ವಾಡಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್’ಡಿಎ ಮೈತ್ರಿಕೂಟದ 11 ವರ್ಷ ಆಡಳಿತದ ಸಾಧನೆಯನ್ನು ನೆನೆದ ಬಿಜೆಪಿ ಮುಖಂಡರು ಪಕ್ಷದ ಕಛೇರಿಯ ಆವರಣದಲ್ಲಿ ಸಸಿ ನೆಟ್ಟು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಜಗತ್ತು ಮೆಚ್ಚಿದ ವಿಶ್ವನಾಯಕ, ದಣಿವರಿಯದೆ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ, ದಕ್ಷ ಆಡಳಿತಗಾರ, ಸಮರ್ಥ ನಾಯಕತ್ವ, ಸ್ಪಂದನಶೀಲ ಪ್ರಧಾನಿಯಾಗಿ 11 ವರ್ಷ ಪೂರೈಸಿದ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮೆಲ್ಲರಿಂದ ಅಭಿನಂದನೆಗಳು.
2014ರ ಮೇ 26ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತ ಸಾಮಾಜಿಕ, ಆರ್ಥಿಕ, ಮೂಲಸೌಕರ್ಯ, ರಕ್ಷಣೆ, ಔದ್ಯೋಗಿಕ, ಶೈಕ್ಷಣಿಕ, ವಿದೇಶಾಂಗ ಕ್ಷೇತ್ರಗಳಲ್ಲಿ ಅನೇಕ ರೀತಿಯ ಬದಲಾವಣೆ, ಯೋಜನೆಗಳು ತರುವ ಮೂಲಕ ಭಾರತ ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡಿದ್ದಾರೆ. ತಮ್ಮ ದಕ್ಷ ಹಾಗೂ ಸಮರ್ಥ ನಾಯಕತ್ವದಲ್ಲಿ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವನ್ನಾಗಿಸಿ, ವಿಕಸಿತ ಭಾರತದ ಸಂಕಲ್ಪಿತ ಗುರಿಗೆ ಶೀಘ್ರ ತಲುಪುವ ಅಚಲ ವಿಶ್ವಾಸ ನಮ್ಮೆಲ್ಲರಲ್ಲಿದೆ ಮೂಡಿದೆ ಎಂದರು.
ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ ವಾಲ್ಮೀಕ ನಾಯಕ, ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ಪುರಸಭೆ ವಿರೋಧ ಪಕ್ಷದ ನಾಯಕ ಭೀಮಶಾ ಜೀರೋಳ್ಳಿ, ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಅರ್ಜುನ ಕಾಳೆಕರ, ಹರಿ ಗಲಾಂಡೆ, ಅಂಬದಾಸ ಜಾಧವ, ಭುಜಂಗರಾವ ಕುಲಕರ್ಣಿ, ಕಾಶಿನಾಥ ಶೆಟಗಾರ, ಮಲ್ಲಿಕಾರ್ಜುನ ಸಾತಖೇಡ, ವಿಶ್ವರಾಧ್ಯ ತಳವಾರ, ಅಮಿತ ರಾಠೊಡ, ರವಿ ಸಿಂದಗಿ,
ಪ್ರಭಾಕರ ಪಂಚಾಳ, ಯಂಕಮ್ಮ ಗೌಡಗಾಂವ, ಉಮಾಭಾಯಿ ಗೌಳಿ, ಶರಣಮ್ಮ ಯಾದಗಿರಿ, ಪುರಂದರ ದಾಸ, ಶಂಕರ ಮದ್ರಾಸಿ, ಬಸವರಾಜ ಸೇರಿದಂತೆ ಅನೇಕರು ಇದ್ದರು.