ಸೈಬರ್‌ ವಂಚಕರ ಖೆಡ್ಡಾಕ್ಕೆ ಬಿದ್ದು ಕೋಟಿ ರೂಪಾಯಿ ಕಳೆದುಕೊಂಡ ಭೂಪ

ಸುದ್ದಿ ಸಂಗ್ರಹ ಚಿಕ್ಕಮಗಳೂರು ಕಡೂರು ತಾಲೂಕಿನ ಶಿವಪುರ ಗ್ರಾಮದ ವ್ಯಕ್ತಿಯೊಬ್ಬ ಅಲ್ಪ ಅವಧಿಯಲ್ಲಿ ಹೆಚ್ಚಿನ ಲಾಭ ಮಾಡುವ ಆಸೆಗೆ ಬಿದ್ದು, ಆನ್‌ಲೈನ್‌ ಟ್ರೇಡಿಂಗ್‍ ನಂಬಿ 1,28,10,000 ರೂ. ಹಣ ಕಳೆದುಕೊಂಡಿದ್ದಾನೆ. ಗ್ರಾಮದ ಕಲ್ಲೇಗೌಡ ಹಣ ಕಳೆದುಕೊಂಡ ನತದೃಷ್ಟ. ಈತ ಫೇಸ್ಬುಕ್‌ನಲ್ಲಿ ಟ್ರೇಡಿಂಗ್ ಲಿಂಕ್ ನೋಡಿದ್ದ. ಅದನ್ನ ಕ್ಲಿಕ್‌ ಮಾಡಿ ಬಳಿಕ ವಾಟ್ಸಾಪ್‌ನಲ್ಲಿ ಗ್ರೂಪ್‌ ಒಂದಕ್ಕೆ ಸೇರಿದ್ದ. ಅಲ್ಲಿಂದ ಟ್ರೇಡಿಂಗ್ ಲಿಂಕ್‍ನಲ್ಲಿ ಅಕೌಂಟ್ ತೆರೆದಿದ್ದ. ಆರಂಭದಲ್ಲಿ 60 ಸಾವಿರ ರೂ. ಹಣ ಹಾಕಿದ್ದ. ಈ ವೇಳೆ 17,800 ರೂ. […]

Continue Reading

ವಾಡಿಯಲ್ಲಿ ಮನ್ ಕೀ ಬಾತ್ ವೀಕ್ಷಣೆ

ಸುದ್ದಿ ಸಂಗ್ರಹ ವಾಡಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್‌’ನ 132ನೇ ಸಂಚಿಕೆಯನ್ನು ಮುಖಂಡರು ವೀಕ್ಷಿಸಿದರು. ಪ್ರಧಾನಮಂತ್ರಿಯವರು ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಇರಾನ್-ಅಮೇರಿಕಗಳ ಯುದ್ಧ ಮತ್ತು ಅದರ ಪರಿಣಾಮವಾಗಿ ಉಂಟಾಗಬಹುದಾದ ತೈಲ ಮತ್ತು ಅನಿಲ ಬಿಕ್ಕಟ್ಟಿನ ಬಗ್ಗೆ ಮಾತನಾಡಿದರು. ಕರೋನಾದಂತಹ ಕಠಿಣ ಪರಿಸ್ಥಿತಿಯನ್ನು ನಾವು ಹೇಗೆ ಎದುರಿಸಿದೆವೋ, ಹಾಗೆಯೇ ಪ್ರಸ್ತುತ ಜಾಗತಿಕ ಸವಾಲುಗಳಿಂದಲೂ ನಾವು ಹೊರಬರಲಿದ್ದೆವೆ ಎಂಬ ಭರವಸೆಯ ಮಾತುಗಳನ್ನು ಆಲಿಸಿ, ಅವರು ದೇಶಕ್ಕಾಗಿ ತೆಗೆದುಕೊಳ್ಳುತ್ತಿರುವ ದಿಟ್ಟ ನಿರ್ಧಾರಗಳನ್ನು ಬಿಜೆಪಿ ಅಧ್ಯಕ್ಷ […]

Continue Reading

ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸತ್ಕರಿಸಿದ ಟಿಎಪಿಸಿಎಂಎಸ್ ಅಧ್ಯಕ್ಷ ದೇವಿಂದ್ರ ಅರಣಕಲ್

ಸುದ್ದಿ ಸಂಗ್ರಹ ಚಿತ್ತಾಪುರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (TAPCMS)ಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ದೇವಿಂದ್ರ ಅರಣಕಲ್ ಅವರು ಬೆಂಗಳೂರಿನ ಸರ್ಕಾರಿ ಗೃಹ ಕಚೇರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಿಗೆ ಬುದ್ಧನ ಪ್ರತಿಮೆ ನೀಡಿ ಗೌರವಿಸಿದ ದೇವಿಂದ್ರ ಅರುಣಕಲ್ ಅವರು, ಸಹಕಾರ ಸಂಘದ ಮುಂದಿನ ಕಾರ್ಯವೈಖರಿ ಹಾಗೂ ರೈತರ ಹಿತರಕ್ಷಣೆ […]

Continue Reading

14 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮುಂದಾದ ನೋಕಿಯಾ

ಸುದ್ದಿ ಸಂಗ್ರಹ ಹೆಲ್ಸಿಂಕಿ ಒಂದು ಕಾಲದಲ್ಲಿ ವಿಶ್ವದ ನಂಬರ್‌ 1 ಫೋನ್‌ ತಯಾರಕಾ ಕಂಪನಿ ಫಿನ್ಲೆಂಡ್‌ ಮೂಲದ ನೋಕಿಯಾ 14 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮುಂದಾಗಿದೆ. ನೋಕಿಯಾ ತನ್ನ ಜಾಗತಿಕ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ.20ರಷ್ಟು ಕಡಿಮೆ ಮಾಡಲು ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ ವಿಶ್ವಾದ್ಯಂತ 74 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದು ಭಾರತದಲ್ಲೆ ಸುಮಾರು 17 ಸಾವಿರ ನೌಕರರಿದ್ದಾರೆ. ನೋಕಿಯಾದ ಭಾರತದ ಕಾರ್ಯಕ್ಷಮತೆ ಕುಸಿತದಲ್ಲಿದೆ. 2025ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಮಾರಾಟ ಆದಾಯ ವರ್ಷದಿಂದ ವರ್ಷಕ್ಕೆ 15%ರಷ್ಟು ಕುಸಿದು […]

Continue Reading

ವಾಡಿಯಲ್ಲಿ ಜನಸಂಪರ್ಕ ಸಭೆ ನಡೆಸಲು ಒತ್ತಾಯ

ಸುದ್ದಿ ಸುದ್ದಿ ಸಂಗ್ರಹ ವಾಡಿ ಪಟ್ಟಣದ ವ್ಯಾಪ್ತಿಯ ಜನರ ಕುಂದು ಕೊರತೆಗಳನ್ನು ಅರಿತು ಬಗೆಹರಿಸಲು ಜಿಲ್ಲಾಧಿಕಾರಿಗಳು ಪಟ್ಟಣದಲ್ಲಿ ಜನಸಂಪರ್ಕ ಸಭೆ ನಡೆಸಲು ಸಮಯ ನೀಡಬೇಕು ಎಂದು ಸ್ಥಳೀಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಒತ್ತಾಯಾಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಫೌಜಿಯಾ ಬಿ.ತರನ್ನುಮ್ ಅವರಿಗೆ ಪತ್ರ ಬರೆದಿರುವ ಅವರು, ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಬೃಹತ್ ಸಿಮೆಂಟ್ ಕಂಪನಿ ಹಾಗೂ ಜಂಕ್ಷನ್ ರೈಲ್ವೆ ನಿಲ್ದಾಣ ಇರುವ ದೊಡ್ಡ ನಗರವಾಗಿದೆ. ಅಷ್ಟೆ ದೊಡ್ಡ ಪ್ರಮಾಣದಲ್ಲಿ ಜನರು ವಿವಿಧ ಸಮಸ್ಯೆಗಳಿಂದ […]

Continue Reading

ಅಂಬೇಡ್ಕರ್‌ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಯನಗುಂಟಿಕರ್ ಆಯ್ಕೆ 

ಸುದ್ದಿ ಸಂಗ್ರಹ ಶಹಾಬಾ‌ದ್ ಡಾ.ಬಿ.ಆರ್ ಅಂಬೇಡ್ಕರ್‌ ಅವರ 135ನೇ ಜಯಂತ್ಯೋತ್ಸವ ಸಮಿತಿಯ ತಾಲೂಕು ಅಧ್ಯಕ್ಷರಾಗಿ ರಾಜೇಶ ಯನಗುಂಟಿಕರ ಮತ್ತು ಗೌರವ ಅಧ್ಯಕ್ಷರಾಗಿ ವಸಂತ ಕೆ ಕಾಂಬಳೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖಂಡರಾದ ಮಲ್ಲಣ್ಣ ಮಸ್ಕಿ, ಸತೀಶ ಕೋಬಾಳಕರ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಅದ್ದೂರಿಯಾಗಿ ಆಚರಿಸಲು ಸಮಿತಿ ರಚಿಸಲಾಗಿದೆ ಎಂದರು. ಮಲ್ಲಣ್ಣ ಮರತೂರ, ಶಿವಶಾಲ ಪಟ್ಟಣಕರ್‌, ಸುಭಾಷ ಸಾಕ್ರೆ, ಮಲ್ಲಿಕಾರ್ಜುನ ಕಟ್ಟಿ, ಮೋಹನ ಹಳ್ಳಿ, […]

Continue Reading

ಮಾತೆಯ ಮಮತೆಯ ಸವಿಯುಂಡವರೇ ಧನ್ಯರು: ಡಾ.ಲೀಲಾದೇವಿ ಆರ್ ಪ್ರಸಾದ್

ಸುದ್ದಿ ಸುದ್ದಿ ಸಂಗ್ರಹ ಚಿತ್ತಾಪುರ ಜಗತ್ತಿನಲ್ಲಿ ಮಾತೆಯ ಪ್ರೀತಿಯಷ್ಟು ನಿಷ್ಕಲ್ಮಶವಾದದ್ದು ಮತ್ತೊಂದಿಲ್ಲ. ಅವಳ ಮಮತೆಯ ಸವಿಯನ್ನುಂಡವರೇ ಧನ್ಯರು ಎಂದು ಮಾಜಿ ಮಂತ್ರಿ,ಸ್ವಾತಂತ್ರ್ಯ ಹೋರಾಟಗಾರ್ತಿ ಡಾ.ಲೀಲಾದೇವಿ ಆರ್ ಪ್ರಸಾದ ಹೇಳಿದರು. ತಾಲೂಕಿನ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಗುರುವಾರ ನಡೆದ ಶ್ರೀಮಠದ ಅನ್ನಪೂರ್ಣೆ, ಲಿಂ.ಗೌರಮ್ಮ ತಾಯಿಯವರ ಪುಣ್ಯೆಸ್ಮರಣೋತ್ಸವ ಹಾಗೂ ಮಾತೋಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಮಾತೋಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಪ್ರತಿಫಲವನ್ನು ನಿರೀಕ್ಷಿಸದೇ ಪ್ರೀತಿ ಕೊಡುವ ಏಕೈಕ ಜೀವ ಎಂದರೆ […]

Continue Reading

ಚಿನ್ನಾಭರಣ ಕಳ್ಳತನ, ಗಾಂಜಾ ಸಾಗಾಟ: ಪ್ರತ್ಯೇಕ ಪ್ರಕರಣಗಳಲ್ಲಿ 69 ಲಕ್ಷ ಮೌಲ್ಯದ ವಸ್ತು ಜಪ್ತಿ, ನಾಲ್ವರು ಅರೆಸ್ಟ್

ಸುದ್ದಿ ಸಂಗ್ರಹ ಬೀದರ್ ಜಿಲ್ಲೆಯಲ್ಲಿ ಚಿನ್ನಾಭರಣ ಕಳ್ಳತನ, ಗಾಂಜಾ ಸಾಗಾಟದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿ, 69 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಹೈದ್ರಾಬಾದ್‌ನಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. 83 ಕೆ.ಜಿ 670 ಗ್ರಾಂನ ಒಟ್ಟು 41 ಲಕ್ಷ ರೂ.ಗೂ ಅಧಿಕ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ಓರ್ವ ಆರೋಪಿ ಬಂಧಿಸಿದ್ದು, ಇನ್ನೊರ್ವ ಆರೋಪಿ ಪರಾರಿಯಾಗಿದ್ದಾನೆ. ಈ ಕುರಿತು ಮನ್ನಳ್ಳಿ ಪೊಲೀಸ್ […]

Continue Reading

ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ RCB ಜೊತೆ ಒಪ್ಪಂದ: 1 ವರ್ಷಕ್ಕೆ 4.80 ಕೋಟಿ ಕೊಟ್ಟ KMF

ಸುದ್ದಿ ಸಂಗ್ರಹ ಬೆಂಗಳೂರು ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ ಆರ್‌ಸಿಬಿ ತಂಡದ ಜೊತೆ ಕೆಎಂಎಫ್‌ ಒಪ್ಪಂದ ಮಾಡಿಕೊಂಡಿದೆ. ರನ್‌ ಮಿಷಿನ್‌ ವಿರಾಟ್‌ ಕೊಹ್ಲಿ ಸೇರಿ ಮೂರು ಆಟಗಾರರ ಭಾವಚಿತ್ರ ಬಳಸಲು 1 ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದು, ಬರೋಬ್ಬರಿ 4.80 ಕೋಟಿ ರೂ. ಕೆಎಂಎಫ್‌ ವೆಚ್ಚ ಮಾಡಿದೆ. ಆರ್‌ಸಿಬಿಗೆ ಕನ್ನಡಿಗರ ಹೆಮ್ಮೆಯ ನಂದಿನಿ ಬ್ರ್ಯಾಂಡ್‌ ಅಧಿಕೃತ ಡೈರಿ ಪಾರ್ಟ್ನರ್ ಆಗಿದೆ. ಅತಿ ಹೆಚ್ಚಿನ ಫ್ಯಾನ್ಸ್ ಹೊಂದಿರುವ ಆರ್‌ಸಿಬಿ ತಂಡಕ್ಕೆ ಹೆಮ್ಮೆಯ ನಂದಿನಿ ಪಾರ್ಟ್ನರ್‌ ಆಗಿರುವ ಬಗ್ಗೆ ಕೆಎಂಎಫ್ […]

Continue Reading

ಕ್ಷಯರೋಗ ಮುಕ್ತ ಭಾರತ-2030ಕ್ಕೆ ಸಹಕಾರ ಅಗತ್ಯ: ಡಾ.ಅನುಪಮಾ ಕೇಶ್ವಾರ

ಸುದ್ದಿ ಸಂಗ್ರಹ ಕಲಬುರಗಿ ‘ಕ್ಷಯರೋಗ ಮುಕ್ತ ಭಾರತ-2030’ಕ್ಕೆ ಆರೋಗ್ಯ ಇಲಾಖೆಯ ಜೊತೆಗೆ ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು. ನಗರದ ಶೇಖರೋಜಾದಲ್ಲಿನ ಶಹಾಬಜಾರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಮಂಗಳವಾರ ಜರುಗಿದ ‘ವಿಶ್ವ ಕ್ಷಯರೋಗ ನಿರ್ಮಲನಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಜಾಗೃತಿಯ ಕರಪತ್ರ ವಿತರಿಸಿ, ಮಾತನಾಡಿದ ಅವರು, ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು, ಕಫದ ಜೊತೆಗೆ ರಕ್ತ ಕಾಣಿಸುವುದು, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಜ್ವರ […]

Continue Reading