ಪೆಟ್ರೋಲ್ ಬಂಕ್ ಎಡವಟ್ಟು: ಸಿಎಂ ಬೆಂಗಾವಲು ಪಡೆ 19 ವಾಹನಕ್ಕೆ ಡಿಸೇಲ್ ಬದಲು ನೀರು

ಮಧ್ಯಪ್ರದೇಶ: ಸಿಎಂ ಬೆಂಗಾವಲು ವಾಹನಕ್ಕೆ ಡಿಸೇಲ್ ಬದಲು ನೀರು ತುಂಬಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪ್ರಾದೇಶಿಕ ಕೈಗಾರಿಕೆ, ಕೌಶಲ್ಯ ಮತ್ತು ಉದ್ಯೋಗ ಸಮಾವೇಶದಲ್ಲಿ (RISE 2025) ಭಾಗವಹಿಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ.ಮೋಹನ ಯಾದವ್ ಬೆಂಗಾವಲುಪಡೆ ವಾಹನ ಮಧ್ಯದಲ್ಲಿ ನಿಂತಿದೆ. ಏನಾಯಿತೆಂದು ನೋಡಿದಾಗ, ಡಿಸೇಲ್ ಬದಲು ನೀರು ಇರೋದು ಬೆಳಕಿಗೆ ಬಂದಿದೆ. ಸಿಎಂ ಬೆಂಗಾವಲು ಪಡೆಯ 19 ಕಾರುಗಳಿಗೆ ಡಿಸೇಲ್ ಬದಲು ನೀರು ಹಾಕಲಾಗಿದೆ. ಎಲ್ಲ ಬೆಂಗಾವಲು ವಾಹನ ಇದ್ದಕ್ಕಿದ್ದಂತೆ ಒಂದರ ನಂತರ ಮತ್ತೊಂದು ರಸ್ತೆಯಲ್ಲಿ ನಿಂತಿದ್ದರಿಂದ ಆತಂಕ […]

Continue Reading

ನಾಡಿಗೆ ಕೆಂಪೇಗೌಡರ ಕೊಡುಗೆ ಅನನ್ಯ

ಕಲಬುರಗಿ: ದೇಶದ ಹೆಮ್ಮೆಯ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಅವರು ನೂರಾರು ವರ್ಷಗಳ ಹಿಂದೆ ಉತ್ತಮ ರಸ್ತೆಗಳ ನಿರ್ಮಾಣ, ಅನೇಕ ಕೆರೆ-ಬಾವಿಗಳ ನಿರ್ಮಿಸುವುದು ಸೇರಿದಂತೆ ಅನೇಕ ಜನಪರ ಕೆಲಸಗಳನ್ನು ಮಾಡುವ ಮೂಲಕ ನಾಡಿಗೆ ತಮ್ಮದೆಯಾದ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ ಹೇಳಿದರು. ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾತನಾಡಿದ ಅವರು, ಇಂದು ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ […]

Continue Reading

ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿಗಳಿಗೆ ಆರೋಗ್ಯ ಇಲಾಖೆ ನಿಷೇಧ

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಪ್ಯಾರಾಸಿಟಮೋಲ್ ಸೇರಿದಂತೆ 15 ಅಸುರಕ್ಷಿತ ಕಾಂತಿವರ್ಧಕಗಳು ಮತ್ತು ಔಷಧಿಗಳ ಬಳಕೆಗೆ ನಿರ್ಬಂಧ ಹೇರಿದೆ. ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು ಅಸುರಕ್ಷಿತ ಕಾಂತಿವರ್ಧಕ ಔಷಧ ಹಾಗೂ ಔಷಧಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಜ್ವರಕ್ಕೆ ಬಳಕೆ ಮಾಡುವ ಪ್ಯಾರಾಸಿಟಮೋಲ್ ಸೇರಿದಂತೆ ಹಲವು ಉತ್ಪನ್ನಗಳಿವೆ. ಅಸುರಕ್ಷಿತ ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಆರೋಗ್ಯ ಇಲಾಖೆಯು ಮೇ ತಿಂಗಳಲ್ಲಿ […]

Continue Reading

ಆಸ್ತಿಗಾಗಿ ಹೆಣ್ಣುಮಕ್ಕಳ ಗಲಾಟೆ: 4 ಕೋಟಿ ಮೌಲ್ಯದ ಆಸ್ತಿಯನ್ನು ದೇವಸ್ಥಾನದ ಹುಂಡಿಗೆ ಹಾಕಿದ ನಿವೃತ್ತ ಸೈನಿಕ

ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಬಳಿಯ ಪಡವೇಡುವಿನಲ್ಲಿರುವ ಅರುಲ್ಮಿಗು ರೇಣುಗಾಂಬಲ್ ಅಮ್ಮನ್ ದೇವಾಲಯದ ಅಧಿಕಾರಿಗಳಿಗೆ ದೇವಾಲಯದ ಹುಂಡಿಯಿಂದ ಕಾಣಿಕೆಗಳನ್ನು ಎಣಿಸುವಾಗ 4 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆಗಳು ಸಿಕ್ಕಿದೆ. ಇದರ ಮೂಲವನ್ನು ಹುಡುಕಿದಾಗ ಅದೆ ಊರಿನ ನಿವೃತ್ತ ಸೈನಿಕರೊಬ್ಬರು ಇಷ್ಟು ದೊಡ್ಡ ಪ್ರಮಾಣದ ಆಸ್ತಿಯನ್ನು ದೇವರಿಗೆ ದಾನ ನೀಡಿದ್ದಾರೆ ಎಂದು ವರದಿಯಾಗಿದೆ ಜೂನ್ 24 ರಂದು ದೇವಾಲಯದ ಸಿಬ್ಬಂದಿ ಆವರಣದೊಳಗಿನ 11 ಹುಂಡಿಗಳಲ್ಲಿ ಒಂದನ್ನು ತೆರೆದಾಗ, ಅವರಿಗೆ ಮೂಲ ಭೂಮಿ ಮತ್ತು ಮನೆ ಮಾಲೀಕತ್ವದ […]

Continue Reading

ಮಣ್ಣು ಮತ್ತು ಎತ್ತುಗಳ ಗೌರವದ ಪ್ರತೀಕವಾದ ಮಣ್ಣೆತ್ತಿನ ಹಬ್ಬ: ಎಚ್.ಬಿ ಪಾಟೀಲ

ಚಿತ್ತಾಪುರ: ಮಾನವ ಮತ್ತು ಮಣ್ಣಿಗೆ ಅವಿನಾಭಾವ ಸಂಬಂಧವಿದೆ. ರೈತರು ಕೃಷಿ ಮಾಡಿ ಆಹಾರ ಬೆಳೆಯಲು ಮಣ್ಣು ಅವಶ್ಯಕವಾಗಿದೆ. ಎತ್ತುಗಳು ರೈತನ ಪ್ರಮುಖ ಸಾಧನಗಳಾಗಿವೆ. ಮಣ್ಣು ಮತ್ತು ಎತ್ತುಗಳಿಗೆ ಗೌರವ ಸಲ್ಲಿಸುವುದು ಮಣ್ಣೆತ್ತಿನ ಅಮವಾಸ್ಯೆ ಮುಂಗಾರಿನ ಹಬ್ಬವಾಗಿದೆ ಎಂದು ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ ಪಾಟೀಲ್ ಹೇಳಿದರು. ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ ಬುಧವಾರ ಜರುಗಿದ ಶೆಳ್ಳಗಿ ಗ್ರಾಮದ ವೃತ್ತಿ ಕುಂಬಾರರಾದ ಬಸವರಾಜ ಕುಂಬಾರ ಅವರಿಗೆ ಸತ್ಕಾರ, ಮಣ್ಣೆತ್ತುಗಳಿಗೆ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸತ್ಕರಿಸಿ ಮಾತನಾಡಿದ ಅವರು, ರೈತ […]

Continue Reading

ವಿಧವೆಯರ ಬಗ್ಗೆ ಉತ್ತಮ ಮನೋಭಾವನೆ ಅಗತ್ಯ

ಕಲಬುರಗಿ: ಉತ್ತಮ ಮನೋಭಾವನೆಯಿಂದ ಗೌರವಿಸಿ, ನೆಮ್ಮದಿಯಿಂದ ಬದುಕಲು ಅನವು ಮಾಡಿಕೊಡುವುದು ಜವಾಬ್ದಾರಿಯುತ ಸಮಾಜದ ಆದ್ಯ ಕರ್ತವ್ಯವಾಗಿದೆ ಎಂದು ಉಪನ್ಯಾಸಕ, ಪ್ರಗತಿಪರ ಚಿಂತಕ ಎಚ್.ಬಿ ಪಾಟೀಲ್ ಆಶಯ ವ್ಯಕ್ತಪಡಿಸಿದರು. ನಗರದ ಹೊರವಲಯದ ರಾಣೆಸ್ಪಿರ್ ದರ್ಗಾ ರಸ್ತೆಯ ನೆಮ್ಮದಿ ಹಿರಿಯರ ಮನೆ(ವೃದ್ಧಾಶ್ರಮ)’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗದಿಂದ ಮಂಗಳವಾರ ಸಂಜೆ ಜರುಗಿದ ‘ಅಂತಾರಾಷ್ಟ ವಿಧವೆಯರ ದಿನಾಚರಣೆ’ ವಿಧವಾ ತಾಯಂದಿರಿಗೆ ಗೌರವಿಸಿ, ನಂತರ ಮಾತನಾಡಿದ ಅವರು, ಯಾವುದೆ ಮಹಿಳೆಯು ತನ್ನ ಪತಿ ಕಳೆದುಕೊಂಡು ವಿಧವೆಯಾಗಬೇಕು ಎಂದು ಎಂದಿಗೂ ಕೂಡಾ ಬಯಸುವುದಿಲ್ಲ. ಕಾರಣಾಂತರಗಳಿಂದ […]

Continue Reading

ವಾಡಿ: ಬಿಜೆಪಿ ಕಛೇರಿಯಲ್ಲಿ ಜ್ಯೋಶಿ ಮುಖರ್ಜಿ ಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜನಸಂಘದ ಸಂಸ್ಥಾಪಕ ಜಗನ್ನಾಥ ಜ್ಯೋಶಿ ಅವರ ಜನ್ಮದಿನಾಚರಣೆ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದ ನಿಮಿತ್ಯ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ನಿಸ್ವಾರ್ಥ ದೇಶ ಸೇವೆಯನ್ನು ಬಿಜೆಪಿ ಮುಖಂಡರು ಸ್ಮರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ಜಗನ್ನಾಥರಾವ್ ಜೋಶಿ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಜನಸಂಘದ ಕಾಲದಿಂದ ಪಕ್ಷದ ಬೆಳವಣಿಗೆಗೆ ಕಾರಣಿಕರ್ತರು ಎಂದರು. ಜ್ಯೋಶಿ […]

Continue Reading

ಮೋದಿ ಆಡಳಿತಕ್ಕೆ 11 ವರ್ಷ: ಬಿಜೆಪಿ ಮುಖಂಡರ ಸಂಭ್ರಮ

ವಾಡಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್’ಡಿಎ ಮೈತ್ರಿಕೂಟದ 11 ವರ್ಷ ಆಡಳಿತದ ಸಾಧನೆಯನ್ನು ನೆನೆದ ಬಿಜೆಪಿ ಮುಖಂಡರು ಪಕ್ಷದ ಕಛೇರಿಯ ಆವರಣದಲ್ಲಿ ಸಸಿ ನೆಟ್ಟು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಜಗತ್ತು ಮೆಚ್ಚಿದ ವಿಶ್ವನಾಯಕ, ದಣಿವರಿಯದೆ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ, ದಕ್ಷ ಆಡಳಿತಗಾರ, ಸಮರ್ಥ ನಾಯಕತ್ವ, ಸ್ಪಂದನಶೀಲ ಪ್ರಧಾನಿಯಾಗಿ 11 ವರ್ಷ ಪೂರೈಸಿದ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮೆಲ್ಲರಿಂದ ಅಭಿನಂದನೆಗಳು. 2014ರ ಮೇ 26ರಂದು ಪ್ರಧಾನಿಯಾಗಿ […]

Continue Reading

ರಾವೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಚಿತ್ತಾಪುರ: ಸಮೀಪದ ರಾವೂರ ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವರಾಜ್ ಸಿದ್ದರಾಮಪ್ಪ ಅಳೊಳ್ಳಿ, ಉಪಾಧ್ಯಕ್ಷರಾಗಿ ಬಸವರಾಜ್ ಹಿರಣ್ಣ ಹಾಲಿನೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾದ ಸುರೇಶ್ ಬೆಳ್ಳಗೋಳ, ದತ್ತಾತ್ರೇಯ ಕಾಳೆಕರ್, ಭೀಮಣ್ಣ ಕೆಸಬಳ್ಳಿ, ಸಿದ್ದು ಗೋಗಿ, ಸರಸ್ವತಿ ಬಿ ಜಡಿ, ಮಲ್ಲಮ್ಮ ಯರಗಲ್, ಬಾಹುಬಲಿ ಜೈನ್, ವಿಜಯ್ ಕುಮಾರ್ ಗುದಗಲ್, ರಾಯಪ್ಪ ತಳವಾರ್ ಯರಗಲ್, ಹನುಮಂತರಾಯ ವಂತಟ್ಟಿ ಗಾಂಧಿನಗರ ಉಪಸ್ಥಿತರಿದ್ದರು. ಫಲಿತಾಂಶ ಹೊರಬೀಳುತ್ತಿದ್ದಂತೆ ರಾವೂರ ಗ್ರಾಮದ ಮುಖಂಡರು, ಕಾರ್ಯಕರ್ತರು‌ ಮತ್ತು ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಆಯ್ಕೆಯಾದ […]

Continue Reading

ಕನ್ನಡ ಮತ್ತು ಶರಣ ಸಾಹಿತ್ಯಕ್ಕೆ ಜಯದೇವಿ ತಾಯಿ ಲಿಗಾಡೆ ಕೊಡುಗೆ ಅನನ್ಯ: ಎಚ್.ಬಿ ಪಾಟೀಲ

ಕಲಬುರಗಿ: ಕರ್ನಾಟಕದ ಗಡಿ ಭಾಗದಲ್ಲಿನ ಮರಾಠಿ ಪ್ರಾಬಲ್ಯದಿಂದ ಕನ್ನಡ ಉಳಿಸಿ, ಬೆಳೆಸುವಲ್ಲಿ ಮತ್ತು ಶರಣ ಸಾಹಿತ್ಯದ ರಕ್ಷಕರಾಗಿ ತಮ್ಮದೆಯಾದ ಅಮೂಲ್ಯ ಕೊಡುಗೆ ಶರಣೆ ಜಯದೇವಿ ತಾಯಿ ಲಿಗಾಡೆಯವರು ನೀಡಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಶರಣೆ ಜಯದೇವಿ ತಾಯಿ ಲಿಗಾಡೆಯವರ 113ನೇ ಜಯಂತಿ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಆಧ್ಯಾತ್ಮ ಚಿಂತಕಿ, […]

Continue Reading