನೀಡಲು ಸಮರ್ಥ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ಮತ್ತೊಂದೆಡೆ ನಿವಾಸ ಪ್ರಮಾಣಪತ್ರದ ಬಗ್ಗೆ ಮಾತನಾಡಿದರೆ, ಒಬ್ಬ ವ್ಯಕ್ತಿಯು ನಿರ್ದಿಷ್ಟ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಎಂದು ಪ್ರಮಾಣಿಕರಿಸುತ್ತದೆ. ಇದು ಭಾರತೀಯ ಪೌರತ್ವವನ್ನು ಹೊಂದಿರುವ ಹಕ್ಕನ್ನು ಮತ್ತಷ್ಟು ಬಲಪಡಿಸುತ್ತದೆ. ಇದಲ್ಲದೆ ಸರ್ಕಾರಿ ಉದ್ಯೋಗ, ಪಾಸ್ಪೋರ್ಟ್ ಅಥವಾ ನ್ಯಾಯಾಲಯಕ್ಕೆ ಪೌರತ್ವದ ಪುರಾವೆ ಕಡ್ಡಾಯವಾಗಿದೆ.