ವಾಡಿ: ಬಿಜೆಪಿ ಕಛೇರಿಯಲ್ಲಿ ಬಸವ ಜಯಂತಿ ಆಚರಣೆ

ಪಟ್ಟಣ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ವಿಶ್ವಗುರು ಬಸವಣ್ಣನವರ 892ನೇ ಜಯಂತಿಯನ್ನು ಬಸವೇಶ್ವರ ಭಾವಚಿತ್ರಕ್ಕೆ ಬಿಜೆಪಿ ಮುಖಂಡರು ಗೌರವ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಎಸ್.ಸಿ ಮೂರ್ಚಾದ ಮಾಜಿ ಅಧ್ಯಕ್ಷ ರಾಜು ಮುಕ್ಕಣ್ಣ ಮಾತನಾಡಿ, 12ನೇ ಶತಮಾನದಲ್ಲಿಯೇ ಜಾತಿ ಎಂಬ ಕತ್ತಲೆ ಹೋಗಲಾಡಿಸಿ, ಸಾಮಾನತೆಯ ಜ್ಯೋತಿ ಬೆಳಗಿಸಿ, ಸರ್ವರಿಗೂ ಸಮ ಬಾಳು ನೀಡಿದ ಮಹಾನ ಸಮಾಜ ಸುಧಾರಕರು ಅಣ್ಣ ಬಸವಣ್ಣನವರು ಎಂದರು.

ಜಾತಿ ಎಂಬ ಅನಿಷ್ಠ ಪದ್ಧತಿಯನ್ನು ನಾವಾಗಿಯೇ ಸೃಷ್ಟಿಮಾಡಿಕೊಂಡಿದ್ದೆವೆ. ಬಸವಣ್ಣನವರು ಎಲ್ಲರೂ ಸಮಾನರು ಎಂದು ಸಾರಿದವರು. ಜಾತಿ ಪದ್ಧತಿ, ಮೂಢ ನಂಭಿಕೆಗೆ ಎಲ್ಲರೂ ಕಟ್ಟು ಬಿದ್ದಿದ್ದೆವು. ಹಿಂದೆ ಮನುಷ್ಯರನ್ನು ಪ್ರಾಣಿಗಿಂತ ಹೀನಾಯವಾಗಿ ಕಾಣಲಾಗುತ್ತಿತ್ತು. ಜಾತಿ ಪದ್ಧತಿ, ಮೂಡ ನಂಬಿಕೆ ಹೋಗಲಾಡಿಸಲು ಬಸವಣ್ಣನವರು ಶ್ರಮಿಸಿದ್ದಾರೆ. ಇಂದು ಬಸವಣ್ಣನವರ ಆದರ್ಶ, ತತ್ವ, ಆಚಾರ, ವಿಚಾರಗಳನ್ನು ಅಳವಡಿಸಿಕೂಂಡು, ನಮ್ಮ ದೇಶದ ಸಂವಿಧಾನದ ಆಶಯದಂತೆ ಬಾಳುವುದು ನಮ್ಮೆಲ್ಲರ ಸಾಮಾಜಿಕ ಜವಬ್ದಾರಿ ಎಂದರು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದರು.

ಈ ಸಂಧರ್ಭದಲ್ಲಿ ಯುವ ಮುಖಂಡರಾದ ವಿಠಲ ವಾಲ್ಮೀಕ ನಾಯಕ, ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ಎಸ್.ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಮುಖಂಡರಾದ ಸಿದ್ದಣ್ಣ ಕಲ್ಲಶೆಟ್ಟಿ, ಶರಣಗೌಡ ಚಾಮನೂರ, ಹರಿ ಗಲಾಂಡೆ,
ಅರ್ಜುನ ಕಾಳೆಕರ್, ಭೀಮರಾವ ದೊರೆ, ಶಿವಶಂಕರ ಕಾಶೆಟ್ಟಿ, ಯಮನಪ್ಪ ನವನಳ್ಳಿ, ಪ್ರಕಾಶ ಪುಜಾರಿ, ಅಂಬದಾಸ ಜಾಧವ, ಅಯ್ಯಣ್ಣ ದಂಡೊತಿ, ನಾಗರಾಜಗೌಡ ಗೌಡಪ್ಪನೂರ, ಸತೀಶ ಸಾವಳಗಿ, ಭೀಮರಾವ ಸುಬೇದಾರ, ಪ್ರಮೋದ್ ಚೊಪಡೆ, ದತ್ತಾ ಖೈರೆ,ಮಲ್ಲಿಕಾರ್ಜುನ ಸಾತಖೇಡ, ಚಂದ್ರಶೇಖರ ಬೆಣ್ಣೂರ, ಕುಮಾರ ಜಾಧವ, ಗುಂಡುಗೌಡ ಚಾಮನೂರ, ಉಮಾಬಾಯಿ ಗೌಳಿ, ನಿರ್ಮಲ ಇಂಡಿ, ಯಂಕಮ್ಮ ಗೌಡಗಾಂವ, ಶರಣಮ್ಮ ಯಾದಗಿರಿ, ಅಂಬ್ರೇಷ ಗೊಳೆದ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *