ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜನಸಂಘದ ಸಂಸ್ಥಾಪಕ ಜಗನ್ನಾಥ ಜ್ಯೋಶಿ ಅವರ ಜನ್ಮದಿನಾಚರಣೆ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದ ನಿಮಿತ್ಯ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ನಿಸ್ವಾರ್ಥ ದೇಶ ಸೇವೆಯನ್ನು ಬಿಜೆಪಿ ಮುಖಂಡರು ಸ್ಮರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ಜಗನ್ನಾಥರಾವ್ ಜೋಶಿ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಜನಸಂಘದ ಕಾಲದಿಂದ ಪಕ್ಷದ ಬೆಳವಣಿಗೆಗೆ ಕಾರಣಿಕರ್ತರು ಎಂದರು.
ಜ್ಯೋಶಿ ಅವರು ಜನಸಂಘದ ಕಾಲದಲ್ಲಿ ಕರ್ನಾಟಕದವರಾದರೂ ಮಧ್ಯಪ್ರದೇಶದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಸಂಘಟನೆ ಬಲಪಡಿಸಲು ಅವರು ಕರ್ನಾಟಕದ ಜಿಲ್ಲೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದರು, ಅವರ ಜೀವನ ಶೈಲಿಯನ್ನು ನಾವಿಂದು ಮೆಲುಕು ಹಾಕಿಕೊಳ್ಳಬೇಕು. ಇಂತಹ ಮಹಾನ ನಾಯಕರ ನಿಸ್ವಾರ್ಥ ಕಾರ್ಯದ ಮಾದರಿಯನ್ನು ನಾವು ಅಳವಡಿಸಿಕೊಳ್ಳಬೇಕು. ಅವರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದರು.
ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಶ್ಯಾಮ್ ಪ್ರಸಾದ್ ಮುಖರ್ಜಿ ಅವರಂತಹ ಮಹಾನ್ ವ್ಯಕ್ತಿಗಳ ಆದರ್ಶ, ಸಾಮಾಜಿಕ ಕಳಕಳಿ ನಮಗೆ ಪ್ರೇರಣೆ ದೇಶದ ಪ್ರಗತಿಗೆ ಶ್ರಮಿಸಿದ ಮುಖರ್ಜಿ ಅವರು ಯುವ ಸಮೂಹಕ್ಕೆ ರಾಷ್ಟ್ರ ಪ್ರೇಮದ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಮುಖರ್ಜಿ ಅವರ ಭಾರತೀಯ ಜನಸಂಘ ಪಕ್ಷವೆ ಇಂದಿನ ಭಾರತೀಯ ಜನತಾ ಪಾರ್ಟಿಯಾಗಿ ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಸೇವೆ ಸಲ್ಲಿಸುತ್ತಿದೆ ಅದರ ಒಂದು ಭಾಗವಾದ ನಮಗೆ ಹೆಮ್ಮೆಯ ವಿಷಯ ಎಂದರು.
ಕರ್ನಾಟಕದಲ್ಲಿ ಜನಸಂಘ ಮತ್ತು ಭಾರತೀಯ ಜನತಾ ಪಕ್ಷ ಕಟ್ಟಿ ಬೆಳೆಸುವುದರಲ್ಲಿ, ಜಗನ್ನಾಥರಾವ್ ಜೋಶಿ ಅವರು ಬಹಳ ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿ ಮತ್ತು ಜನಸಂಘದ ವಿಚಾರಗಳನ್ನು ಸಾರ್ವತ್ರಿಕವಾಗಿ ಜೋಶಿಯವರು ತಿಳಿಸಿದ್ದಾರೆ. ಅವರು ಭದ್ರ ಬುನಾದಿ ಹಾಕಿದ್ದರಿಂದ ಬಿಜೆಪಿ ಕರ್ನಾಟಕದಲ್ಲಿ ನಮ್ಮಂತ ಕಾರ್ಯಕರ್ತರ ಮನದಲ್ಲಿ ಮನೆಮಾಡಿದೆ. ಅದರ ಶ್ರೇಯಸ್ಸು ಜಗನ್ನಾಥರಾವ್ ಜೋಶಿ ಅವರಿಗೆ ಸಲ್ಲುತ್ತದೆ ಎಂದರು...ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ವಾಲ್ಮೀಕ ನಾಯಕ, ಪುರಸಭೆ ವಿರೋಧ ಪಕ್ಷದ ನಾಯಕ ಭೀಮಶಾ ಜೀರೋಳ್ಳಿ, ಎಸ್’ಸಿ ಮೋರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಯುವ ಮೋರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಅರ್ಜುನ ಕಾಳೆಕರ, ಹರಿ ಗಲಾಂಡೆ, ಅಂಬದಾಸ ಜಾಧವ, ಭುಜಂಗರಾವ ಕುಲಕರ್ಣಿ, ಕಾಶಿನಾಥ ಶೆಟಗಾರ, ಮಲ್ಲಿಕಾರ್ಜುನ ಸಾತಖೇಡ, ವಿಶ್ವರಾಧ್ಯ ತಳವಾರ, ಅಮಿತ ರಾಠೊಡ, ಪ್ರಭಾಕರ ಪಂಚಾಳ, ಯಂಕಮ್ಮ ಗೌಡಗಾಂವ, ಉಮಾಭಾಯಿ ಗೌಳಿ, ಶರಣಮ್ಮ ಯಾದಗಿರಿ, ಪುರಂದರ ದಾಸ, ಶಂಕರ ಮದ್ರಾಸಿ, ಬಸವರಾಜ ಸೇರಿದಂತೆ ಅನೇಕರು ಇದ್ದರು.