ಕೊಲೆಯತ್ನ ಆರೋಪ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅರೆಸ್ಟ್

ಕಲಬುರಗಿ: ಕೊಲೆಯತ್ನ ಆರೋಪದಡಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ನೆಲೋಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಬಳಿ ಮಣಿಕಂಠ ರಾಠೋಡ ಅವರನ್ನು ಬಂಧಿಸಲಾಗಿದೆ. ಗುರುವಾರ ತಡರಾತ್ರಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಾಟಿ ಔಷಧಿ ಕೊಡುತ್ತಿದ್ದ ರಶೀದ್ ಮುತ್ಯಾ ಬಂಧನಕ್ಕೆ ಮಣಿಕಂಠ ರಾಠೋಡ ಆಗ್ರಹಿಸಿದ್ದರು. ಅಲ್ಲದೆ ಬೆಂಬಲಿಗರೊಂದಿಗೆ ಗ್ರಾಮಕ್ಕೆ ತೆರಳಿ ದೊಡ್ಡ ಹೈಡ್ರಾಮ ಕ್ರಿಯೇಟ್ ಮಾಡಿದ್ದರು. ಈ ವೇಳೆ ರಶೀದ್ ಮುತ್ಯಾ ಕಾರು ಚಾಲಕನ […]

Continue Reading

ನ.29, 30ರಂದು 46ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ

ಕಲಬುರಗಿ: ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕಾಯಕಭೂಮಿ ಬಸವಕಲ್ಯಾಣದ ಅನುಭವ ಮಂಟಪ ಆವರಣದಲ್ಲಿ ನ.29 ಮತ್ತು 30ರಂದು ಎರಡು ದಿನಗಳ ಕಾಲ 46ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಜರುಗಲಿದೆ ಎಂದು ನಿವೃತ್ತ ಉಪನ್ಯಾಸಕ ಷಣ್ಮುಖಯ್ಯ ಹಿರೇಮಠ ತಿಳಿಸಿದರು. ನಗರದ ಪ್ರಭುದೇವ ನಗರದ ನೀಲಕಂಠೇಶ್ವರ ಶಾಲೆಯ ಆವರಣದಲ್ಲಿ ಗುರುವಾರ ಸಂಜೆ ಜರುಗಿದ ಉತ್ಸವದ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನ ಗಾಯನ, ಅನುಭವ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಸಾಮೂಹಿಕ ಇಷ್ಟಲಿಂಗ ಪೂಜೆ […]

Continue Reading

ಯುವಕನ ಮೇಲೆ ಹಲ್ಲೆ: ಇನ್‌ಸ್ಪೆಕ್ಟರ್‌ ವಿರುದ್ಧ FIR ದಾಖಲಿಸಲು ಹೈಕೋರ್ಟ್‌ ಆದೇಶ

ಬೆಂಗಳೂರು: ಯುವಕನೊಬ್ಬನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಡೂರು ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್‌ ಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕು ಎಂದು ಹೈಕೋರ್ಟ್‌, ಬಳ್ಳಾರಿ ಜಿಲ್ಲಾ ಎಸ್‌ಪಿಗೆ ಆದೇಶಿಸಿದೆ. ನನ್ನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಸಂಡೂರು ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಮಹೇಶ್‌ ಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಬಳ್ಳಾರಿಯ ಕೋಳೂರು ಗ್ರಾಮದ ವಿ.ವಿವೇಕಾನಂದ (25) ಸಲ್ಲಿಸಿದ್ದ […]

Continue Reading

ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧಾರ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಹಲವು ವರ್ಷಗಳಿಂದ ನಾನು ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹಾಗೆಯೆ ಈ ವರ್ಷವೂ ಕೂಡ ನನ್ನ ಹುಟ್ಟು ಹಬ್ಬದ ಆಚರಣೆಯಿಂದ ದೂರವಿರಲು ನಿರ್ಧರಿಸಿದ್ದೆನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಹುಟ್ಟು ಹಬ್ಬ ಎಲ್ಲರ ಪಾಲಿಗೆ ಸಂಭ್ರಮದ ದಿನ, ಪ್ರತಿ ವರ್ಷವೂ ಹೊಸ ಅನುಭವ, ಹೊಸ ಕಲಿಕೆಯನ್ನು, ನಮ್ಮ ಜೀವನದ ಮಜಲನ್ನು, ಸಾರ್ಥಕತೆಯನ್ನು ಒರೆಗೆ ಹಚ್ಚುವ ಹಾಗೂ ನಮ್ಮವರೊಂದಿಗೆ ಆನಂದಿಸುವ ದಿನವೂ ಹೌದು. ಹಿಂದಿನಂತೆ […]

Continue Reading

ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಇರಲಿ ವಿಶೇಷ ಕಾಳಜಿ: ಡಾ.ರಾಜಶೇಖರ ಪಾಟೀಲ

ಕಲಬುರಗಿ: ಇತ್ತೀಚಿಗೆ ಜಿಲ್ಲೆಯಲ್ಲಿ ವ್ಯಾಪಕವಾದ ಚಳಿ ಪ್ರಾರಂಭವಾಗಿದ್ದು, ಜಿಲ್ಲಾಡಳಿತ ನ‌.20ರವರೆಗೆ ಶೀತ ಅಲೆ ಘೋಷಸಿದೆ. ಈಗ ವಾತಾವರಣದಲ್ಲಿನ ಉಷ್ಣಾಂಶ ಕಡಿಮೆಯಾಗಿರುವುದರಿಂದ ತಂಪಾದ ವಾತಾವರಣ ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ದೇಹಕ್ಕೆ ವಿವಿಧ ರೀತಿಯ ತೊಂದರೆಗಳಾಗುತ್ತವೆ. ಆದ್ದರಿಂದ ಮುಂಜಾಗ್ರತೆ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ್ ಸಲಹೆ ನೀಡಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ಬಸವಗಂಗಾ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಸಂಜೆ ಜರುಗಿದ ‘ಚಳಿಗಾಲದ ಮುಂಜಾಗೃತಾ ಕ್ರಮಗಳು […]

Continue Reading

ಸ್ವಚ್ಚ ಪರಿಸರ ನಿರ್ಮಾಣದಲ್ಲಿ ಶೌಚಾಲಯಗಳ ಪಾತ್ರ ಪ್ರಮುಖ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ಬಯಲು ಶೌಚಕ್ಕೆ ತೆರಳದೆ, ಶೌಚಾಲಯ ನಿರ್ಮಿಸಿಕೊಂಡು ಬಳಸಬೇಕು. ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳು ತಡೆಗಟ್ಟಬಹುದು. ನೈರ್ಮಲ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ, ಸ್ವಚ್ಚ ಪರಿಸರ ನಿರ್ಮಾಣದಲ್ಲಿ ಶೌಚಾಲಯಗಳ ಪಾತ್ರ ಪ್ರಮುಖವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಬೆಳಿಗ್ಗೆ ಜರುಗಿದ ‘ವಿಶ್ವ ಶೌಚಾಲಯ(ನೌರ್ಮಲ್ಯ) ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ವೈಯಕ್ತಿಕ ಸ್ವಚ್ಛತೆ, ವಾಸಸ್ಥಳದ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯ […]

Continue Reading

ವಿಧಾನಸೌಧದ ಮುಂದೆಯೆ ಡಕಾಯಿತಿ: ಹಲ್ಲೆ ನಡೆಸಿ ಹಣ, ಮೊಬೈಲ್‌ ಕಸಿದು ಪರಾರಿ

ಬೆಂಗಳೂರು: ವಿಧಾನಸೌಧದ ಮುಂದೆಯೇ ಡಕಾಯಿತಿ ನಡೆದಿದೆ. ಲೈಟಿಂಗ್ಸ್‌ ನೋಡಲು ಬಂದವರ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್‌ ಕಸಿದು ಪರಾರಿಯಾಗಿದ್ದಾರೆ. ಐದರಿಂದ ಆರು ಜನ ಆರೋಪಿಗಳಿಂದ ಡಕಾಯಿತಿ ನಡೆದಿದೆ. ಅಣ್ಣ-ತಮ್ಮ ಇಬ್ಬರೂ ಸಿನಿಮಾ ನೋಡಿ ವಿಧಾನಸೌಧದ ಲೈಟಿಂಗ್ ನೋಡಲು ಬಂದಿದ್ದರು. ಈ ವೇಳೆ ಹೈಕೋರ್ಟ್ ಮುಂಭಾಗ ಇರುವ ಮೆಟ್ರೋ ನಿಲ್ದಾಣದ ಮುಂದೆ ಡಕಾಯಿತಿ ನಡೆದಿದೆ. ಬಿಮಲ್ ಗಿರಿ ಎಂಬಾತನಿಗೆ ಹಲ್ಲೆ ನಡೆಸಿ ಡಕಾಯಿತಿ ಮಾಡಲಾಗಿದೆ. ಮೊದಲಿಗೆ ನಮ್ಮನ್ನು ಹಿಡಿದುಕೊಂಡು ಬೆದರಿಕೆ ಹಾಕಿ ಹಲ್ಲೆ ನಡೆಸಿದರು. ಬಳಿಕ ನಮ್ಮ […]

Continue Reading

TwitterDown – ಜಗತ್ತಿನಾದ್ಯಂತ ಬಳಕೆದಾರರಿಗೆ ಸಮಸ್ಯೆ

ವಾಷಿಂಗ್ಟನ್‌/ನವದೆಹಲಿ: ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಪ್ರಭಾವಶಾಲಿ ಸೋಷಿಯಲ್‌ ಮೀಡಿಯಾ ವೇದಿಕೆಯಾದ ಎಕ್ಸ್‌ ಖಾತೆ ಸುಮಾರು ಕಳೆದ 1 ಗಂಟೆಯಿಂದ ಸ್ಥಗಿತಗೊಂಡಿದೆ. ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿದ ಪೋಸ್ಟ್‌ಗಳನ್ನು ನೋಡುವುದಕ್ಕಾಗಲಿ ಅಥವಾ ಹೊಸ ಟ್ವೀಟ್‌ಗಳನ್ನು ಅಪ್‌ಲೋಡ್ ಮಾಡುವುದಕ್ಕಾಗಲಿ ಸಾಧ್ಯವಾಗುತ್ತಿಲ್ಲ. ಯಾರ ಖಾತೆಯನ್ನ ಸರ್ಚ್‌ ಮಾಡಿದ್ರೂ ರೀಟ್ರೈ (ಇಂಗ್ಲಿಷ್‌ನಲ್ಲಿ) ಎಂದೆ ತೋರಿಸುತ್ತಿದೆ. ಟ್ವಿಟರ್‌ ಎಂದು ಕರೆಯಲಾಗುತ್ತಿದ್ದ ʻಎಕ್ಸ್‌ʼ ಅಷ್ಟೇ ಅಲ್ಲದೆ ಚಾಟ್‌ ಜಿಪಿಟಿಯಲ್ಲೂ ಜಾಗತಿಕವಾಗಿ ಸಮಸ್ಯೆ ಕಾಣಿಸಿಕೊಂಡಿದೆ. ಡೌನ್ ಡಿಟೆಕ್ಟರ್ (Downdetector) ಟ್ರ್ಯಾಕಿಂಗ್ ವೆಬ್‌ಸೈಟ್‌‌ ಸಹ ಸ್ಥಗಿತಗೊಂಡಿದೆ. ಕ್ಲೌಡ್‌ಫ್ಲೇರ್‌ನಲ್ಲಿ […]

Continue Reading

ಹೈವೆಯಲ್ಲಿ ಅಡ್ಡಾದಿಡ್ಡಿ ಸ್ಕೂಟಿ ಚಾಲನೆ: ಪ್ರಶ್ನಿಸಿದವರಿಗೆ ಚಾಕು ಇರಿದ ಲೇಡಿ ಟೆಕ್ಕಿ

ಚಿಕ್ಕಬಳ್ಳಾಪುರ: ಹೈವೆಯಲ್ಲಿ ಮಹಿಳಾ ಟೆಕ್ಕಿಯೊಬ್ಬಳು ಅಡ್ಡಾದಿಡ್ಡಿ ಸ್ಕೂಟಿ ಚಾಲನೆ ಮಾಡುತ್ತಿದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಬೈಕ್‌ ಸವಾರರಿಗೆ ಚಾಕು ಇರಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಬೈಕ್ ಸವಾರರಿಗೆ ಚಾಕು ಇರಿದ ಮಹಿಳಾ ಟೆಕ್ಕಿಯನ್ನು ಬಿಹಾರ ಮೂಲದ ರಿಂಬಿಕಾ ಕುಮಾರಿ ಎಂದು ಗುರುತಿಸಲಾಗಿದೆ. ಈಕೆ ತನ್ನ ತಮಿಳುನಾಡು ನೋಂದಣಿಯ ಸ್ಕೂಟಿ ಏರಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಕಡೆಗೆ ಬಂದು ವಾಪಾಸ್ ಬೆಂಗಳೂರಿನತ್ತ ತೆರಳುತ್ತಿದ್ದಳು. ಈ ವೇಳೆ ಬೆಂಗಳೂರು ಹೈದರಾಬಾದ್ ಹೈವೆಯಲ್ಲಿ ಅಡ್ಡಾ ದಿಡ್ಡಿಯಾಗಿ ಸ್ಕೂಟಿ ಒಡಿಸ್ತಾ ಹಿಂದೆ ಬರ್ತಿದ್ದ ಸವಾರರಿಗೆ ಇರುಸು ಮುರುಸು […]

Continue Reading

ಶಹಾಬಾದ: ಭಕ್ತರ ಜಯಘೋಷಗಳ ಮಧ್ಯೆ ಜರುಗಿದ ಮರಗಮ್ಮಾ ದೇವಿಯ ರಥೋತ್ಸವ

ಸುದ್ದಿ ಸಂಗ್ರಹ ಶಹಾಬಾದ ನಗರದ ಜೆಪಿ ಕಾಲೋನಿಯಲ್ಲಿ ಮಂಗಳವಾರ ಆದಿಶಕ್ತಿ ಶ್ರೀ ಮರಗಮ್ಮಾ ದೇವಿಯ 38ನೇ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರ ಜಯ ಘೋಷಗಳ ಮಧ್ಯೆ ರಥೋತ್ಸವ ಜರುಗಿತು. ಬೆಳಿಗ್ಗೆ ಪಲ್ಲಕ್ಕಿ ಮೆರವಣಿಯೊಂದಿಗೆ ಕಾಗಿಣಾ ನದಿಗೆ ಗಾಂಗಾ ಸ್ಥಳಕ್ಕೆ ಪ್ರಯಾಣ ಮಾಡಿ ಗಂಗಾ ಮಾತೆಗೆ ಬಾಗಿಣ ಅರ್ಪಿಸಿ ಮತ್ತು ಶ್ರೀದೇವಿಗೆ ಗಂಗಾಸ್ನಾನ ಮಾಡಲಾಯಿತು. ನಂತರ ಪೂರ್ಣಕುಂಭ, ಮಂಗಳವಾದ್ಯಗಳಿಗೆ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ತಲುಪಿ ಶ್ರೀದೇವಿ ವಿಗ್ರಹಕ್ಕೆ ಜಲಾಭೀಷೇಕ, ಪಂಚಾಮೃತ ಅಭಿಷೇಕ, ರುದ್ರಾಭೀಷೇಕವನ್ನು ನಿಖಿಲ್ ಜೋಶಿ, ಭಾಸ್ಕರ ಜೋಶಿ […]

Continue Reading