ಕಲಬುರಗಿ: ವಿಶ್ವದಲ್ಲಿರುವ ಎಲ್ಲರು ಒಂದೆ ಕುಟುಂಬದ ಸದಸ್ಯರು, ನಾವೆಲ್ಲರು ಒಂದೆ ಎಂಬ ಜಾಗತಿಕ ಕುಟುಂಬ ವ್ಯವಸ್ಥೆಯ ಪರಿಕಲ್ಪನೆ ಬೆಳೆದರೆ ವಿಶ್ವದೆಲ್ಲೆಡೆ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದು ಚಿಂತಕ ಎಚ್.ಬಿ ಪಾಟೀಲ ಆಶಯ ವ್ಯಕ್ತಪಡಿಸಿದರು.
ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ವಿಶ್ವ ಕುಟುಂಬ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಕುಟುಂಬವು ಸಮಾಜದ ಪ್ರಮುಖ ಘಟಕವಾಗಿದ್ದು, ಪ್ರೀತಿ, ಪ್ರೇಮ, ಬಾಂಧವ್ಯ, ಸಂಬಂಧದ ಬೆಸುಗೆಯಾಗಿದೆ. ಇಂದು ಕಾರಣಾಂತರಗಳಿಂದ ವಿಭಜನೆಯಾಗಿ, ವಿಭಕ್ತ ಕುಟುಂಬ ವ್ಯಾಪಕವಾಗಿ ಕಂಡುಬರುತ್ತಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ‘ಕುಟುಂಬ’ ಎಂದರೆ ಬಾಂಧವ್ಯದ ಸಾಗರ, ವ್ಯಕ್ತಿತ್ವ ನಿರ್ಮಾಣದ ಕೇಂದ್ರ, ಪ್ರೀತಿಯ ಸಮುದ್ರವಾಗಿದೆ. ಕುಟುಂಬದಲ್ಲಿರುವ ಪ್ರತಿಯೊಬ್ಬರು ಪರಸ್ಪರ ಪ್ರೀತಿ, ಸಹಕಾರ, ಮನೋಭಾವದಿಂದ ಜೀವಿಸಿ, ಶಾಂತಿಯುತ, ಆದರ್ಶ ಕುಟುಂಬವಾಗಬೇಕು. ಯಾವುದೆ ಕಾರಣಕ್ಕೂ ಬಾಂಧ್ಯವ್ಯದ ಬೆಸುಗೆಯಾದ ಕೌಟುಂಬಿಕ ವ್ಯವಸ್ಥೆ ಹಾಳಾಗಬಾರದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಅಸ್ಲಾಂ ಶೇಖ್, ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಶಿಕ್ಷಕಿಯರಾದ ಪೂರ್ಣಿಮಾ ಪಾಟೀಲ, ಪ್ರೀತಿ ಸಣಮನಿ, ಸೇವಕಿ ಸುನಿತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.