ಬಸ್ ಡ್ರೈವರ್ ಆಗಿದ್ದ ಯಶ್ ತಂದೆ ಈಗ ನಿರ್ಮಾಪಕ: ಹೊಸ ಬ್ಯಾನರ್ ಶುರು

ಸುದ್ದಿ ಸಂಗ್ರಹ ವಿಶೇಷ

ರಾಕಿಂಗ್ ಸ್ಟಾರ್ ಯಶ್ ಅವರು ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಈಗ ಕೇವಲ ನಟ ಮಾತ್ರವಲ್ಲ ನಿರ್ಮಾಪಕ ಕೂಡ ಹೌದು. ಬಾಲಿವುಡ್​ನ ರಾಮಾಯಣ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗುವ ಹಂತಕ್ಕೆ ಬೆಳೆದಿದ್ದಾರೆ ಅನ್ನೊದು ವಿಶೇಷ. ಈ ಚಿತ್ರಕ್ಕೆ ಅವರು ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಈಗ ಅವರ ಕುಟುಂಬದವರು ಕೂಡ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ವಿಚಾರ ಕೇಳಿ ಅನೇಕರಿಗೆ ಅಚ್ಚರಿಯಾಗಿದೆ.

ಯಶ್ ಬಳಿಕ ಅವರ ತಾಯಿ ಪುಷ್ಪ ಅವರು ಹಲವು ಸಿನಿಮಾಗಳನ್ನು ತಯಾರು ಮಾಡಲು ರೆಡಿಯಾಗಿದ್ದಾರೆ ಎಂದು ವರದಿಯಾಗಿದೆ. ಸ್ಯಾಂಡಲ್​ವುಡ್​ನಲ್ಲಿ ಪಿಎ ಎನ್ನುವ ಬ್ಯಾನರ್ ಹುಟ್ಟಿಕೊಂಡಿದೆ. ಸಿನಿಮಾ ನಿರ್ಮಾಣಕ್ಕಾಗಿ ಹುಟ್ಟಿಕೊಂಡ ಹೊಸ ಬ್ಯಾನರ್ ಇದಾಗಿದೆ. ಈ ಬ್ಯಾನರ್ ವಿಸ್ತೃತ ರೂಪದ ಬಗ್ಗೆ ಕುತೂಹಲ ಮೂಡಿದೆ.

ಪಿಎ ಎಂದರೆ ಪುಷ್ಪ ಹಾಗೂ ಅರುಣಕುಮಾರ್ ಎನ್ನುವ ಮಾಹಿತಿ ಇದೆ. ಇದು ಯಶ್ ತಂದೆ-ತಾಯಿ ಹೆಸರು. ಈ ಕಾರಣದಿಂದ ಬ್ಯಾನರ್​ಗೆ ‘ಪಿಎ’ ಎಂದು ಇಡಲಾಗಿದೆ ಎನ್ನಲಾಗುತ್ತಿದೆ. ಪೃಥ್ವಿ ಅಂಬಾರ್ ನಾಯಕನಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಯಶ್ ತಾಯಿ ನಿರ್ಮಾಣ ಸಂಸ್ಥೆ ಬಗ್ಗೆ ಸದ್ಯದಲ್ಲಿಯೇ ಅಧಿಕೃತ ಮಾಹಿತಿ ಹೊರಬೀಳಲಿದೆ.

ಯಶ್ ಅವರ ಪತ್ನಿ ನಟಿ ರಾಧಿಕಾ ಪಂಡಿತ್ ಅವರು ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳು ನೀಡಿದ್ದಾರೆ. ಈಗ ಪತಿಯ ವೃತ್ತಿ ಜೀವನಕ್ಕೆ ಬೆಂಬಲ ನೀಡುತ್ತಿದ್ದಾರೆ. ಅದೆ ರೀತಿ ಈಗ ಯಶ್ ಕುಟುಂಬದ ಮತ್ತಿಬ್ಬರು ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.

ಯಶ್ ಅವರ ಸಿನಿಮಾ ವಿಚಾರಕ್ಕೆ ಬರುವದಾದರೆ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ನಟನೆಯ ‘ರಾಮಾಯಣ’ ಸಿನಿಮಾ ಕೆಲಸಗಳು ಇತ್ತೀಚೆಗೆ ಆರಂಭವಾದವು. ಅದಕ್ಕೂ ಮೊದಲು ಅವರು ಮಧ್ಯೆ ಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಬಂದರು. ಈ ಸಂದರ್ಭದ ವಿಡಿಯೋ ಹಾಗೂ ಫೋಟೋ ವೈರಲ್ ಆಗಿವೆ.

Leave a Reply

Your email address will not be published. Required fields are marked *